ಕನ್ನಡದಲ್ಲಿ ಈವರೆಗೂ ಬಹಳಷ್ಟು ಥ್ರಿಲ್ಲರ್ ಕಥಾವಸ್ತು ಇರುವ ಸಿನಿಮಾಗಳು ತಯಾರಾಗಿವೆ. ಅಂತಹ ಸಿನಿಮಾಗಳು ಇನ್ನೂ ಬರುತ್ತಲೇ ಇವೆ. ಇದೀಗ 'ಮನರೂಪ' ಎಂಬ ಮತ್ತೊಂದು ಸೈಕಲಾಜಿಕಲ್,ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ ಬರುತ್ತಿದೆ.
![Manaroopa](https://etvbharatimages.akamaized.net/etvbharat/prod-images/manaroopa--anusha-rao-and-dileep-kumar-21571452042910-34_1910email_1571452053_3.jpg)
ಐವರು ಸ್ನೇಹಿತರು ಪಶ್ಚಿಮ ಘಟ್ಟದ ಚಾರಣಕ್ಕೆ ತೆರಳ್ತಾರೆ. ಅಲ್ಲಿ ಕರಡಿ ಗುಹೆಯನ್ನು ಹುಡುಕುವುದು ಅವರ ಉದ್ದೇಶವಾಗಿತ್ತೆ. ಈ ಪಯಣದಲ್ಲಿ ಹಳೆಯ ನೆನಪುಗಳು, ಸಂಬಂಧಗಳು ಅವರಿಗೆ ನೆನಪಾಗುತ್ತವೆ. ಕೊನೆಗೆ ಕರಡಿ ಗುಹೆಯಿಂದ ಹೊರಬರಲು ಪರದಾಡುವ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಿರಣ್ ಹೆಗಡೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಎಂಸಿಆರ್ ಬ್ಯಾನರ್ ಮೂಲಕ ಕಿರಣ್ ಹೆಗಡೆ ಅವರೇ ಸಿನಿಮಾಗೆ ಬಂಡವಾಳ ಕೂಡ ಹೂಡಿದ್ದಾರೆ. ದುರ್ಗಮ ಕಣಿವೆ, ಇಳಿಜಾರು, ಬೆಟ್ಟದ ತುದಿ, ನದಿದಂಡೆ, ಕಾಡು ಸೇರಿ ಬಹಳ ಅಪಾಯದ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆಯಂತೆ. ಸುಮಾರು ಶೇ.90 ರಷ್ಟು ಚಿತ್ರೀಕರಣ ಅರಣ್ಯ ಪ್ರದೇಶದಲ್ಲಿ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
![Manaroopa](https://etvbharatimages.akamaized.net/etvbharat/prod-images/manaroopa--anusha-rao-and-dileep-kumar-i1571452042909-77_1910email_1571452053_585.jpg)
ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ.ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ದಾರ್ಥ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸರವಣ ಸಂಗೀತ, ಹುಲಿವಾನ್ ನಾಗರಾಜ್ ಶಬ್ಧಗ್ರಹಣ, ಮಹಾಬಲ ಸೀತಾಳಬಾವಿ ಸಂಭಾಷಣೆ ಈ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರಲಿದೆ.
![Manaroopa](https://etvbharatimages.akamaized.net/etvbharat/prod-images/manaroopa--nisha-b-r1571452042911-50_1910email_1571452053_211.jpg)