ETV Bharat / sitara

'ರವಿ ಬೋಪಣ್ಣ' ಚಿತ್ರದಲ್ಲಿ ಕ್ರೇಜಿಸ್ಟಾರ್​​ ಜೊತೆಯಾದ್ರು ಲಾಯರ್​​​ ಸುದೀಪ್ - ಹಿರಿಯ ನಟ ರಾಮಕೃಷ್ಣ

ರವಿಚಂದ್ರನ್ ಅಭಿನಯದ 'ರವಿ ಬೋಪಣ್ಣ' ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಲಾಯರ್ ಪಾತ್ರದಲ್ಲಿ ನಟಿಸಿರುವ ಕಿಚ್ಚ ತಮ್ಮ ಭಾಗದ ಚಿತ್ರೀಕರಣವನ್ನು ಎರಡು ದಿನಗಳಲ್ಲಿ ಮುಗಿಸಿಕೊಟ್ಟಿದ್ದಾರೆ.

ರವಿ ಬೋಪಣ್ಣ
author img

By

Published : Aug 19, 2019, 11:47 AM IST

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿ ನಿರ್ದೇಶಿಸುತ್ತಿರುವ 'ರವಿ ಬೋಪಣ್ಣ' ಚಿತ್ರದ ಶೂಟಿಂಗ್ ನಿನ್ನೆಯಿಂದ ಆರಂಭವಾಗಿದೆ. ನಗರದ ಸೆಂಟ್ರಲ್ ಕಾಲೇಜಿನಲ್ಲಿ ಆರಂಭವಾಗಿರುವ ಮೊದಲ ದಿನದ ಶೂಟಿಂಗ್​​​​ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಅಲ್ಲದೆ ಕಿಚ್ಚ ಕರಿಕೋಟು ಧರಿಸಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ.

'ರವಿ ಬೋಪಣ್ಣ' ಚಿತ್ರೀಕರಣ

ತಮ್ಮ ಭಾಗದ ಚಿತ್ರೀಕರಣವನ್ನು ಎರಡು ದಿನಗಳಲ್ಲಿ ಮುಗಿಸಿಕೊಟ್ಟಿದ್ದಾರೆ ಕಿಚ್ಚ. ಶೂಟಿಂಗ್ ಸೆಟ್​​​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕ್ರೇಜಿಸ್ಟಾರ್​ ಸುದೀಪ್, ಅವರ ಪಾತ್ರದ ಬಗ್ಗೆ ವಿವರಿಸಿದರು. ನಾವು ಎಷ್ಟು ಚೆನ್ನಾಗಿ ಚಿತ್ರೀಕರಣ ಮಾಡಿದರೂ ಸುದೀಪ್ ಅವರ ಪಾತ್ರ ಚಿತ್ರದಲ್ಲಿ ಎಂಟ್ರಿ ಆದಾಗಲೇ ಸಿನಿಮಾ ಹೈಲೈಟ್ ಆಗಲಿದೆ. ಚಿತ್ರದ ಕೊನೆಯಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಆದರೆ ಈ ದಿನದ ಶೂಟಿಂಗ್ ಅವರಿಂದಲೇ ಶುರುವಾಗಿದೆ. ಯಾವ ಪಾತ್ರವೇ ಆಗಲಿ ಸುದೀಪ್ ಪರಕಾಯ ಪ್ರವೇಶ ಮಾಡಿ ನಟಿಸುತ್ತಾರೆ. ನನ್ನ ಮೇಲಿನ ಗೌರವಕ್ಕೆ ನನ್ನ ದೊಡ್ಡ ಮಗನಂತಿರುವ ಸುದೀಪ್ ನಾನು ಕರೆದ ತಕ್ಷಣ ಬಂದು ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಕಿಚ್ಚನ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದರು.

Ravi sudeep
ರವಿಚಂದ್ರನ್, ಸುದೀಪ್

ನಂತರ ಮಾತನಾಡಿದ ಸುದೀಪ್ ರವಿ ಸರ್ ಮೇಲಿನ ಗೌರವಕ್ಕೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ಗೌರವವನ್ನು ನಾನು ಖಂಡಿತ ನ್ಯಾಯ ಕೊಡಬೇಕು. ರವಿ ಸರ್ ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೆ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಅವರನ್ನು ನೋಡಿ ನನಗೆ ಬಹಳ ಖುಷಿಯಾಯಿತು ಎಂದು ಹೇಳಿದರು. ಇನ್ನು ಸೆಂಟ್ರಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ನ್ಯಾಯಾಲಯದ ದೃಶ್ಯದ ಚಿತ್ರೀಕರಣದಲ್ಲಿ ರವಿಶಂಕರ್ ಗೌಡ, ಹಿರಿಯ ನಟ ರಾಮಕೃಷ್ಣ, ಜೈಜಗದೀಶ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದರು.

sudeep
ಲಾಯರ್ ಪಾತ್ರದಲ್ಲಿ ಸುದೀಪ್

Intro:ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿ ನಿರ್ದೇಶನ ಮಾಡುತ್ತಿರುವ ರವಿ ಬೋಪಣ್ಣ ಚಿತ್ರದ ಶೂಟಿಂಗ್ ನಿನ್ನೆಯಿಂದ ಶುರುವಾಗಿದೆ. ರವಿ ಬೋಪಣ್ಣ ಚಿತ್ರದ ಶೂಟಿಂಗ್ ಅನ್ನು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶುರುವಾಗಿದ್ದು ಶೂಟಿಂಗ್ ಮೊದಲ ದಿನವೇ ಚಿತ್ರದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ತುಂಬಾ ದಿನಗಳ ನಂತರ ಮತ್ತೆ ಕರಿಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ಕಾಣಿಸಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ರವಿ ಬೋಪಣ್ಣ ಚಿತ್ರದಲ್ಲಿನ ಪಾತ್ರದ ಶೂಟಿಂಗ್ ಅನ್ನು ಎರಡು ದಿನಗಳಲ್ಲಿ ಕಂಪ್ಲೀಟ್ ಮಾಡಿದ್ದಾರೆ.ಇನ್ನೂ ಇಂದು ಚಿತ್ರತಂಡ ಶೂಟಿಂಗ್ ಸೆಟ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದಲ್ಲಿ ಸುದೀಪ್ ಅವರ ಪಾತ್ರದ ಬಗ್ಗೆ ಕ್ರೇಜಿಸ್ಟಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ರು. ಇನ್ನೂ ವಿಶೇಷ ಅಂದ್ರೆ ರವಿ ಬೋಪಣ್ಣ ಚಿತ್ರದಲ್ಲಿ ಮಾತ್ರ ಕಿಚ್ಚ ಸುದೀಪ್ ಕಾಣಿಸಲಿದ್ದಾರೆ.ಅದ್ರೆ ಈಗ ರವಿ ಬೋಪಣ್ಣ ಚಿತ್ರ ಈಗ ಸುದೀಪ್ ಅವರಿಂದಲೇ ಶುರುವಾಗಿದೆ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ತಿಳಿಸಿದ್ರು.

Body:ಅಲ್ಲದೆ ಇಡೀ ಸಿನಿಮಾವನ್ನು ನಾನು ಯಾವುದೇ ರೀತಿ ಶೂಟಿಂಗ್ ಮಾಡಿದರು ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಎಂಟ್ರಿ ಆದಾಗ ಈ ಸಿನಿಮಾ ಹೈಲೈಟ್ ಆಗುತ್ತೆ. ಅಲ್ಲದೆ ಸುದೀಪ್ ಗೆ ಡೈರೆಕ್ಷನ್ ಮಾಡುವುದರಿಂದ ನಮಗೆ ಬರ್ಡನ್ ಇರುವುದಿಲ್ಲ. ಸುದೀಪ್ ಯಾವುದೇ ಪಾತ್ರವಾಗಿರುವ ಅದರ ಒಳಗೆ ಪರಕಾಯ ಪ್ರವೇಶ ಮಾಡಿ ಅಕ್ಟ್ ಮಾಡುತ್ತಾರೆ. ನನ್ನ ಮೇಲಿನ ಗೌರವಕ್ಕೆ ನನ್ನ ದೊಡ್ಡ ಮಗ ಸುದೀಪ್ ನಾನು ಕರೆದ ತಕ್ಷಣ ಬಂದು ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಕಿಚ್ಚನ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದರು. ನಂತರ ಮಾತನಾಡಿದ ಕಿಚ್ಚ ಸುದೀಪ್ ರವಿಚಂದ್ರನ್ ಅವರ ಹೇಳಿದಮೇಲೆ ನಾನು ಬಂದು ಈ ಚಿತ್ರದಲ್ಲಿ ಅಕ್ಟ್ ಮಾಡಿದ್ದೇನೆ.

Conclusion:ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ನಾನು ನ್ಯಾಯ ಕೊಡುತ್ತೇನೆ ಇಲ್ಲವೋ ಗೊತ್ತಿಲ್ಲ, ಆದರೆ ರವಿ ಸರ್ ಅವರು ಇಟ್ಟಿರುವ ಪ್ರೇಮಿಗೆ ನಾನು ನ್ಯಾಯ ಕೊಡಬೇಕು ಅಷ್ಟೇ. ಅಲ್ಲದೆ ಚಿತ್ರದಲ್ಲಿ ಬಹಳ ಪ್ರೀತಿಯಿಂದಲೇ ನನಗೆ ಸಾಕಷ್ಟು ಡೈಲಾಗ್ ಗಳನ್ನು ಕೊಟ್ಟು ಯಾವ ರೀತಿ ಕಷ್ಟ ಕೊಡಬಹುದು ಆ ರೀತಿ ನನಗೆ ಕಷ್ಟ ಕೊಟ್ಟಿದ್ದಾರೆ ಎಂದು ಕಿಚ್ಚ ಸುದೀಪ್ ನಗುತ್ತಲೇ ಉತ್ತರಿಸಿದರು. ಅಲ್ಲದೆ ರವಿ ಬೋಪಣ್ಣ ಚಿತ್ರದ ನಿನ್ನೆಯ ಶೂಟಿಂಗ್ ದಿನ ನನಗೆ ತುಂಬಾ ಮೆಮೋರಿಯಲ್ ಡೇ ಆಗಿದೆ. ರವಿ ಸರ್ ಅವರು ಒಂದು ಕ್ಷಣವೂ ಕುಳಿತುಕೊಳ್ಳದೆ ಅವರು ಮಾಡಿದ ಕೆಲಸವನ್ನು ನೋಡಿದರೆ ನನಗೆ ತುಂಬಾ ಖುಷಿಯಾಯಿತು. ಅಷ್ಟು ವರ್ಷಗಳಿಂದಲೂ ಅವರು ಮಾಡುತ್ತಿರುವ ಕೆಲಸ ನೋಡಿದರೆ ಅವರ ಮೇಲಿನ ಗೌರವ ಕೂಡ ಹೆಚ್ಚಾಗುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದರು. ಇನ್ನು ಸೆಂಟ್ರಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕೋರ್ಟಿನ ಈ ಸೀನಿನಲ್ಲಿ ರವಿಶಂಕರ್ ಗೌಡ ಹಿರಿಯ ನಟ ರಾಮಕೃಷ್ಣ ಜೈಜಗದೀಶ್ ಸೇರಿದಂತೆ ಹಲವು ಕಲಾವಿದರು ರವಿ ಬೋಪಣ್ಣ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.