ETV Bharat / sitara

'ಪುಕ್ಸಟ್ಟೆ ಲೈಫ'ನ್ನು ಆನಂದಿಸಲು ಬಿಡದ 'ಮೇಲೊಬ್ಬ ಮಾಯಾವಿ'

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಕೆಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ಬೆಳ್ಳಿ ಪರದೆ ಮೇಲೆ ಸಿನಿಮಾ ಬರುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.

author img

By

Published : Jun 16, 2021, 10:11 AM IST

Sanchari Vijay upcoming movies
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್

ಬೈಕ್ ಅಪಘಾತಕ್ಕೀಡಾಗಿ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ ಸಂಚಾರಿ ವಿಜಯ್ ನೆನಪು ಸಿನಿಮಾಗಳಲ್ಲಿ ಸದಾ ಜೀವಂತವಾಗಿರುತ್ತದೆ. ‘ನಾನು ಅವನಲ್ಲ ಅವಳು’, ‘ನಾತಿಚರಾಮಿ’ಯಂತಹ ಚಿತ್ರಗಳಿಂದ ಜನರ ಮನಗೆದ್ದ ಸಂಚಾರಿ ವಿಜಯ್​ ಚಿರನಿದ್ರೆಗೆ ಜಾರುವ ಮುನ್ನ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವು ಬಿಡುಗಡೆ ಸಹ ಸಜ್ಜಾಗಿದ್ದವು.

‘ಮೇಲೊಬ್ಬ ಮಾಯಾವಿ’, ‘ಪುಕ್ಸಟ್ಟೆ ಲೈಫು’, ‘ತಲೆದಂಡ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆ ಚಿತ್ರಗಳೆಲ್ಲ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಈ ಪೈಕಿ ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಚಿತ್ರವು ಲಾಕ್​ಡೌನ್​ ನಂತರ ಮೊದಲು ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

‘ತಲೆದಂಡ’ ಚಿತ್ರದಲ್ಲಿ ವಿಜಯ್​ ಚಿತ್ರದಲ್ಲಿ ಓರ್ವ ಬುದ್ಧಿಮಾಂದ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಪರಿಸರ ಮತ್ತು ಮಾನವನ ನಡುವಿನ ಸಂಬಧದ ಕುರಿತಾಗಿದ್ದು, ಪರಿಸರ ನಾಶ ಮಾಡುವವರ ವಿರುದ್ಧ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನ ಹೋರಾಟದ ಕುರಿತು ಅತ್ಯದ್ಭುತವಾಗಿ ತೋರಿಸಲಾಗಿದೆ. ನಿನ್ನೆ ಈ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ವಿಜಯ್ ಅಭಿನಯದ ಬಗ್ಗೆ ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

Sanchari Vijay upcoming movies
ತಲೆದಂಡ ಸಿನಿಮಾದಲ್ಲಿ ನಟ ವಿಜಯ್

‘ತಲೆದಂಡ’ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ವಿಜಯ್, ಸಂಭಾವನೆ ಕಡಿಮೆಯಾದರೂ ಇಂಥದ್ದೊಂದು ಅಪರೂಪದ ಪಾತ್ರವನ್ನು ತಾವೇ ಮಾಡುವುದಾಗಿ ಹಠಹಿಡಿದು ಮಾಡಿದರಂತೆ. ಚಿತ್ರೀಕರಣದುದ್ದಕ್ಕೂ ವಿಧೇಯ ವಿದ್ಯಾರ್ಥಿಯಂತೆ ಇದ್ದು, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಪ್ರವೀಣ್ ಕೃಪಾಕರ್ ಹೇಳಿಕೊಂಡಿದ್ದಾರೆ.

ಸಂಚಾರಿ ವಿಜಯ್ ‘ತಲೆದಂಡ’ ಚಿತ್ರವನ್ನು ಅದೆಷ್ಟು ಪ್ರೀತಿಸಿದ್ದರು ಎಂದರೆ, ಕಳೆದ ವರ್ಷ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗದಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದರು.

ಪತ್ರಕರ್ತ ನವೀನ್ ಕೃಷ್ಣ ನಿರ್ದೇಶನದ 'ಮೇಲೊಬ್ಬ ಮಾಯಾವಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್​​​​​​ ನೀಡಿದೆ. ಕಥೆ, ಚಿತ್ರಕಥೆ, ಕಲಾವಿದರ ಆಯ್ಕೆಯಲ್ಲಿ ಬಹಳ ಸ್ಟ್ರಾಂಗ್ ಆಗಿರುವ ನವಿನ್ ಕೃಷ್ಣ ಈ ಚಿತ್ರದಲ್ಲಿ ಸಂಗೀತದಲ್ಲೂ ಮನಸ್ಸು ತಟ್ಟಿದ್ದಾರೆ. ಚಿತ್ರದಲ್ಲಿ ಮಾಫಿಯಾದೊಂದಿಗೆ ನೈಜ ಕಥೆಯನ್ನು ಒಳಗೊಂಡಿದೆ.

‘ಪುಕ್ಸಟ್ಟೆ ಲೈಫು’ ಸಿನಿಮಾಕ್ಕೆ ಅರವಿಂದ್​ ಕುಪ್ಲಿಕರ್​​ ಆ್ಯಕ್ಷನ್​ ಕಟ್​ ಹೇಳಿದ್ದು, ನಾಗರಾಜ್​ ಸೋಮಯಾಲಿ ಬಂಡವಾಳ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.