ಕೆಲ ನಟರು ಸಿಲ್ವರ್ ಸ್ಕ್ರೀನ್ ಮೇಲೆ ಮಾತ್ರ ರಿಯಲ್ ಹೀರೋಗಳು ಆಗಿರೋಲ್ಲ, ತೆರೆ ಹಿಂದೆಯೂ ಸೂಪರ್ ಹೀರೋಗಳು ಆಗಿರ್ತಾರೆ. ಈ ಮಾತನ್ನ ಕಿಚ್ಚ ಸುದೀಪ್ ಆಗಾಗ್ಗೆ ನಿಜ ಮಾಡ್ತಾನೇ ಇರ್ತಾರೆ. ಆದರೆ ಈ ಬಾರಿ ತನ್ನನ್ನ ಸದಾ ಕಾಪಾಡುವ ಬಾಡಿಗಾರ್ಡ್ಗೆ ಮಕರ ಸಂಕ್ರಾಂತಿ ಹಬ್ಬದ ದಿನದಂದು ಸರ್ಪ್ರೈಸ್ ಉಡುಗೊರೆ ಕೊಟ್ಟು ರಿಯಲ್ ಹೀರೋ ಆಗಿದ್ದಾರೆ.
ಹೌದು, ಕಳೆದ ಏಳು ವರ್ಷಗಳಿಂದ ಕಿಚ್ಚನ ಜೊತೆಗೆ ಇದ್ದು ಸದಾ ಕಾಪಾಡುವ ಕೆಲಸ ಮಾಡುತ್ತಿರೋ ಸಾಯಿ ಕಿರಣ್ ಗೆ ಬ್ರ್ಯಾಂಡ್ ನ್ಯೂ ರಾಯಲ್ ಎನ್ಫೀಲ್ಡ್ ಬೈಕ್ ಕೊಡುವ ಮೂಲಕ ತಮ್ಮ ಜೊತೆಗಾರನಿಗೆ ಸರ್ಪ್ರೈಸ್ ನೀಡಿದ್ದಾರೆ. ಅಚ್ಚರಿ ಅಂದರೆ ಕಿರಣ್ ಸಾಯಿ ಬಾಬಾನ ಮಹಾನ್ ಭಕ್ತ. ಈ ಕಾರಣಕ್ಕೆ ಸುದೀಪ್ ಮೊದಲೇ ಪ್ಲಾನ್ ಮಾಡಿ ಗುರುವಾರದಂದು ಈ ಉಡುಗೊರೆ ಕೊಟ್ಟಿರೋದಿಕ್ಕೆ ಸ್ವತಃ ಸಾಯಿ ಕಿರಣ್ ಭಾವುಕರಾಗಿದ್ದಾರೆ.
ಇದು ನನಗೆ ನನ್ನ ದೇವರ ಗಿಫ್ಟ್. ತುಂಬಾ ಎಕ್ಸೈಟ್ ಆಗಿದ್ದೀನಿ. ನಾನು ಇದನ್ನ ಊಹಿಸಿಯೇ ಇರ್ಲಿಲ್ಲ. ನಿಜಕ್ಕೂ ನಾನು ಪುಣ್ಯವಂತ. ಸುದೀಪ್ ಅಣ್ಣನ ಹತ್ತಿರ ನಾನು ಕೆಲಸ ಮಾಡ್ತಿರೋದೇ ನನ್ನ ಭಾಗ್ಯ. ನಾನು ತುಂಬಾ ಲಕ್ಕಿ ಅಂತಾನೇ ಹೇಳ್ತೀನಿ. ಏಳು ವರ್ಷಗಳಿಂದ ಸುದೀಪಣ್ಣನ ಜೊತೆಗಿದ್ದೀನಿ. ಆದ್ರೆ ಅವರ ಮೊದಲ ಸಿನಿಮಾ ಸ್ಪರ್ಶದಿಂದಲೂ ನಾನು ಅವರ ಅಪ್ಪಟ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.