ಬೆಂಗಳೂರು: ಅಂಬಾರಿ, ಅದ್ದೂರಿ ಅಂತಹ ಅದ್ಭುತ ಚಿತ್ರಗಳನ್ನು ಕೊಟ್ಟಿದ್ದ ನಿರ್ದೇಶಕ ಎ.ಪಿ.ಅರ್ಜುನ್ ಈಗ ಕಿಸ್ ಚಿತ್ರದ ಅಮಲಿನಲ್ಲಿದ್ದಾರೆ. ಇನ್ನು ಕಿಸ್ ಚಿತ್ರ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿಯಾಗಿದೆ.
ಅಲ್ಲದೆ ಈಗಾಗಲೇ ಕಿಸ್ ಚಿತ್ರದ ಶೀಲಾ ಸುಶೀಲಾ ಹಾಗೂ 'ನೀನೆ ಮೊದಲು ನೀನೆ ಕೊನೆ..' ಸಾಂಗ್ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಿದೆ. ಇನ್ನು ಇದೇ ಖುಷಿಯಲ್ಲಿದ್ದ ಕಿಸ್ ಚಿತ್ರತಂಡ ಈಗ ಮತ್ತೊಂದ್ ಲಿರಿಕಲ್ ಸಾಂಗ್ಅನ್ನು ಇದೇ ಶುಕ್ರವಾರ ಲಾಂಚ್ ಮಾಡಲು ಪ್ಲಾನ್ ಮಾಡಿದೆ.
ಇನ್ನು ಈ ಹಾಡಿನ ಹೈಲೈಟ್ಸ್ ಅಂದ್ರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಡಿರುವುದು. ಎಸ್.ಹರಿಕೃಷ್ಣ ಸಂಗೀತ, ಅರ್ಜುನ್ ಸಾಹಿತ್ಯದ 'ಬೆಟ್ಟೆಗೌಡ v/s ಚಿಕ್ಕಬೋರಮ್ಮ..' ಎಂಬ ಈ ಹಾಡನ್ನು ಪುನೀತ್ ಹಾಡಿದ್ದಾರೆ. ಇನ್ನು ಅಪ್ಪು ಈ ಹಿಂದೆ ಹಾಡಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು, ಈ ಹಾಡಿಗೂ ಪವರ್ ಸ್ಟಾರ್ ದನಿ ಇರುವ ಕಾರಣ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಇನ್ನು ಕಿಸ್ ಚಿತ್ರದಲ್ಲಿ ನಾಯಕನಾಗಿ ಹೊಸ ನಟ ವಿರಾಟ್, ಮೈಸೂರಿನ ಹುಡುಗಿ ಶ್ರೀಲಿಲಾ ನಾಯಕಿಯಾಗಿ ನಟಿಸಿದ್ದು, ಕಿಸ್ ಚಿತ್ರದ ಮೇಲೆ ಚಿತ್ರತಂಡ ಸಾಕಷ್ಟು ಭರವಸೆ ಇಟ್ಟುಕೊಂಡಿದೆ.