ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ 3 ತಿಂಗಳು ಸೆರೆಮನೆವಾಸ ಅನುಭವಿಸಿ ಇತ್ತೀಚೆಗೆ ಷರತ್ತು ಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ದಿನದಂದು ನಾಪತ್ತೆಯಾಗಿದ್ದ ನಟಿ ಇಂದು ಪ್ರತ್ಯಕ್ಷರಾಗಿದ್ದಾರೆ.
ಜೈಲಿನಲ್ಲಿದ್ದ ನಟಿ ಮೊದಲ ದಿನದಿಂದಲೇ ಜಾಮೀನಿಗಾಗಿ ಹೋರಾಡುತ್ತಿದ್ದು, ಕೊನೆಗೂ ಬೇಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 85 ದಿನಗಳ ನಂತ್ರ ಜೈಲಿನಿಂದ ಹೊರಬಂದ ಸಂಜನಾ ಕಳೆದ ಐದು ದಿನಗಳಿಂದ ಯಾರ ಕಣ್ಣಿಗೂ ಕಾಣಿಸದೇ ಗೌಪ್ಯವಾಗಿದ್ದು, ಇಂದು ಸಂಜನಾ ಗಲ್ರಾನಿ ಪ್ರತ್ಯಕ್ಷರಾಗಿದ್ದಾರೆ.
ಇನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಸಂಜನಾ ಹೊರಗಡೆ ಬಂದ ಬಳಿಕ ಎಲ್ಲಿದ್ದಾರೆ ಅನ್ನೋದೆ ನಿಗೂಢವಾಗಿತ್ತು. ಸದ್ಯ ಸಂಜನಾ ನ್ಯಾಯಾಲಯದ ಎದುರು ಪ್ರತ್ಯಕ್ಷ ಆಗಿದ್ದಾರೆ. ನಟಿ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಓಡಾಟ ನಡೆಸಿದ್ದಾರೆ.