ಕಾಲಿವುಡ್ ನಟಿ ಶ್ರುತಿ ಹಾಸನ್ ಬಹಳ ದಿನಗಳ ಹಿಂದೆ ತಮ್ಮ ಲವ್ ಬ್ರೇಕಪ್ ಬಗ್ಗೆ ಹೇಳಿಕೊಂಡಿದ್ದರು. ಲಂಡನ್ ಮೂಲದ ರಂಗಭೂಮಿ ಕಲಾವಿದ ಮೈಕಲ್ ಅವರನ್ನು ಶ್ರುತಿ ಹಾಸನ್ ಪ್ರೀತಿಸುತ್ತಿದ್ದರು. ಆದರೆ ಇವರ ನಡುವೆ ಬ್ರೇಕಪ್ ಆದ ನಂತರ ಸ್ವತ: ಮೈಕಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಘೋಷಿಸಿದ್ದರು. ಆದರೆ ಇದೀಗ ಶ್ರುತಿ ಹಾಸನ್ ಮತ್ತೆ ಲವ್ನಲ್ಲಿ ಬಿದ್ದಿರುವಂತೆ ಕಾಣುತ್ತಿದೆ.
ಇತ್ತೀಚೆಗಷ್ಟೇ ಶ್ರುತಿ ಹಾಸನ್ ತಮ್ಮ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚೆನ್ನೈನ ತಮ್ಮ ಮನೆಯಲ್ಲೇ 35ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಶ್ರುತಿ ಹಾಸನ್ ತಮ್ಮ ಆತ್ಮೀಯರನ್ನು ಆಹ್ವಾನಿಸಿದ್ದರು. ಈ ಬರ್ತ್ಡೇ ಪಾರ್ಟಿಗೆ ಸಂಬಂಧಿಸಿದ ಕೆಲವೊಂದು ಫೋಟೋಗಳು ಈಗ ವೈರಲ್ ಆಗುತ್ತಿದೆ. ಅದರಲ್ಲಿ ಒಂದು ವಿಶೇಷ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಪ್ರಮುಖ ಡೂಡಲ್ ಆರ್ಟಿಸ್ಟ್ ಶಾಂತನು ಪೂಜಾರಿಕಾ ಜೊತೆ ಇರುವ ಫೋಟೋ ನೋಡಿ ನೆಟಿಜನ್ಸ್ ಶ್ರುತಿ ಹಾಸನ್ಗೆ ಮತ್ತೆ ಲವ್ ಆಗಿರಬಹುದು ಎನ್ನುತ್ತಿದ್ದಾರೆ. ಈ ಫೋಟೋದಲ್ಲಿ ಶ್ರುತಿ ಹಾಗೂ ಶಾಂತನು ಇಬ್ಬರೂ ಹಗ್ ಮಾಡಿ ನಿಂತಿದ್ದಾರೆ.
ಇದನ್ನೂ ಓದಿ: ಜಾಕಿಚಾನ್ ಫೋಟೋ ಜೊತೆ ಹಳೆಯ ನೆನಪು ಹಂಚಿಕೊಂಡ ದಿಶಾ ಪಟಾನಿ
ಶಾಂತನು ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಲವ್ ಎಮೋಜಿ ಜೊತೆ ಹುಟ್ಟಿದ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. ಟ್ವಿಟ್ಟರ್ನಲ್ಲಿ ಕೂಡಾ ಶ್ರುತಿ ಹಾಸನ್ ಫೋಟೋವನ್ನು ಹಂಚಿಕೊಂಡು ನನ್ನ ರಾಣಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರುತಿ ಹಾಸನ್, ಈ ದಿನವನ್ನು ವಿಶೇಷವಾಗಿ ಮಾಡಿದ್ದಕ್ಕೆ ನಿನಗೆ ಅಭಿನಂದನೆಗಳು ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಇದು ಸ್ನೇಹಾನಾ...ಪ್ರೀತಿನಾ..ಎಂಬ ವಿಚಾರ ಮಾತ್ರ ಇನ್ನೂ ತಿಳಿದುಬಂದಿಲ್ಲ.