ಭಾರಿ ನಿರೀಕ್ಷೆ ಮೂಡಿಸಿದ್ದ 'ಸಲಗ' ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. 'ಸಲಗ' ಚಿತ್ರದ ಮೇಕಿಂಗ್ ವಿಡಿಯೋ ನೋಡಿದರೆ ಮೊದಲ ನಿರ್ದೇಶನದಲ್ಲಿ ದುನಿಯಾ ವಿಜಿ ಗೆದ್ದಂತೆ ಕಾಣ್ತಿದ್ದು, ಚಿತ್ರದ ಮೇಲಿನ ಭರವಸೆ ಡಬಲ್ ಮಾಡಿದೆ. ಪಕ್ಕಾ ರಾ ಸ್ಟೈಲ್ನಲ್ಲಿ ಸಲಗ ಮೂಡಿಬಂದಿದ್ದು, ಮಾಸ್ ಪ್ರಿಯರಿಗೆ ಭಾರಿ ಭೋಜನವಾಗೋದು ಗ್ಯಾರಂಟಿ. ಅಲ್ಲದೆ ಚಿತ್ರದ ಮೇಕಿಂಗ್ನಲ್ಲಿ ಕ್ಯಾಮೆರಾ ಕೈಚಳಕ ಆಕರ್ಷಿತವಾಗಿದ್ದು, ಸಲಗ ಉತ್ತಮ ಟೆಕ್ನಿಕಲ್ ಸಿನಿಮಾವಾಗುವ ಭರವಸೆ ಮೂಡಿಸಿದೆ.
ಈ ಬಗ್ಗೆ ಮಾತನಾಡಿದ ದುನಿಯಾ ವಿಜಯ್, ಸಲಗ ಮಾಸ್ ಚಿತ್ರವಾದ್ರು, ಚಿತ್ರದಲ್ಲಿ ನವೀರಾದ ಪ್ರೇಮಕಥೆ ಇದೆ. ಅಲ್ಲದೆ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ. ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಒಂದು ಉತ್ತಮ ಚಿತ್ರ ಮಾಡಿದ್ದೇವೆ ಎಂಬ ನಂಬಿಕೆ ನಮಗೆ ಇದೆ ಎಂದು ತಿಳಿದ್ರು.
ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾಕ್ಕೆ ಚರಣ್ ಮ್ಯೂಸಿಕ್ ಇದ್ದು ಕೇಳುಗರಿಗೆ ಆನಂದ ತರುವಂತಿದೆ. ಸಲಗ ಚಿತ್ರ ನನಗೆ ಹೊಸ ಅನುಭವ. ಫಸ್ಟ್‌ಟೈಂ ಪೊಲೀಸ್ ಆಫಿಸರ್ ಪಾತ್ರದಲ್ಲಿ ಕಾಣಿಸಿದ್ದೇನೆ. ಕ್ರೈಂ ಮತ್ತು ಪೊಲೀಸ್ ಎರಡನ್ನು ನೀಟಾಗಿ ವಿಜಯ್ ಬ್ಲೆಂಡ್ ಮಾಡಿದ್ದಾರೆ. ಚಿತ್ರದಲ್ಲಿ ತುಂಬಾ ವಿಷಯಗಳಿದ್ದು ಎಲ್ಲರಿಗೂ ಸಲಗ ಇಷ್ಟವಾಗುತ್ತದೆ ಎಂದು ಡಾಲಿ ಧನಂಜಯ್ ತಿಳಿಸಿದ್ರು.
ಇನ್ನು ಸಲಗ ಚಿತ್ರಕ್ಕೆ ಟಗರು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾವನ್ನು ದುನಿಯಾ ಸಿನಿಮಾ ರಿಲೀಸ್ ಆದ ತಿಂಗಳಾದ ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
- " class="align-text-top noRightClick twitterSection" data="">