ಬೆಂಗಳೂರು: ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ ಮುಗಿಸಿರೋ ನಟ ಸತೀಶ್ ನೀನಾಸಂ, ತಮಿಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರೋದು ಗೊತ್ತಿರುವ ವಿಚಾರ. ಸದ್ಯ ಈಗ ಸತೀಶ್ ನೀನಾಸಂ ಈ ತಮಿಳು ಸಿನಿಮಾದ ಹೊಸ ಅಪ್ಡೇಟ್ ನ್ಯೂಸ್ ಕೊಟ್ಟಿದ್ದಾರೆ.
![Sathish_Ninasam_Tamil_Cinema_Shooting_complete](https://etvbharatimages.akamaized.net/etvbharat/prod-images/kn-bng-03-sathish-ninasam-tamil-cinema-shooting-muakthya-7204735_27022021202803_2702f_1614437883_857.jpg)
ಓದಿ: ವೆಬ್ ಸೀರೀಸ್ ಆಗಿ ಬರಲಿದೆ ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಕಥೆ...!
ತಮಿಳು ನಟ ಶಶಿಕುಮಾರ್ ಜೊತೆ ಸತೀಶ್ ನೀನಾಸಂ ನಟಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣ ಮುಕ್ತಾಯ ಆಗಿದೆ. ಈ ಸಿನಿಮಾಗೆ ಪಗೈವಾನುಲು ಅರುಲ್ವಾಯ್ (Pagaivanulu Arulvai) ಎಂದು ಟೈಟಲ್ ಇಟ್ಟಿದ್ದು, ಯುವ ನಿರ್ದೇಶಕ ಅನಿಸ್ ಅಬ್ಬಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೇಕ್ಸಪಿಯರ್ ಕಥೆಯಿಂದ ಸ್ಫೂರ್ತಿಗೊಂಡಿರುವ ಈ ಸಿನಿಮಾದಲ್ಲಿ ಸತೀಶ್ ನೀನಾಸಂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿ ಪಾತ್ರದಲ್ಲಿ ನಟಿಸಿದ್ದಾರೆ.
![Sathish_Ninasam_Tamil_Cinema_Shooting_complete](https://etvbharatimages.akamaized.net/etvbharat/prod-images/kn-bng-03-sathish-ninasam-tamil-cinema-shooting-muakthya-7204735_27022021202803_2702f_1614437883_807.jpg)
ಸತೀಶ್ ನೀನಾಸಂ, ಶಶಿಕುಮಾರ್ ಜೊತೆ ಬಿಂದು ಮಾಧವಿ, ವಾಣಿ ಭೋಜನ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ನಾಸರ್ ಮತ್ತು ಜಯಪ್ರಕಾಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಗಿಬ್ರನ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಕಾರ್ತಿಕ್ ಕೆ ಥಿಳ್ಳೈ ಅವರ ಛಾಯಾಗ್ರಹಣವಿದ್ದು, ಕಾಶಿ ವಿಶ್ವನಾಥನ್ ಅವರ ಸಂಕಲನ ಇದೆ.
![Sathish_Ninasam_Tamil_Cinema_Shooting_complete](https://etvbharatimages.akamaized.net/etvbharat/prod-images/kn-bng-03-sathish-ninasam-tamil-cinema-shooting-muakthya-7204735_27022021202803_2702f_1614437883_793.jpg)
ಇನ್ನು ಕನ್ನಡದಲ್ಲಿ ಸತೀಶ್ ನೀನಾಸಂ ಸತತವಾಗಿ ಒಂದರ ಹಿಂದೆ ಒಂದು ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿದಿದೆ. ಮ್ಯಾಟ್ನಿ ಕೂಡ ಚಿತ್ರೀಕರಣ ಆರಂಭ ಆಗಬೇಕಿದೆ. ಇನ್ನು ಗೋದ್ರಾ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.
![Sathish_Ninasam_Tamil_Cinema_Shooting_complete](https://etvbharatimages.akamaized.net/etvbharat/prod-images/kn-bng-03-sathish-ninasam-tamil-cinema-shooting-muakthya-7204735_27022021202803_2702f_1614437883_600.jpg)