ETV Bharat / sitara

ಮತ್ತೊಂದು ಪ್ರೇಮಕಥೆಯೊಂದಿಗೆ ವಾಪಸಾದ ನಿರ್ದೇಶಕ ಶಶಾಂಕ್ - ಲವ್ 360 ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ನೀಡುವ ನಿರ್ದೇಶಕ ಶಶಾಂಕ್, ಇದೀಗ ಮತ್ತೊಮ್ಮೆ ಹೊಸ ಪ್ರತಿಭೆಗಳೊಂದಿಗೆ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ತಮ್ಮ ಹೊಸ ಸಿನಿಮಾಕ್ಕೆ 'ಲವ್ 360' ಎಂಬ ಹೆಸರಿಟ್ಟಿದ್ದು, ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ.

Director Shashank
ನಿರ್ದೇಶಕ ಶಶಾಂಕ್
author img

By

Published : Jul 10, 2021, 2:08 PM IST

ಪ್ರೇಮಕಥೆಗಳಿಗೆ ಫೇಮಸ್ ಆದವರು ಶಶಾಂಕ್. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಸೇರಿದಂತೆ ಕೆಲವು ಪ್ರೇಮಕಥೆಗಳಿರುವ ಚಿತ್ರಗಳನ್ನು ನಿರ್ದೇಶಿಸಿದ್ದ ಶಶಾಂಕ್, ಇತ್ತೀಚೆಗೆ ಪ್ರೇಮಕಥೆಯಿಂದ ದೂರವೇ ಇದ್ದರು.

ತಾಯಿಗೆ ತಕ್ಕ ಮಗ ಚಿತ್ರವಾದ ಮೇಲೆ ಉಪೇಂದ್ರ ಅಭಿನಯದಲ್ಲಿ ಒಂದು ಫ್ಯಾಮಿಲಿ ಕಥೆಯನ್ನು ತರುವುದಕ್ಕೆ ಹೊರಟಿದ್ದರು. ಆದರೆ, ಅವರ ಪ್ಲಾನ್​ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಉಪೇಂದ್ರ ಅಭಿನಯದ ಚಿತ್ರವನ್ನು ಸ್ವಲ್ಪ ಮುಂದಕ್ಕೆ ಹಾಕಿರುವ ಅವರು, ಈ ಗ್ಯಾಪ್​​​​​​​​​​​​​​​ನಲ್ಲಿ ಇನ್ನೊಂದು ಲವ್ ಸ್ಟೋರಿಯನ್ನು ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ.

ಲಾಕ್​ಡೌನ್​ಗೂ ಮುನ್ನವೇ ಪ್ರವೀಣ್ ಎಂಬ ಹೊಸಪೇಟೆಯ ಹುಡುಗನ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ಆದರೆ ಲಾಕ್​ಡೌನ್​ನಿಂದಾಗಿ ಈ ಚಿತ್ರ ಸ್ವಲ್ಪ ತಡವಾಗಿದ್ದು, ಆಗಸ್ಟ್​ನಲ್ಲಿ ಸೆಟ್ಟೇರುವುದಕ್ಕೆ ಸಿದ್ಧವಾಗುತ್ತಿದೆ. ಈ ಮಧ್ಯೆ ಶಶಾಂಕ್​ ತಮ್ಮ ಹೊಸ ಸಿನಿಮಾಕ್ಕೆ 'ಲವ್ 360' ಎಂಬ ಹೆಸರಿಟ್ಟಿದ್ದು, ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ.

ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆ. ನಾಯಕ, ನಾಯಕಿಯನ್ನು ಅದೆಷ್ಟು ಪ್ರೀತಿಸುತ್ತಾನೆ ಮತ್ತು ಯಾವೆಲ್ಲಾ ಆ್ಯಂಗಲ್​ಗಳಿಂದ ಪ್ರೀತಿಸುತ್ತಾನೆ ಎಂದು ಹೇಳುವುದಕ್ಕೆ ಈ ಹೆಸರನ್ನು ಇಡಲಾಗಿದೆಯಂತೆ. ಚಿತ್ರದ ಚಿತ್ರೀಕರಣ ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಒಂದೇ ಹಂತದಲ್ಲಿ ನಡೆಯಲಿದೆ.
ಪ್ರವೀಣ್​ಗೆ ನಾಯಕಿಯಾಗಿ ಹೊಸ ಹುಡುಗಿಯನ್ನು ಪರಿಚಯಿಸಲಾಗುತ್ತಿದ್ದು, ಈಗಾಗಲೇ ಆಡಿಷನ್ ಶುರುವಾಗಿದೆಯಂತೆ. ಚಿತ್ರಕ್ಕೆ ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ: 'ನಟ್ವರ್ ಲಾಲ್' ಆದ ಮಡಮಕ್ಕಿ ಹೀರೋ ತನುಷ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.