ಪೋಸ್ಟರ್, ಟೀಸರ್ ಹಾಗೂ ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಹವಾ ಸೃಷ್ಟಿಸಿರುವ ಸಿನಿಮಾ ಭಜರಂಗಿ-2. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿಸಿಕೊಂಡಿರುವ ಭಜರಂಗಿ-2 ಚಿತ್ರದ ಎರಡನೇ ಟೀಸರ್ ಅನಾವರಣಗೊಂಡಿದೆ.
ಸೆಂಚುರಿ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಶಿವರಾಜ್ ಕುಮಾರ್ ಬರ್ತ್ಡೇಗೆ ಗಿಫ್ಟ್ ಆಗಿ ಕೊಟ್ಟಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್ ಪಂಚಿಂಗ್ ಡೈಲಾಗ್ ಜೊತೆಗೆ ಸೆಂಚುರಿ ಸ್ಟಾರ್ ಎಂಟ್ರಿ ಬೊಂಬಾಟ್ ಆಗಿದೆ.
- " class="align-text-top noRightClick twitterSection" data="">
ಭಗವಂತನ ಸ್ವತ್ತು ನಾಶ ಮಾಡ್ತೀನಿ ಅಂತಾ ಹೊರಟರೆ, ಅದನ್ನ ಕಾಪಾಡೋಕ್ಕೆ ಅವನೇ ಹುಟ್ಟಿ ಬರಬೇಕಿಲ್ಲ. ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಬರ್ತಾನೆ ಎಂಬ ಡೈಲಾಗ್ನೊಂದಿಗೆ ಎಂಟ್ರಿ ಕೊಡುವ ಕರುನಾಡ ಚಕ್ರವರ್ತಿಯ ಎಂಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ್ನಲ್ಲಿ ಬರುತ್ತಿರುವ ಭಜರಂಗಿ-2 ಬಹುತೇಕ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಟೀಸರ್ ಗಮನಿಸಿದರೆ, ಇದರಲ್ಲಿ ಭರ್ಜರಿ ವಿಎಫ್‌ಎಕ್ಸ್ ಬಳಕೆ ಆಗಿದೆ ಎಂಬುದು ಗೊತ್ತಾಗುತ್ತದೆ. ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದ್ದು, ಪರಭಾಷೆ ಮಂದಿ ಸಹ ಆಸಕ್ತಿ ತೋರಿಸಿದ್ದಾರೆ.
ನಿರ್ದೇಶಕ ಎ.ಹರ್ಷ ನಿರ್ದೇಶನದ ಈ ಚಿತ್ರವನ್ನ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋನ ಈ ನಯಾ ಅವತಾರಕ್ಕೆ ಅಭಿಮಾನಿಗಳು ಮನ ಸೋತಿರೋದಂತು ನಿಜ.
ಇದನ್ನೂ ಓದಿ: ಪ್ರೇಮಕಥೆಯಲ್ಲಿ ಹ್ಯಾಟ್ರಿಕ್ ಹೀರೋ.. ಸದ್ಯದಲ್ಲೇ ಸಿನಿಮಾ ಪ್ರಾರಂಭ