ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಬೆನ್ನತ್ತಿರುವ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ತಯಾರಿ ನಡೆಸಿದ್ದಾರೆ. ಇಲ್ಲಿಯವರೆಗೆ ಇಬ್ಬರು ಖ್ಯಾತ ನಟಿಯರೂ ಸೇರಿ ಕೆಲವು ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ.
ಇವರುಗಳ ಪೈಕಿ ರವಿಶಂಕರ್, ರಾಹುಲ್ ಸೇರಿದಂತೆ ಕೆಲವರನ್ನು ಪ್ರಮುಖ ಆರೋಪಿಗಳನ್ನಾಗಿ ಉಲ್ಲೇಖ ಮಾಡಲು ನಿರ್ಧಾರ ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಡ್ರಗ್ ಪ್ರಕರಣ ದಾಖಲಾಗ್ತಿದ್ದ ಹಾಗೆ ಮುಖ್ಯ ಆರೋಪಿ(ಎ1) ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ಎ5 ಆರೋಪಿ ಆದಿತ್ಯಾ ಆಳ್ವಾ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಆಪ್ತ ಶೇಖ್ ಫಾಝ, ಎ10 ಅಭೀಷೇಕ್, ಮನ್ಸೂರ್ ಅಲಿಯಾಸ್ ಮ್ಯಾಸ್ಸಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಸಿಸಿಬಿ ಶೋಧ ಮುಂದುವರೆದಿದೆ.
ಓದಿ : 'ವಿಶ್ವದ 50 ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿ'ಯಲ್ಲಿ ಸೋನು ಸೂದ್ಗೆ ಅಗ್ರಸ್ಥಾನ
ಈ ಆರೋಪಿಗಳು ನಗರ ಬಿಟ್ಟು ಬೇರೆಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಇನ್ನು ಆರೋಪಿಗಳ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಸಾಕ್ಷಿಯಾಗಿ ಕೆಲ ಸಿಸಿಟಿವಿ ದೃಶ್ಯ ಹಾಗೂ ನಟ ದಿಗಂತ್ ಮತ್ತು ಐಂದ್ರಿತಾ, ಅಕುಲ್ ಬಾಲಾಜಿ ಸೇರಿದಂತೆ ಹಲವರ ಹೇಳಿಕೆಗಳನ್ನ ಸಾಕ್ಷಿಗಳಾಗಿ ಉಲ್ಲೇಖ ಮಾಡಲಿದ್ದಾರೆ.
ಸಿಸಿಬಿ ಪೊಲೀಸರು ಈ ತಿಂಗಳು ಆರೋಪಿಗಳ ವಿರುದ್ಧ ಸಾಕ್ಷಿಗಳನ್ನು ಸಲ್ಲಿಕೆ ಮಾಡಲು ನಿರ್ಧರಿಸಿದ್ದಾರೆ. ಪ್ರಕರಣದಲ್ಲಿ ಬಹಳಷ್ಟು ಮಾಹಿತಿ ಪಡೆಯಲು ಬಾಕಿ ಇರುವ ಕಾರಣ ಇನ್ನಷ್ಟು ಮಾಹಿತಿ ಕಲೆ ಹಾಕಲು ಸಿಸಿಬಿ ಮುಂದಾಗಿದೆ.
ನಟಿಯರಿಗೆ ಸಂಕಟ:
ನಟಿ ರಾಗಿಣಿ ಮತ್ತು ನಟಿ ಸಂಜನಾಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದರೆ ಮತ್ತಷ್ಟು ಕಂಟಕವಾಗಲಿದೆ. ಯಾಕಂದ್ರೆ ಸದ್ಯ ಜಾಮೀನು ಕೋರಿ ಈಗಾಗಲೇ ಅರ್ಜಿಸಲ್ಲಿಕೆ ಮಾಡಿದ್ದು, ಸಿಸಿಬಿ ಸಲ್ಲಿಸುವ ಸಾಕ್ಷಿಯಲ್ಲಿ ನಿಜಾಂಶ ಇತ್ತು ಅಂದ್ರೆ ಜಾಮೀನು ಸಿಗದೇ ಇರಬಹುದು.