ETV Bharat / sitara

ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡೆದ 'ಶೋಕಿವಾಲ' ಚಿತ್ರತಂಡ - ಶೋಕಿವಾಲ ಚಿತ್ರೀಕರಣ ಮುಕ್ತಾಯ

ಅಜಯ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಶೋಕಿವಾಲ' ಚಿತ್ರೀರಕಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿದೆ. ಅಜಯ್ ಹಾಗೂ ಸಂಜನಾ ಆನಂದ್ ಅಭಿನಯದ 'ಶೋಕಿವಾಲ' ಬೆಂಗಳೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ತುಮಕೂರು, ಮಾಗಡಿ, ಮದ್ದೂರು ಹಾಗೂ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಮದ್ದೂರಿನ ತೈಲೂರಿನಲ್ಲಿ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ.

ಶೋಕಿವಾಲ ಚಿತ್ರೀಕರಣ ಮುಕ್ತಾಯ
Shokiwala movie shoot completed
author img

By

Published : Feb 18, 2020, 10:40 AM IST

ಕ್ರಿಸ್ಟಲ್ ಪಾರ್ಕ್ ಸಂಸ್ಥೆಯ ಟಿ.ಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. 'ಚಮಕ್' ಸಕ್ಸಸ್ ನಂತರ ಅಯೋಗ್ಯ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರಬಲ್ ಸಿನಿಮಾ ಬಿಡುಗಡೆಯಾದವು. ಇದೀಗ ಬುದ್ಧಿವಂತ 2, ಹುಟ್ಟುಹಬ್ಬದ ಶುಭಾಶಯ, ಶೋಕಿವಾಲ, ಜಾನ್ ಸೀನ ಚಿತ್ರಗಳ ನಿರ್ಮಾಣ ವಿವಿಧ ಹಂತದಲ್ಲಿದೆ.

Shokiwala movie shoot completed
ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡೆದ 'ಶೋಕಿವಾಲ' ಚಿತ್ರತಂಡ

ಈ ಸಿನಿಮಾಗಳಲ್ಲಿ ಅಜಯ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಶೋಕಿವಾಲ' ಚಿತ್ರೀರಕಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿದೆ. ಅಜಯ್ ಹಾಗೂ ಸಂಜನಾ ಆನಂದ್ ಅಭಿನಯದ 'ಶೋಕಿವಾಲ' ಬೆಂಗಳೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ತುಮಕೂರು, ಮಾಗಡಿ, ಮದ್ದೂರು ಹಾಗೂ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಮದ್ದೂರಿನ ತೈಲೂರಿನಲ್ಲಿ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಚಿತ್ರವನ್ನು ಜಾಕಿ ನಿರ್ದೇಶಿಸಿದ್ದು ಮೊದಲ ನಿರ್ದೇಶನದಲ್ಲಿ ಚಿತ್ರ ಸುಗಮವಾಗಿ ಮೂಡಿಬರಲು ನಿರ್ಮಾಪಕರ ಸಹಕಾರವೇ ಕಾರಣ ಎಂದಿದ್ದಾರೆ. ಈ ಚಿತ್ರಕ್ಕೆ ಜಾಕಿ ಅವರೇ ಕಥೆ ಬರೆದಿದ್ದಾರೆ. ಕನ್ನಡದಲ್ಲಿ ಹಲವಾರು ದೊಡ್ಡ ಬಜೆಟಿನ ಸಿನಿಮಾಗಳಿಗೆ ಜಾಕಿ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Sanjana Anand
ನಾಯಕಿ ಸಂಜನಾ ಆನಂದ್​

'ಶೋಕಿವಾಲ' ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಇದೆ. ಜಯಂತ್ ಕಾಯ್ಕಿಣಿ, ಡಾ. ವಿ. ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಘೌಸ್​​​​​​​​​​​​​​ಪೀರ್ ಚಿತ್ರದ ಹಾಡುಗಳಿಗೆ ಗೀತ ರಚನೆ ಮಾಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ವಿಕ್ರಮ್ ಮೋರ್ ಸಾಹಸ, ಮೋಹನ್ ನೃತ್ಯ ನಿರ್ದೇಶನ, ಪ್ರಶಾಂತ್ ರಾಚಪ್ಪ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅಜಯ್ ರಾವ್ ಹಾಗೂ ಸಂಜನಾ ಆನಂದ್ ಜೊತೆ ಶರತ್ ಲೋಹಿತಾಶ್ವ, ಗಿರಿ, ಮುನಿರಾಜು, ಪ್ರಮೋದ್ ಶೆಟ್ಟಿ, ತಬಲಾ ನಾಣಿ, ಅರುಣಾ ಬಾಲರಾಜ್, ನಾಗರಾಜ್​​​​​​​​​​​​​ಮೂರ್ತಿ, ಲಾಸ್ಯ, ವಾಣಿ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.