ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶೀಘ್ರ ಚೇತರಿಸಿಕೊಳ್ಳಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಖ್ಯಾತ ನಟ ರಜನಿಕಾಂತ್, ಕಮಲಹಾಸನ್, ನಿರ್ದೇಶಕ ದ್ವಾರಕೀಶ್, ಸಂಗೀತ ನಿರ್ದೇಶಕ ಇಳಯರಾಜ, ಎ.ಆರ್. ರೆಹಮಾನ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಹಿರಿಯ ನಟಿ ಶ್ರುತಿ ಕೂಡಾ ಎಸ್ಪಿಬಿ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. 'ಕನ್ನಡ ಚಿತ್ರರಂಗದ ಗಾನ ಗಾರುಡಿಗ ನೀವು, ವಿಭಿನ್ನ ಕಂಠದಿಂದಲೇ ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ನೀವು ಬೇಗ ಗುಣಮುಖರಾಗಿ ಮತ್ತೆ ಹಾಡಬೇಕು. ನಮ್ಮೊಂದಿಗೆ ನೀವು ನೂರು ವರ್ಷ ಬಾಳಬೇಕು. ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಕನ್ನಡದ ಕಂಪನ್ನು ಎತ್ತಿ ಹಿಡಿಯಬೇಕು' ಎಂದು ಶ್ರುತಿ ಹಾರೈಸಿದ್ದಾರೆ. ಶ್ರುತಿ ಹಾಗೂ ಎಸ್ಪಿಬಿ ಇಬ್ಬರೂ 'ಮುದ್ದಿನ ಮಾವ' ಚಿತ್ರದಲ್ಲಿ ಅಪ್ಪ-ಮಗಳಾಗಿ ಜೊತೆಗೆ ಅಭಿನಯಿಸಿದ್ದರು.