ETV Bharat / sitara

ಬಿಡುಗಡೆಗೆ ಸಜ್ಜಾದ srikrishna@gmail.com - Srikrishna @ Gmail dotcom film

ಅಕ್ಟೋಬರ್ 14ರಂದು ರಾಜ್ಯಾದ್ಯಂತ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ಮೆನನ್ ಅಭಿನಯದ ಶ್ರೀಕೃಷ್ಣ@ಜಿಮೈಲ್ ಡಾಟ್​ಕಾಮ್​(srikrishna@gmail.com) ಚಿತ್ರ ಬಿಡುಗಡೆಯಾಗಲಿದೆ.

Srikrishna @ Gmail dotcom film will be released on October 14th
ಅ.14ರಂದು ಶ್ರೀಕೃಷ್ಣ@ಜಿಮೈಲ್ ಡಾಟ್​ಕಾಮ್​ ಚಿತ್ರ ಬಿಡುಗಡೆ
author img

By

Published : Sep 18, 2021, 9:57 AM IST

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಇರುವುದರಿಂದ, ದೊಡ್ಡ ಚಿತ್ರಗಳ್ಯಾವು ಕೂಡ ಬಿಡುಗಡೆಯಾಗುತ್ತಿಲ್ಲ. ಇದೇ ಕಾರಣಕ್ಕೆ, ವರಮಹಾಲಕ್ಷ್ಮೀ ಹಬ್ಬಕ್ಕಾಗಲಿ ಗಣೇಶ ಹಬ್ಬಕ್ಕಾಗಲಿ ಯಾವುದೇ ದೊಡ್ಡ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ದಸರಾ ಹಬ್ಬದ ಹೊತ್ತಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದ್ದು, ಒಂದೊಂದೇ ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಬಿಡುಗಡೆಯ ದಿನಾಂಕವನ್ನು ಘೋಷಿಸಿವೆ.

Srikrishna @ Gmail dotcom film will be released on October 14th
ಅ.14ರಂದು ಶ್ರೀಕೃಷ್ಣ@ಜಿಮೈಲ್ ಡಾಟ್​ಕಾಮ್​ ಚಿತ್ರ ಬಿಡುಗಡೆ

ಶ್ರೀಕೃಷ್ಣ@ಜಿಮೈಲ್ ಡಾಟ್​ಕಾಮ್​ ಚಿತ್ರ:

ಈಗಾಗಲೇ ದಸರಾ ಹಬ್ಬಕ್ಕೆ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗುತ್ತದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಘೋಷಿಸಿದ್ದಾರೆ. ಇದೀಗ ಅದರ ಜೊತೆಗೆ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ಮೆನನ್ ಅಭಿನಯದ ಶ್ರೀಕೃಷ್ಣ@ಜಿಮೈಲ್ ಡಾಟ್​ಕಾಮ್​​(srikrishna@gmail.com) ಚಿತ್ರ ಸಹ ಬಿಡುಗಡೆಯಾಗುತ್ತಿದೆ.

ಅಕ್ಟೋಬರ್ 14ರಂದು ಚಿತ್ರ ರಿಲೀಸ್:

ಈ ಬಗ್ಗೆ ಚಿತ್ರ ತಂಡದವರೇ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಅದರಂತೆ ಚಿತ್ರವು ಅಕ್ಟೋಬರ್ 14ರಂದು ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ. ಕ್ರಮೇಣ ಒಂದೊಂದೇ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಖುಷಿಯ ವಿಚಾರ.

ಇದನ್ನೂ ಓದಿ: ಕನ್ನಡಕ್ಕೆ ಮತ್ತೆ ಆರ್​ಜಿವಿ ಎಂಟ್ರಿ.. ರಿಯಲ್ ಸ್ಟಾರ್​ ಚಿತ್ರಕ್ಕೆ ಹೇಳ್ತಾರಾ ಆ್ಯಕ್ಷನ್ ಕಟ್?

ಕನ್ನಡ ಚಿತ್ರರಂಗವು ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಅವಕಾಶಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದೆ. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ಕೊಟ್ಟು ಈಗಾಗಲೇ ಎರಡು ತಿಂಗಳೇ ಕಳೆದಿವೆ.

ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಚಿತ್ರರಂಗದ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿರುವ ಕಾರಣ, ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಡಿ ಎಂದು ಕನ್ನಡ ಚಿತ್ರರಂಗ ಮನವಿ ಮಾಡಿಕೊಳ್ಳುತ್ತಲೇ ಇದ್ದು, ಬಹುಶಃ ಈ ತಿಂಗಳ ಕೊನೆಯ ಹೊತ್ತಿಗೆ ಶೇ. 100ರಷ್ಟು ಹಾಜರಾತಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅನುಮತಿ ಸಿಕ್ಕ ನಂತರ ಮೊದಲು ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗಲಿದ್ದು, ಆ ನಂತರ ಸಲಗ ಮತ್ತು ಭಜರಂಗಿ 2 ಚಿತ್ರಗಳು ಕ್ರಮೇಣವಾಗಿ ತೆರೆಗೆ ಅಪ್ಪಳಿಸಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.