ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪಟಾಸ್, ಸುಪ್ರೀಮ್, ರಾಜಾ ದಿ ಗ್ರೇಟ್, ಎಫ್2 ಸಿನಿಮಾಗಳನ್ನು ನಿರ್ದೇಶಿಸಿದ್ದ ರವಿ ರಾವಿಪೂಡಿ ಈ ಸಿನಿಮಾ ನಿರ್ದೇಶಿಸಿದ್ದಾರೆ.
- " class="align-text-top noRightClick twitterSection" data="">
ಮಹೇಶ್ ಬಾಬು ಅಭಿನಯದ ಈ 26 ನೇ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಪ್ರಕಟಿಸಿದೆ. ಚಿತ್ರದ ಟೀಸರ್ ಹಾಗೂ ಎರಡು ಹಾಡುಗಳು ಹೊರಬಂದಿವೆ. ಈಗ 'ಹಿ ಇಸ್ ಸೋ ಕ್ಯೂಟ್' ಎಂಬ ಮತ್ತೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ತೆಲುಗು ಜಾನಪದ ಹಾಡುಗಳಿಗೆ ಪ್ರಸಿದ್ಧರಾದ ಮಧುಪ್ರಿಯ ಈ ಹಾಡನ್ನು ಹಾಡಿದ್ದಾರೆ. ನಾಯಕಿ ರಶ್ಮಿಕಾ ಮಂದಣ್ಣ ನಾಯಕ ಮಹೇಶ್ಬಾಬು ಹಿಂದೆ ಅಲೆಯುತ್ತಾ ಕೀಟಲೆ ಮಾಡುವ ಸಂದರ್ಭದ ಹಾಡು ಇದು. ಬಿಡುಗಡೆಯಾದ ಒಂದೇ ದಿನಕ್ಕೆ 4 ಮಿಲಿಯನ್ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.
ಇನ್ನು, ಈ ಚಿತ್ರದ ಮೂಲಕ ಲೇಡಿ ಅಮಿತಾಬ್ ಎಂದೇ ಹೆಸರಾದ ವಿಜಯಶಾಂತಿ ಆ್ಯಕ್ಟಿಂಗ್ಗೆ ವಾಪಸಾಗಿರುವುದು ಕೂಡಾ ವಿಶೇಷ. ಇನ್ನು ಮುಂದಿನ ವರ್ಷ ಜನವರಿ 5 ರಂದು ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮೆಗಾ ಪವರ್ಸ್ಟಾರ್ ರಾಮ್ಚರಣ್ ತೇಜ ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಚಿತ್ರದಲ್ಲಿ ಮಹೇಶ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಪ್ರಕಾಶ್ ರಾಜ್, ರಾಜೇಂದ್ರ ಪ್ರಸಾದ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.