ETV Bharat / sitara

ಸರಿಗಮಪ ರುಬೀನಾ ಇದೀಗ ಮಕ್ಕಳ ದಸರಾದ ಅಥಿತಿ : ಈ ಬಗ್ಗೆ ರುಬೀನಾ ಹೇಳಿದ್ದಿಷ್ಟು..? - ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಹಾಡು ಹೇಳಿ ಗಮನ ಸೆಳೆದ ಗ್ರಾಮೀಣ ಪ್ರತಿಭೆ ರುಬೀನಾ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ಮಕ್ಕಳ ದಸರಾ ಸಮಾರಂಭದಲ್ಲಿ ಅಥಿತಿಯಾಗಿ ಆಯ್ಕೆಯಾಗಿದ್ದಾಳೆ

ರುಬೀನಾ
author img

By

Published : Sep 24, 2019, 5:49 PM IST

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಹಾಡು ಹೇಳಿ ಗಮನ ಸೆಳೆದ ಗ್ರಾಮೀಣ ಪ್ರತಿಭೆ ರುಬೀನಾ ಇದೀಗ ರಾಜ್ಯದಲ್ಲಿ ಸೆಲೆಬ್ರಿಟಿಯಾಗಿದ್ದಾಳೆ.

ಹೌದು, ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ ಹಾಡನ್ನು ಸರ್ಕಾರಿ ಶಾಲೆಯ ಕುರಿತ ಹಾಡಾಗಿ ಪರಿವರ್ತಿಸಿ ಹಾಡಿದ ರುಬೀನಾ ಕೇವಲ ತೀರ್ಪುಗಾರರ ಮನ ಸೆಳೆದಿದ್ದಲ್ಲದೇ, ರಾಜ್ಯದ ನೂರಾರು ಜನರ ಮನಸೂರೆ ಮಾಡಿದ್ದರು. ಜೊತೆಗೆ ರಾಜಕುಮಾರ ಸಿನಿಮಾದ ನಾಯಕ ಅಪ್ಪು ಸಹ ರುಬೀನಾಳಿಗೆ ಶುಭ ಹಾರೈಸಿದ್ದರು.

ಈ ಪುಟ್ಟ ಪೋರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಆಕೆಗೊಂದು ಅತಿಥಿಯ ಸ್ಥಾನ ದೊರೆತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹಳ ವಿಜೃಂಭಣೆಯಿಂದ ನಡೆಯುವ ಐತಿಹಾಸಿಕ ಹಬ್ಬ ಮೈಸೂರು ದಸರಾದ ಮಕ್ಕಳ ದಸರಾ ಸಮಾರಂಭದಲ್ಲಿ ಅಥಿತಿಯಾಗಿ ರುಬೀನಾ ಆಯ್ಕೆಯಾಗಿದ್ದಾಳೆ.

ಇದೇ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಮೈಸೂರಿನ ಜಗನ್ಮೋಹನ್ ಪ್ಯಾಲೇಸ್​​ನಲ್ಲಿ ಆಯೋಜಿಸಲಿರುವ ಮಕ್ಕಳ ದಸರಾದಲ್ಲಿ ರುಬೀನಾ ಭಾಗವಹಿಸಲಿದ್ದಾಳೆ. ಮಕ್ಕಳ ದಸರಾಕ್ಕೆ ಅತಿಥಿಯಾಗಿ ನಾನು ಆಯ್ಕೆಗೊಂಡಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಜೀವನದ ಮಹತ್ತರವಾದ ಕ್ಷಣ. ನನ್ನ ಸಂತೋಷವನ್ನು ವಿವರಿಸಲು ಅಸಾಧ್ಯ. ಇದನ್ನು ನನ್ನ ತಂದೆ- ತಾಯಿಗೆ, ಗುರುಗಳಿಗೆ ಅರ್ಪಿಸುತ್ತೇನೆ ಎಂದು ರುಬೀನಾ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ರುಬೀನಾ ಹಾವೇರಿ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.

Intro:Body:ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಹಾಡು ಹೇಳಿ ಗಮನ ಸೆಳೆದ ಗ್ರಾಮೀಣ ಪ್ರತಿಭೆ ರುಬೀನಾ. ಹೌದು. ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುನಾರ ಚಿತ್ರದ ಬೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ ರಾಗದ ಸರ್ಕಾರಿ ಶಾಲೆಯ ಕುರಿತ ಹಾಡನ್ನು ಹಾಡಿದ ರುಬೀನಾ ಕೇವಲ ತೀರ್ಪುಗಾರರ ಮನ ಸೆಳೆದಿದ್ದಲ್ಲದೇ ನೂರಾರು ಕಿರುತೆರೆ ವೀಕ್ಷಕರ ಮನವನ್ನು ಕೂಡಾ ಸೆಳೆದಿದ್ದಾರೆ! ಜೊತೆಗೆ ರಾಜಕುಮಾರ ಸಿನಿಮಾದ ನಾಯಕ ಅಪ್ಪುವನ್ನು ಕೂಡಾ!

ಇಂತಿಪ್ಪ ಪುಟ್ಟ ಪೋರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಆಕೆಗೊಂದು ಅತಿಥಿಯ ಸ್ಥಾನ ದೊರೆತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯುವ ಐತಿಹಾಸಿಕ ಹಬ್ಬ ಮೈಸೂರು ದಸರಾದ ಮಕ್ಕಳ ದಸರಾ ದ ಸಮಾರಂಭಕ್ಕೆ ನಿಮ್ಮ ಪ್ರೀತಿಯ ರುಬೀನಾ ಆಯ್ಕೆ ಆಗಿದ್ದಾಳೆ.

ಇದೇಸೆಪ್ಟೆಂಬರ್ 30, ಅಕ್ಟೋಬರ್ 1 ರಂದು ಮೈಸೂರಿನ ಜಗನ್ಮೋಹನ್ ಪ್ಯಾಲೇಸ್ ನಲ್ಲಿ ಆಯೋಜಿಸಲಿರುವ ಮಕ್ಕಳ ದಸರಾದಲ್ಲಿ ರುಬೀನಾ ಭಾಗವಹಿಸಲಿದ್ದಾಳೆ. "ಮಕ್ಕಳ ದಸರಾ ಕ್ಕೆ ಅತಿಥಿಯಾಗಿ ನಾನು ಆಯ್ಕೆಗೊಂಡಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ಇದನ್ನು ನನ್ನ ಜೀವನದ ಮಹತ್ತರವಾದ ಕ್ಷಣ. ನನ್ನ ಸಂತೋಷವನ್ನು ವಿವರಿಸಲು ಅಸಾಧ್ಯ. ಇದನ್ನು ನನ್ನ ತಂದೆ- ತಾಯಿಗೆ, ಗುರುಗಳಿಗೆ ಅರ್ಪಿಸುತ್ತೇನೆ’ ಎಂದು ಸಂತಸದಿಂದ ಹೇಳುವ ರುಬೀನಾ ಹಾವೇರಿ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ 7 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.