ETV Bharat / sitara

ಮಹಿಳೆಯರು ತಪ್ಪು ಮಾಡಿದಾಗ ಪ್ರಶ್ನಿಸುವ ಸಮಾಜ, ಪುರುಷರನ್ನೇಕೆ ಪ್ರಶ್ನಿಸೋದಿಲ್ಲ?: ನಟಿ ಸಮಂತಾ​​ - ನಟಿ ಸಮಂತಾ ಪೋಸ್ಟ್​

ನಟ ನಾಗಚೈತನ್ಯ ಜೊತೆ ಡಿವೋರ್ಸ್​ ಪಡೆದುಕೊಂಡಿರುವ ನಟಿ ಸಮಂತಾ ಇದೀಗ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನೋವು ಹೊರಹಾಕುತ್ತಿದ್ದಾರೆ.

Samantha
Samantha
author img

By

Published : Oct 8, 2021, 5:41 PM IST

ಹೈದರಾಬಾದ್​: ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸ್ಟಾರ್​ ಜೋಡಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದುಕೊಂಡಿದ್ದು, ಬೇರೆ ಬೇರೆಯಾಗಿ ಜೀವನ ನಡೆಸಲು ಇಬ್ಬರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ವಾರ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದ ಜೋಡಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿಕೊಂಡಿದ್ದರು. ಇದಾದ ಬಳಿಕ ನಟಿ ಸಮಂತಾ ಇದೇ ಮೊದಲ ಸಲ ಪೋಸ್ಟ್ ಮಾಡಿದ್ದಾರೆ.

Samantha questions society
ಇನ್​​ಸ್ಟಾಗ್ರಾಂನಲ್ಲಿ ಸಮಂತಾ ಹೊಸ ಪೋಸ್ಟ್​​

ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ತಾವು ಹೊಂದಿರುವ ಅಕೌಂಟ್​ಗಳ ಹೆಸರು ಸಹ ಬದಲಾವಣೆ ಮಾಡಿಕೊಂಡಿದ್ದ ನಟಿ, ನಿನ್ನೆಯಷ್ಟೇ ಒಂದು ಫೋಟೋ ಹಾಕಿಕೊಂಡಿದ್ದರು. ಇದೀಗ ಲೇಖಕರಾದ ಫರೀದಾ ಅವರು ಬರೆದಿರುವ ಒಂದು ಕೋಟ್​ ಅನ್ನು ಹಂಚಿಕೊಂಡಿದ್ದಾರೆ.

ಸಮಂತಾ ಮಾಡಿರುವ ಪೋಸ್ಟ್​ನಲ್ಲಿ ಏನಿದೆ?

ಗುಡ್​ ಮಾರ್ನಿಂಗ್ ಎಂದು ಪೋಸ್ಟ್​ ಮಾಡಿರುವ ಸಮಂತಾ, ಲೇಖಕರಾದ ಫರೀದಾ ಅವರು ಬರೆದ ಒಂದು ಕೋಟ್​​ ಹಂಚಿಕೊಂಡಿದ್ದಾರೆ. ಮಹಿಳೆಯರು ಯಾವುದೇ ಕೆಲಸ ಮಾಡಿದ್ರೂ, ಏನೇ ಮಾಡಿದರೂ ಅದನ್ನ ಎಲ್ಲರೂ ಪ್ರಶ್ನೆ ಮಾಡುತ್ತಾರೆ.

ಆದರೆ, ಪುರುಷರು ಮಾಡಿರುವ ಕೆಲಸ ಹಾಗೂ ತಪ್ಪನ್ನೂ ಸಹ ಪ್ರಶ್ನೆ ಮಾಡಬೇಕು. ಆದರೆ, ಪುರುಷರು ಏನಾದರೂ ಮಾಡಿದಾಗ ಅದನ್ನು ನೈತಿಕ ಪ್ರಶ್ನೆ ಮಾಡುವುದಿಲ್ಲ ಎಂದಾದರೆ ನಮ್ಮ ಸಮಾಜದಲ್ಲಿ ನೈತಿಕತೆ ಇಲ್ಲ ಎಂದರ್ಥ ಎನ್ನುವ ಸಾಲು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಮಹಿಳೆಯರು ತಪ್ಪು ಮಾಡಿದಾಗ ಒಂದು ರೀತಿ, ಪುರುಷರು ತಪ್ಪು ಮಾಡಿದಾಗ ಇನ್ನೊಂದು ರೀತಿಯಾಗಿ ಸಮಾಜದಲ್ಲಿ ನೋಡುತ್ತಾರೆ ಎನ್ನುವ ಸಂದೇಶ ಹರಿಬಿಟ್ಟಿದ್ದಾರೆ.

ಇದನ್ನೂ ಓದಿರಿ: ಸಮಂತಾ - ನಾಗಚೈತನ್ಯ ಡಿವೋರ್ಸ್​​: ಮೊದಲ ಫೋಟೋ ಪೋಸ್ಟ್​ ಮಾಡಿದ ನಟಿ

ನಟಿ ಸಮಂತಾ ಮಾಡಿರುವ ಈ ಪೋಸ್ಟ್​ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಅನೇಕರು ತರಹೇವಾರಿ ಕಮೆಂಟ್ ಮಾಡಿ, ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಅಕ್ಟೋಬರ್​ 2ರಂದು ಡಿವೋರ್ಸ್​ ವಿಚಾರ ಬಹಿರಂಗ ಪಡಿಸಿದ್ದ ನಟಿ ಸಮಂತಾ, ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು..’ ಎಂದು ಬರೆದುಕೊಂಡಿದ್ದರು. ಡಿವೋರ್ಸ್​ ಕನ್ಫರ್ಮ್​ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಕೌಂಟ್​ ಹೆಸರು ಬದಲಾವಣೆ ಮಾಡಿಕೊಂಡಿರುವ ನಟಿ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸಕ್ರಿಯರಾಗುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.