ಇಷ್ಟು ದಿನ ಅನಾಮಧೇಯ ಇನ್ಸ್ಟಾಗ್ರಾಮ್ ಬಳಸುತ್ತಿದ್ದ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಇದೀಗ ತಮ್ಮದೇ ಆದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಇವರಿಗೆ ನಿನ್ನೆಯಷ್ಟೇ ಬ್ಲೂ ಮಾರ್ಕ್ ಸಿಕ್ಕಿದ್ದು, ಸದ್ಯ 1 ಮಿಲಿಯನ್ಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ.
ಕರೀನಾ ತಮ್ಮ ಇನ್ಸ್ಟಾ ಖಾತೆಗೆ ಹೊಸ ಫೋಟೋ ಅಪ್ಲೋಡ್ ಮಾಡಿದ್ದು, ಆ ಚಿತ್ರಕ್ಕೆ ಕಮೆಂಟ್ ಮತ್ತು ಲೈಕ್ಗಳ ಸುರಿಮಳೆಯೇ ಆಗುತ್ತಿದೆ. ಹೌದು, ಮಗ ತೈಮೂರ್ ಕರೀನಾ ಹೆಗಲ ಮೇಲೆ ಮಲಗಿ ವಿಶ್ರಾಂತಿಸುತ್ತಿರುವ ಫೋಟೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋವನ್ನು ಅವಿನಾಶ್ ಗೌರೀಕರ್ ಸಿನಿಮಾವೊಂದರ ಚಿತ್ರೀಕರಣ ವೇಳೆ ಕ್ಯಾಪ್ಚರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಫೋಟೋಗೆ ಒಂದೊಳ್ಳೆ ಕ್ಯಾಪ್ಶನ್ ಕೊಟ್ಟಿರುವ ಬೆಬೊ, ನನ್ನ ಮಗ ನನ್ನ ಜೊತೆ ಯಾವಾಗಲೂ ಇದ್ದೇ ಇರುತ್ತಾನೆ ಎಂದು ಬರೆದಿದ್ದಾರೆ. ಕರೀನಾ ಸ್ನೇಹ ಬಳಗ ಹಾಗೂ ಅಭಿಮಾನಿ ಬಳಗದಿಂದ ಫೋಟೋಗೆ ಭರಪೂರ ಲೈಕ್ಗಳು ಬರ್ತಿವೆ.
ಅಂತೂ ಬ್ಯಾಗ್ನಿಂದ ಬೆಕ್ಕು ಹೊರಕ್ಕೆ ಬಂತು ಎಂದು ಹೇಳುವ ಮೂಲಕ ನಿನ್ನೆ ಇನ್ಸ್ಟಾಗ್ರಾಮ್ಗೆ ಕರೀನಾ ಪದಾರ್ಪಣೆ ಮಾಡಿದ್ದರು.
- " class="align-text-top noRightClick twitterSection" data="
">