ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಸ್ಟಾರ್ ರಿಯಾಲಿಟಿ ಶೋನ ನಿರೂಪಕಿಯಾಗಿ ಮೋಡಿ ಮಾಡಿದ್ದ ಶಾಲಿನಿ ಸತ್ಯನಾರಾಯಣ್ ಅವರಿಗೆ ಕೊರೊನಾ ದೃಢವಾಗಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದೇ. ವೈರಸ್ ಕಾರಣದಿಂದ ಶೋನಿಂದ ದೂರವಿದ್ದ ಶಾಲಿನಿ, ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ತೆಗೆದುಕೊಂಡಿದ್ದರು. ಈಗ ಸಂಪೂರ್ಣ ಹುಷಾರಾಗಿ ಕೊರೊನಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಇಷ್ಟು ದಿನಗಳ ಕಾಲ ಸೂಪರ್ ಸ್ಟಾರ್ ವೇದಿಕೆಯಿಂದ ದೂರವಿದ್ದ ಶಾಲಿನಿ, ಇದೀಗ ಮರಳಿ ಬರುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ.
ಶಾಲಿನಿ ಅವರು ಕೊರೊನಾ ಕಾರಣದಿಂದ ಶೋ ನಡೆಸಲು ಅಸಾಧ್ಯವಾದಾಗ ಅವರ ಬದಲಿಗೆ ಅನುಪಮಾ ಗೌಡ ಆ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು.