ಚಿತ್ರರಂಗದಿಂದ ಕೆಲವು ವರ್ಷಗಳ ಕಾಲ ವಿರಾಮ ಪಡೆದಿದ್ದ ತಮಿಳು ನಟ ಸಿಲಂಬರಸನ್ 'ಈಶ್ವರನ್' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಚಿತ್ರವನ್ನು ಸುಸಿಂಥಿರನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಹಿಂದೆಯೇ ಸಿಂಬು ವೆಂಕಟ್ ಪ್ರಭು ನಿರ್ದೇಶನದಲ್ಲಿ 'ಮಾನಾಡು' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಸಖತ್ ಹವಾ ಸೃಷ್ಟಿಸಿದೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಶ್ವಾನಗಳ ಪ್ರೀತಿಗೆ ಮನಸೋತ ರಮ್ಯ...ವಿಡಿಯೋ ಹಂಚಿಕೊಂಡ ಮೋಹಕ ತಾರೆ
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಸಿಲಂಬರಸನ್, ಶೂಟಿಂಗ್ ಬ್ಯುಸಿ ಕೆಲಸಗಳ ನಡುವೆಯೂ ವಾರಣಾಸಿಗೆ ತೆರಳಿ ಗಂಗಾ ಪೂಜೆ ಮಾಡಿ ಬಂದಿದ್ದಾರೆ. ಗಂಗಾ ತೀರದಲ್ಲಿ ದೋಣಿಯಲ್ಲಿ ಕುಳಿತು ದೀಪಗಳನ್ನು ನದಿಯಲ್ಲಿ ಹರಿಯಬಿಡುತ್ತಿರುವ ಫೋಟೋಗಳನ್ನು ಸಿಂಬು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮದುವೆಗೆ ಅಡ್ಡಿಯಾಗುತ್ತಿರುವ ಎಲ್ಲಾ ತೊಂದರೆ ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಸಿಂಬು ವಾರಣಾಸಿಗೆ ತೆರಳಿ ಗಂಗಾಪೂಜೆ ಮಾಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. "ಸಿಂಬು ತೆರೆದ ಪುಸ್ತಕ ಇದ್ದಂತೆ, ಎಲ್ಲವನ್ನೂ ನೇರವಾಗಿ ಹೇಳುವ ಅವರು ಈ ಕಾರಣವನ್ನೂ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಉಲ್ಲೇಖಿಸಬಹುದಿತ್ತು" ಎಂದು ನೆಟಿಜನ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ 'ಮಾನಾಡು' ಸಿನಿಮಾ ನಂತರ ಗೌತಮ್ ಮೆನನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಸಿಂಬು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸಿಂಬು ಜೊತೆಗೆ ಗೌತಮ್ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.