ಕೆಜಿಎಫ್, ಕನ್ನಡ ಚಿತ್ರರಂಗದತ್ತ ದೇಶವೇ ತಿರುಗಿ ನೋಡುವಂತೆ ಮಾಡಿದ ಚಿತ್ರ. ಕಳೆದ ವಾರವಷ್ಟೇ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಈ ಸಿನಿಮಾ, ಇದೀಗ ಕತಾರ್ನಲ್ಲಿ ನಡೆದ ಸೈಮಾ ಅವಾರ್ಡ್ಸ್-2019 ಕಾರ್ಯಕ್ರಮದಲ್ಲಿ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಕನ್ನಡ ಚಿತ್ರರಂಗ 2019ನೇ ಸಾಲಿನಲ್ಲಿ 11 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡು ಹೊಸ ಇತಿಹಾಸ ಸೃಷ್ಟಿಸಿತ್ತು. ಇದರಲ್ಲಿ ಕೆಜಿಎಫ್ ಚಿತ್ರದ ಪಾಲೂ ಇತ್ತು. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆಹೊಡೆದಿತ್ತು.
ಅತ್ಯುತ್ತಮ ನಟ, ನಿರ್ದೇಶಕ, ಪೋಷಕ ನಟಿ ಸೇರಿ ಹಲವು ವಿಭಾಗದಲ್ಲಿ ಕೆಜಿಎಪ್ಗೆ ಪ್ರಶಸ್ತಿಗಳು ಲಭಿಸಿವೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಚಿತ್ರತಂಡ, ಇದೊಂದು ದೊಡ್ಡ ಗೆಲುವು. ಈ ಗೆಲುವು ಕರ್ನಾಟಕ ಜನತೆಗೆ ಮತ್ತು ಅಭಿಮಾನಿಗಳಿಗೆ ಸಲ್ಲಬೇಕು ಎಂದು ಹೇಳಿಕೊಂಡಿದೆ.
ಪ್ರಶಸ್ತಿ ವಿಭಾಗ...
- ಅತ್ಯುತ್ತಮ ಚಿತ್ರ- ಕೆಜಿಎಫ್ ಭಾಗ -1
- ಅತ್ಯುತ್ತಮ ನಿರ್ದೇಶಕ- ಪ್ರಶಾಂತ್ ನೀಲ್ (ಕೆಜಿಎಫ್)
- ಅತ್ಯುತ್ತಮ ನಟ- ಯಶ್ (ಕೆಜಿಎಫ್)
- ಅತ್ಯುತ್ತಮ ಸಂಗೀತ ನಿರ್ದೇಶಕ- ರವಿ ಬಸ್ರೂರು (ಕೆಜಿಎಫ್)
- ಅತ್ಯುತ್ತಮ ಛಾಯಾಗ್ರಾಹಕ- ಭುವನ್ ಗೌಡ (ಕೆಜಿಎಫ್)
- ಅತ್ಯುತ್ತಮ ಪೋಷಕ ನಟಿ- ಅರ್ಚನಾ ಜೋಯಿಸ್ (ಕೆಜಿಎಫ್)
- ಅತ್ಯುತ್ತಮ ಪೋಷಕ ನಟ- ಅಚ್ಯುತ್ ಕುಮಾರ್ (ಕೆಜಿಎಫ್)
- ಅತ್ಯುತ್ತಮ ಹಿನ್ನೆಲೆ ಗಾಯಕ- ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಚಿನ್ ಬಸ್ರೂರ್, ಪುನೀತ್ ರುದ್ರನಾಗ್, ಮೋಹನ್, ಹೆಚ್.ಶ್ರೀನಿವಾಸ್ ಮೂರ್ತಿ, ವಿಜಯ್ ಅಸರ್. (ಕೆಜಿಎಫ್)
- ಅತ್ಯುತ್ತಮ ಚೊಚ್ಚಲ ನಟಿ - ಅನುಪಮಾ ಗೌಡ (ಆ ಕರಾಳ ರಾತ್ರಿ)
- ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಮಹೇಶ್ ಕುಮಾರ್ (ಅಯೋಗ್ಯ)
- ಅತ್ಯುತ್ತಮ ವಿಲನ್: ಧನಂಜಯ (ಟಗರು)
- ಅತ್ಯುತ್ತಮ ಹಾಸ್ಯನಟ- ಪ್ರಕಾಶ್ ತುಮಿನಾಡ್ (ಸ.ಹಿ.ಪ್ರಾ. ಶಾಲೆ ಕಾಸರಗೋಡು)
- ಅತ್ಯುತ್ತಮ ಸಾಹಿತ್ಯ; ಚೇತನ್ ಕುಮಾರ್ (ಅಯೋಗ್ಯ- ಏನಮ್ಮಿ ಏನಮ್ಮಿ)
- ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನನ್ಯ ಭಟ್ (ಟಗರು- ಹೋಲ್ಡ್ ಆನ್ ಹೋಲ್ಡ್ ಆನ್)