ಹೈದರಾಬಾದ್: ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಫೋಟೋಗ್ರಾಫರ್ ರೋಹನ್ ಶ್ರೇಷ್ಠ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಗುಸುಗುಸು ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇದಕ್ಕೆ ಪೂರಕವಾಗುವ ರೀತಿಯಲ್ಲಿ ಇದೀಗ ಮತ್ತಷ್ಟು ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮಾಲ್ಡೀವ್ಸ್ನಲ್ಲಿ ಬಾಯ್ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಶ್ರದ್ಧಾ ಕಪೂರ್ ಇದೀಗ ಅವರೊಂದಿಗೆ ಡಿನ್ನರ್ಗೆ ತೆರಳಿದ್ದು, ವಿಡಿಯೋ ಸೆರೆಯಾಗಿದೆ. ಮುಂಬೈನ ರೆಸ್ಟೋರೆಂಟ್ವೊಂದರಿಂದ ಹೊರಕ್ಕೆ ಬರುತ್ತಿರುವ ದೃಶ್ಯ ಕಂಡು ಬಂದಿದೆ.
ಡಿನ್ನರ್ ಮುಗಿಸಿ ಕಾರಿನ ಕಡೆ ತೆರಳುತ್ತಿದ್ದ ವೇಳೆ ಇಬ್ಬರು ಒಟ್ಟಿಗೆ ಪೋಸ್ ನೀಡಲು ನಿರಾಕರಣೆ ಮಾಡಿದ್ದಾರೆ.