ಹೈದರಾಬಾದ್: ಬಹುಭಾಷಾ ನಟಿ ಸಮಂತಾ ವಿಚ್ಛೇದನ ಬಳಿಕ ತಮ್ಮ ದೈನಂದಿನ ಹವ್ಯಾಸವನ್ನು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಪೋಸ್ಟ್ ಮಾಡುವ ಮೂಲಕ ಆಗಿರುವ ನೋವನ್ನು ದೂರ ಮಾಡಿಕೊಳ್ಳುತ್ತಿದ್ದಾರೆ.
ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಮಂತಾ, ನಾಗ ಚೈತನ್ಯ ಅವರೊಂದಿಗೆ ಇದ್ದ ತಮ್ಮ ಹಳೆಯ ನೆನೆಪುಗಳನ್ನೆಲ್ಲ ಮರೆಯಲು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿದ್ದ ಕೆಲವು ಫೋಟೋಗಳನ್ನು ಅಳಿಸಿ ಹಾಕಿದ್ದಾರೆ. ಇದರಿಂದ ಸ್ಯಾಮ್ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.
![Samantha deletes her pics with Naga Chaitanya from Instagram](https://etvbharatimages.akamaized.net/etvbharat/prod-images/12551666_cin-1_2810newsroom_1635419905_1078.jpg)
ಅಕ್ಕಿನೇನಿ ಮತ್ತು ದಗ್ಗುಬಾಟಿ ಅವರ ಕುಟುಂಬ ಸದಸ್ಯರೊಂದಿಗಿನ ಹಲವು ಫೋಟೋಗಳನ್ನು ಹಾಗೆಯೇ ಇಟ್ಟುಕೊಂಡಿರುವ ಸಮಂತಾ, ಅವರ ನಿಶ್ಚಿತಾರ್ಥದ ಫೋಟೋ ಹಾಗೂ ಮದವೆಯ ಕೆಲ ಆಯ್ದ ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇವರ ಈ ನಿರ್ಧಾರ ನಾಗ ಚೈತನ್ಯ ಅಭಿಮಾನಿಗಳಿಗೆ ನಿರಾಸೆ ತಂದಿದೆ.
![Samantha deletes her pics with Naga Chaitanya from Instagram](https://etvbharatimages.akamaized.net/etvbharat/prod-images/13022588_sam-2_2810newsroom_1635419905_980.jpg)
ಇತ್ತೀಚೆಗೆ ಆಶ್ರಮವೊಂದಕ್ಕೆ ಭೇಟಿ ನೀಡಿದ್ದ ಸಮಂತಾ ಖುಷಿ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದನ್ನೆಲ್ಲ ನೋಡಿದ ಅಭಿಮಾನಿಗಳು ಮಾನಸಿಕ ನೆಮ್ಮದಿ ಹಾಗೂ ಶಾಂತಿಗಾಗಿ ಆಶ್ರಮಕ್ಕೆ ಭೇಟಿ ನೀಡಿರಬಹುದು ಎಂದು ಊಹೆ ಮಾಡಿಕೊಳ್ಳಲು ಆರಂಭಿಸಿದ್ದಾರೆ.