ETV Bharat / sitara

ಥಿಯೇಟರ್ಸ್​​​ ಪುನಾರಂಭಿಸಲು ಕೇಂದ್ರ ಅಸ್ತು: ಚಿರು ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಖುಷಿ - shivarjuna movie re release

ಅಕ್ಟೋಬರ್ 15 ರಿಂದ ದೇಶಾದ್ಯಂತ ಸಿನಿಮಾ ಥಿಯೇಟರ್​​ಗಳನ್ನು ತೆರೆಯಲು ಕಾಲ ಕೂಡಿ ಬಂದಿದೆ. ಇದೇ ಹಿನ್ನೆಲೆಯಲ್ಲಿಯೇ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾವನ್ನು ರೀ ರಿಲೀಸ್​​ ಮಾಡಲು ನಿರ್ಧರಿಸಲಾಗಿದೆ.

shivarjuna movie re release
ಥಿಯೇಟರ್​​​ ಆರಂಭಕ್ಕೆ ಕೇಂದ್ರ ಅಸ್ತು : ಚಿರು ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಖುಷಿ
author img

By

Published : Oct 6, 2020, 5:45 PM IST

ಅಕ್ಟೋಬರ್ 15 ರಿಂದ ದೇಶಾದ್ಯಂತ ಸಿನಿಮಾ ಥಿಯೇಟರ್​​ಗಳು ಪುನಾರಂಭವಾಗಲಿವೆ. ಅದೇ ರೀತಿ ಕರ್ನಾಟಕದಲ್ಲೂ ಚಿತ್ರಮಂದಿರಗಳನ್ನ ತೆರೆಯೋದಿಕ್ಕೆ ಮಾಲೀಕರು ಉತ್ಸಾಹ ತೋರಿದ್ದಾರೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಬೇಕಿರುವುದರಿಂದ ಕೋಟಿ ಕೋಟಿ ಬಜೆಟ್ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ.

ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ, ಸಿನಿಮಾ ಪ್ರಸಾರಣ ಸಂಸ್ಥೆಗಳಾದ ಯು, ಎಫ್, ಓ ಹಾಗು ಕ್ಯೂಬ್ ಸಂಸ್ಥೆಗಳ ಜೊತೆ ಫಿಲ್ಮ್ ಚೇಂಬರ್ ಒಂದು ಸಭೆ ಮಾಡಿದೆ. ಈ ಬಗ್ಗೆ ಮಾತನಾಡಿದ ಕರ್ನಾಟಕ ಫಿಲ್ಮ್ ಚೇಂಬರ್ ನಿರ್ಮಾಪಕ ವಲಯದ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಮೊದಲು ಹೊಸ ಮತ್ತು ಹಳೆಯ ಸಿನಿಮಾಗಳಿಗೆ ರಿಲೀಸ್​​ಗೆ ಅವಕಾಶ ನೀಡಲಾಗುವುದು ಅಂತಾ ಹೇಳಿದ್ದಾರೆ. ಚಿತ್ರಮಂದಿರಗಳು ಆರಂಭವಾದಾಗ ಜನರು ಥಿಯೇಟರ್​​​ಗಳಿಗೆ ಬರೋದಿಕ್ಕೆ ಏನು ಮಾಡಬೇಕು ಅಂತಾ ಸಿನಿಮಾ ನಿರ್ಮಾಪಕ, ವಿತರಕರು, ಹಾಗು ಚಿತ್ರಮಂದಿರದ ಮಾಲೀಕರ ಜೊತೆ ಚರ್ಚೆ ಮಾಡಲಾಗುವುದು ಎಂದರು.

ಥಿಯೇಟರ್​​​ ಆರಂಭಕ್ಕೆ ಕೇಂದ್ರ ಅಸ್ತು : ಚಿರು ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಖುಷಿ

ಆ ಬಳಿಕ ಸ್ಟಾರ್ ನಟರು ಅಥವಾ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಕೋಟಿ ಕೋಟಿ ಬಜೆಟ್ ಸಿನಿಮಾಗಳನ್ನ ಮಾಡಿರುವ ನಿರ್ಮಾಪಕರು, ಕೊರೊನಾ ಸಂದರ್ಭದಲ್ಲಿ ಚಿತ್ರಗಳನ್ನು ರಿಲೀಸ್ ಮಾಡೋದು ನಿರ್ಮಾಪಕರಿಗೆ ಬಿಟ್ಟ ವಿಚಾರ ಅಂತಾ ಎನ್ ಎಂ ಸುರೇಶ್ ಹೇಳಿದ್ದಾರೆ. ಇದರ ಜೊತೆಗೆ ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ರೀ ರಿಲೀಸ್ ಮಾಡಲು ಅನುಮತಿ ನೀಡಲಾಗುವುದು ಅಂತಾ ಎನ್ ಎಂ ಸುರೇಶ್ ತಿಳಿಸಿದ್ದಾರೆ.

ಮೊನ್ನೆಯಷ್ಟೇ ಮೇಘನಾ ರಾಜ್​ ಅವರಿಗೆ ಸೀಮಂತ ಕಾರ್ಯ ಮಾಡಲಾಗಿತ್ತು. ಇದು ಚಿರು ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಇದೀಗ ಶಿವಾರ್ಜುನ ಸಿನಿಮಾ ರಿ-ರಿಲೀಸ್​ ಆಗ್ತಿರೋದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.