ಕಿರುತೆರೆ ಹಾಗು ಬಿಗ್ ಸ್ಕ್ರೀನ್ ನಲ್ಲಿ ಗಮನ ಸೆಳೆಯುತ್ತಿರೋ ನಟ ಕಿರಣ್ ರಾಜ್. ಸದ್ಯ ಕನ್ನಡತಿ ಧಾರವಾಹಿ ಮೂಲಕ ಮನೆ ಮಾತಾಗಿರುವ ಕಿರಣ್ ರಾಜ್ ಕಳದೆರಡು ವರ್ಷಗಳಿಂದ ಕೊರೊನಾ ಕೊಟ್ಟ ಕಾಟಕ್ಕೆ ಅದೆಷ್ಟೋ ಜನ ನೊಂದು ಬೆಂದಿದ್ಧಾರೆ. ಹೀಗಾಗಿ ಕಷ್ಟದಲ್ಲಿರುವ ಮಂಗಳಮುಖಿಯರ ಕಷ್ಟಕ್ಕೆ ಕಿರಣ್ ರಾಜ್ ಸ್ಪಂದಿಸಿದ್ದಾರೆ.
![Serial actor Kiran Raju help to people, Serial actor Kiran Raju help to third gender, Kiran Raju help to third gender in Bengaluru, Serial actor Kiran Raju news, ಮಂಗಳಮುಖಿಯರ ಕಷ್ಟಕ್ಕೆ ಕಿರಣ್ ರಾಜ್ ಸ್ಪಂದನೆ, ಮಂಗಳಮುಖಿಯರ ಕಷ್ಟಕ್ಕೆ ಕಿರುತರೆ ನಟ ಕಿರಣ್ ರಾಜ್ ಸ್ಪಂದನೆ, ಕಿರುತರೆ ನಟ ಕಿರಣ್ ರಾಜ್, ಕಿರುತರೆ ನಟ ಕಿರಣ್ ರಾಜ್ ಸುದ್ದಿ,](https://etvbharatimages.akamaized.net/etvbharat/prod-images/kn-bng-07-managalmukhiyar-sahayakke-bandha-actor-kiranaraju-7204735_14022022201958_1402f_1644850198_830.jpg)
ಹೊರ ರಾಜ್ಯ ಹಾಗೂ ಊರುಗಳಿಂದ ಬಂದು ವಸತಿಯಿಲ್ಲದೆ ಫುಟ್ ಪಾತ್ ಆಶ್ರಯ ಪಡೆದಿರುವ ಹಲವಾರು ಮಂದಿಗೆ ಬೆಡ್ ಶೀಟ್ ಮುಂತಾದವುಗಳನ್ನು ಹಂಚಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಂಗಳಮುಖಿಯರು ಈ ಸಂದರ್ಭದಲ್ಲಿ ಹೆಚ್ಚು ತೊಂದರೆ ಅನುಭವಿಸಿದ್ದರು. ಅಂತಹ ಮಂಗಳಮುಖಿಯರಿಗೆ ಕೊರೊನ ಸಮಯದಲ್ಲಿ ಆಹಾರದ ಕಿಟ್ ನೀಡಿದ್ದಾರೆ. ಈಗ ಚಳಿಗಾಲವಾಗಿರುವುದರಿಂದ ಅವರಿಗೆಲ್ಲಾ ಬೆಚ್ಚಗಿನ ಹೊದಿಕೆಗಳನ್ನು ಕೊಡಲಾಗಿದೆ ಹಾಗೂ ಮುಖ್ಯವಾದ ಹಬ್ಬಗಳಲ್ಲಿ ಅವರಿಗೆ ಮದುವೆಮನೆಯ ಅಡುಗೆಯಂತೆ ಬಾಳೆ ಎಲೆ ಊಟ ಹಾಕಿಸಿ, ತಾವು ಅವರೊಂದಿಗೆ ಊಟ ಮಾಡಿದ್ದಾರೆ ಇದೇ ವೇಳೆ ಸ್ಮರಿಸಿದರು.
![Serial actor Kiran Raju help to people, Serial actor Kiran Raju help to third gender, Kiran Raju help to third gender in Bengaluru, Serial actor Kiran Raju news, ಮಂಗಳಮುಖಿಯರ ಕಷ್ಟಕ್ಕೆ ಕಿರಣ್ ರಾಜ್ ಸ್ಪಂದನೆ, ಮಂಗಳಮುಖಿಯರ ಕಷ್ಟಕ್ಕೆ ಕಿರುತರೆ ನಟ ಕಿರಣ್ ರಾಜ್ ಸ್ಪಂದನೆ, ಕಿರುತರೆ ನಟ ಕಿರಣ್ ರಾಜ್, ಕಿರುತರೆ ನಟ ಕಿರಣ್ ರಾಜ್ ಸುದ್ದಿ,](https://etvbharatimages.akamaized.net/etvbharat/prod-images/kn-bng-07-managalmukhiyar-sahayakke-bandha-actor-kiranaraju-7204735_14022022201958_1402f_1644850198_315.jpg)
ಓದಿ: ಹಿಜಾಬ್ ಸಮರ್ಥಿಸಿ ಹೇಳಿಕೆಗೆ ಪಕ್ಷದಲ್ಲೇ ಅಪಸ್ವರ: ಕ್ಷಮೆ ಯಾಚಿಸಿದ ಶಾಸಕ ಜಮೀರ್ ಅಹ್ಮದ್ ಖಾನ್
ಮಂಗಳಮುಖಿಯರು ಈಗ ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಸಮಾಜ ಅವರನ್ನು ನೋಡುವ ರೀತಿಯೆ ಬದಲಾಗಬೇಕು. ಅವರು ನಮ್ಮ ಹಾಗೆ ಎಂದು ನೋಡಬೇಕು ಎನ್ನುತ್ತಾರೆ ಕಿರಣ್ ರಾಜ್. ಇನ್ನು ನಾವು ದುಡಿದಿದ್ದನ್ನು ನಮ್ಮ ನಿತ್ಯಜೀವನಕ್ಕೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡುತ್ತಿದ್ದಾರೆ. ಬಹುತೇಕ ಜನರು ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವುದು ನನ್ನ ಉದ್ದೇಶ ಎಂದರು.
![Serial actor Kiran Raju help to people, Serial actor Kiran Raju help to third gender, Kiran Raju help to third gender in Bengaluru, Serial actor Kiran Raju news, ಮಂಗಳಮುಖಿಯರ ಕಷ್ಟಕ್ಕೆ ಕಿರಣ್ ರಾಜ್ ಸ್ಪಂದನೆ, ಮಂಗಳಮುಖಿಯರ ಕಷ್ಟಕ್ಕೆ ಕಿರುತರೆ ನಟ ಕಿರಣ್ ರಾಜ್ ಸ್ಪಂದನೆ, ಕಿರುತರೆ ನಟ ಕಿರಣ್ ರಾಜ್, ಕಿರುತರೆ ನಟ ಕಿರಣ್ ರಾಜ್ ಸುದ್ದಿ,](https://etvbharatimages.akamaized.net/etvbharat/prod-images/kn-bng-07-managalmukhiyar-sahayakke-bandha-actor-kiranaraju-7204735_14022022201958_1402f_1644850198_1057.jpg)
ಕಿರಣ್ ರಾಜ್ ಫೌಂಡೇಶನ್ ಮೂಲಕ ಕೊರೊನ ಸಂಕಷ್ಟ ಸಮಯದಲ್ಲಿ ಸಾಕಷ್ಟು ಜನರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ. ದೇವರು ಎಲ್ಲಾ ಕಡೆ ಇರಲಾಗುವುದಿಲ್ಲ ಎಂದು ಕಿರಣ್ ರಾಜ್ ತರಹ ಒಳ್ಳೆಯ ಗುಣ ಇರುವವರನ್ನು ಈ ಭೂಮಿಗೆ ಕಳುಹಿಸಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಮಂಗಳಮುಖಿಯರು ಮನಸ್ಸಾರೆ ಹಾರೈಸಿದ್ದಾರೆ. ಕಿರಣ್ ರಾಜ್ ಅವರ ಸಹಾಯ ಕರ್ನಾಟಕಕಷ್ಟೇ ಮೀಸಲಾಗಿಲ್ಲ. ದೂರದ ಮುಂಬೈನಲ್ಲೂ ಇವರ ಸತ್ಕಾರ್ಯಗಳು ನಡೆಯುತ್ತಿದೆ. ಸದ್ಯ ಕಿರಣ್ ರಾಜ್ ಭರ್ಜರಿ ಗಂಡು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.