ETV Bharat / sitara

ಹ್ಯಾಪಿ ಬರ್ತ್​ಡೇ ಅಂದ್ರು ಫ್ಯಾನ್ಸ್.. ಅಭಿಮಾನಿಗಳ ಪ್ರೀತಿ ನೋಡಿ ದಂಗಾದ್ರು ಹರಿಪ್ರಿಯ - ಮೈಸೂರಿನಲ್ಲಿ ಹರಿಪ್ರಿಯ ಹುಟ್ಟುಹಬ್ಬ ಆಚರಣೆ

`ಪೆಟ್ರೋಮ್ಯಾಕ್ಸ್' ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಜನವರಿ ಮೊದಲ ವಾರದಲ್ಲಿ ಶೂಟಿಂಗ್​ ಮುಗಿಯುವ ಸಾಧ್ಯತೆ ಇದೆ. ಈ ಸಿನಿಮಾ ಮುಗಿಸಿ ಸತೀಶ್ ನೀನಾಸಂ, ನಂತರ ತಮಿಳು ಚಿತ್ರದಲ್ಲಿ ನಟಿಸಲು ಚೆನ್ನೈಗೆ ತೆರಳಿದ್ದಾರೆ..

sandalwood star haripriya birthday celebration
ಹರಿಪ್ರಿಯ ಬರ್ತ್​ಡೇ
author img

By

Published : Dec 28, 2020, 7:10 AM IST

ಸ್ಟಾರ್ ನಟ-ನಟಿಯರನ್ನು ಅಭಿಮಾನಿಗಳು ಭೇಟಿ ಮಾಡುವುದು, ಅವರಿಗೆ ಸನ್ಮಾನ ಮಾಡಿ ಶುಭ ಹಾರೈಸುವುದು ಇವೆಲ್ಲಾ ಹೊಸದೇನಲ್ಲ. ನಟಿ ಹರಿಪ್ರಿಯಾಗೂ ಇದು ವಿಶೇಷವಲ್ಲ. ಅವರು ಆಗಾಗ ಅಭಿಮಾನಿಗಳನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಆದರೆ, ಭಾನುವಾರ ನಡೆದ ಘಟನೆಯಿಂದ ಹರಿಪ್ರಿಯ ನಿಜಕ್ಕೂ ದಂಗಾಗಿದ್ದಾರೆ.

sandalwood star haripriya birthday celebration
ಹ್ಯಾಪಿ ಬರ್ತ್​ಡೇ ಬ್ಯೂಟಿಫುಲ್​
ಸತೀಶ್ ನೀನಾಸಂ ಅಭಿನಯದ `ಪೆಟ್ರೋಮ್ಯಾಕ್ಸ್' ಚಿತ್ರದ ಚಿತ್ರೀಕರಣ ಕೆಲವು ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿರುವುದು, ಅದರಲ್ಲಿ ಹರಿಪ್ರಿಯ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಗೊತ್ತೇ ಇದೆ. ಭಾನುವಾರ ಚಿತ್ರೀಕರಣ ಸಮಯದಲ್ಲಿ ಹರಿಪ್ರಿಯ ಅವರ ಒಂದಿಷ್ಟು ಅಭಿಮಾನಿಗಳು ಸೆಟ್‍ಗೆ ಸರ್ಪ್ರೈಜ್​ ವಿಸಿಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ದೊಡ್ಡ ಹೂವಿನ ಹಾರ ಹಾಕಿ ಸನ್ಮಾಸಿದ್ದಾರೆ.
ಜೊತೆಗೆ ಹೆಚ್ ಅಕ್ಷರದ ಕೇಕ್​ ತಂದು ಅವರಿಂದ ಅದನ್ನು ಕತ್ತರಿಸಿದ್ದಾರೆ. ಇನ್ನು, ಚಾಕೊಲೇಟ್, ಗುಲಾಬಿ ಅಂತೆಲ್ಲಾ ಗಿಫ್ಟ್​​ಗಳನ್ನು ನೀಡಿದ್ದಾರೆ. ಅಭಿಮಾನಿಗಳ ಈ ಪ್ರೀತಿಯನ್ನು ಕಂಡು ಹರಿಪ್ರಿಯಾ ಖುಷಿ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ತಾನೆಂದೂ ಋಣಿ ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಿಗಳೊಂದಿಗೆ ನಟಿ ಹರಿಪ್ರಿಯ

ಅಂದಹಾಗೆ,`ಪೆಟ್ರೋಮ್ಯಾಕ್ಸ್' ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಜನವರಿ ಮೊದಲ ವಾರದಲ್ಲಿ ಶೂಟಿಂಗ್​ ಮುಗಿಯುವ ಸಾಧ್ಯತೆ ಇದೆ. ಈ ಸಿನಿಮಾ ಮುಗಿಸಿ ಸತೀಶ್ ನೀನಾಸಂ, ನಂತರ ತಮಿಳು ಚಿತ್ರದಲ್ಲಿ ನಟಿಸಲು ಚೆನ್ನೈಗೆ ತೆರಳಿದ್ದಾರೆ.

ವಿಜಯಪ್ರಸಾದ್‌ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅರುಣ್, ಕಾರುಣ್ಯ ರಾಮ್ ಸೇರಿದಂತೆ ಹಲವರು ನಟಿಸುತ್ತಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.