ಕನ್ನಡ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡ್ತಾ ಮಾಡ್ತಾ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆದ ನಟ ನವರಸ ನಾಯಕ ಜಗ್ಗೇಶ್. ನಟನೆ, ನಿರ್ದೇಶನ, ಗಾಯನದಲ್ಲಿ ತೊಡಗಿಸಿಕೊಂಡಿದ್ದ ಅವರು ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ನಾಲ್ಕು ದಶಕಗಳನ್ನ ಪೂರೈಸಿದ್ದಾರೆ.
ಇವತ್ತಿಗೂ ಬೇಡಿಕೆ ನಟನಾಗಿರೋ ಜಗ್ಗೇಶ್ ಕಾಮಿಡಿಗೆ, ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಅಭಿಮಾನಿಗಳಿದ್ದಾರೆ. ಹೌದು ಆಸ್ತಿ, ಅಂತಸ್ತು, ಹುದ್ದೆ ಎಂಬ ಅಹಂ ಇಲ್ಲದೆ ಸಕಲ ವರ್ಗಗಳಲ್ಲಿ ಜಗ್ಗೇಶ್‌ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ಇದಕ್ಕೆ ತಾಜಾ ಉದಾಹರಣೆ ತಮಿಳುನಾಡಿನ ಐಎಎಸ್ ಅಧಿಕಾರಿಯೊಬ್ಬರು ಜಗ್ಗೇಶ್ ಬಗ್ಗೆ ಗುಣಗಾನ ಮಾಡಿದ್ದಾರೆ.
-
ಧನ್ಯವಾದ ಅಧಿಕಾರಿ ಮಿತ್ರರಿಗೆ..
— ನವರಸನಾಯಕ ಜಗ್ಗೇಶ್ (@Jaggesh2) October 20, 2021 " class="align-text-top noRightClick twitterSection" data="
ಸಾರ್ಥಕ ಅನ್ನಿಸಿತು ನನ್ನ ಕಲಾ ಬದುಕು...God bless 🙌 pic.twitter.com/qAjhRkc28F
">ಧನ್ಯವಾದ ಅಧಿಕಾರಿ ಮಿತ್ರರಿಗೆ..
— ನವರಸನಾಯಕ ಜಗ್ಗೇಶ್ (@Jaggesh2) October 20, 2021
ಸಾರ್ಥಕ ಅನ್ನಿಸಿತು ನನ್ನ ಕಲಾ ಬದುಕು...God bless 🙌 pic.twitter.com/qAjhRkc28Fಧನ್ಯವಾದ ಅಧಿಕಾರಿ ಮಿತ್ರರಿಗೆ..
— ನವರಸನಾಯಕ ಜಗ್ಗೇಶ್ (@Jaggesh2) October 20, 2021
ಸಾರ್ಥಕ ಅನ್ನಿಸಿತು ನನ್ನ ಕಲಾ ಬದುಕು...God bless 🙌 pic.twitter.com/qAjhRkc28F
ಹೌದು, ತಮಿಳುನಾಡಿನ ತಂಜಾವೂರಿನಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೌಶಿಕ್ ಹೆಚ್.ಆರ್ ಎಂಬ ಐಎಎಸ್ ಅಧಿಕಾರಿ ಜಗ್ಗೇಶ್ ಅವರ ಅಪ್ಪಟ ಅಭಿಮಾನಿಯಂತೆ. ಹೌದು ಈ ಕುರಿತು ಸ್ವತಃ ಅವರೇ ನವರಸನಾಯಕನಿಗೆ ಪತ್ರ ಬರೆದಿದ್ದು, ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚೀನಾಗೆ ಸೆಡ್ಡು ಹೊಡೆಯಲು ಸಜ್ಜು.. ಅರುಣಾಚಲ ಗಡಿಯಲ್ಲಿ ಬೋಫೋರ್ಸ್ ಫಿರಂಗಿಗಳ ನಿಯೋಜನೆ!