ETV Bharat / sitara

ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ ಹಿರಿಯ ಗಾಯಕಿ ಎಸ್. ಜಾನಕಿ

ಸೆಲಬ್ರಿಟಿಗಳು ಆರೋಗ್ಯವಾಗಿದ್ದಾಗ ಅವರು ಇನ್ನಿಲ್ಲ ಎಂದು ಹಬ್ಬಿಸುವ ಸುಳ್ಳುಸುದ್ದಿಯಿಂದ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ನಾನು ಆರೋಗ್ಯವಾಗಿದ್ದೇನೆ. ದಯವಿಟ್ಟು ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ಎಸ್​. ಜಾನಕಿ ಮನವಿ ಮಾಡಿದ್ದಾರೆ.

S Janaki felt bad about Rumors
ಎಸ್. ಜಾನಕಿ
author img

By

Published : Jul 1, 2020, 9:44 AM IST

ಖ್ಯಾತ ಹಿರಿಯ ಗಾಯಕಿ ಎಸ್​​. ಜಾನಕಿ ಅಭಿಮಾನಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೆಲಬ್ರಿಟಿಗಳ ಬಗ್ಗೆ ಗಾಸಿಪ್ ಹರಡುವುದು ಸಾಮಾನ್ಯ. ಆದರೆ ಸೆಲಬ್ರಿಟಿ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುವುದು ಅವರು ಮನಸ್ಸಿಗೆ ಬಹಳ ನೋವುಂಟುಮಾಡುತ್ತದೆ ಎಂದು ಎಸ್. ಜಾನಕಿ ಬೇಸರ ವ್ಯಕ್ತಪಡಿಸಿದ್ದಾರೆ.

S Janaki felt bad about Rumors
ಹಿರಿಯ ಗಾಯಕಿ ಎಸ್. ಜಾನಕಿ

ಇತ್ತೀಚೆಗೆ ಎಸ್​​. ಜಾನಕಿ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳುಸುದ್ದಿ ಹಬ್ಬಿಸಿದ್ದರು. ಈ ಕಾರಣಕ್ಕೆ ಎಸ್​.ಜಾನಕಿ ಅವರ ಪುತ್ರ ಮುರಳಿಕೃಷ್ಣ ಅವರೇ ಮುಂದೆ ಬಂದು ಅಮ್ಮನಿಗೆ ಏನೂ ಆಗಿಲ್ಲ. ಚೆನ್ನೈ ಆಸ್ಪತ್ರೆಯಲ್ಲಿ ಒಂದು ಶಸ್ತ್ರಚಿಕಿತ್ಸೆ ನಡೆದಿದೆ. ಕೆಲವೇ ದಿನಗಳಲ್ಲಿ ಅವರು ಗುಣಮುಖರಾಗಿ ಮನೆಗೆ ವಾಪಸ್​​ ಆಗಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಖ್ಯಾತ ಗಾಯಕ ಎಸ್​.ಬಿ. ಬಾಲಸುಬ್ರಮಣ್ಯಂ ಕೂಡಾ ವಿಡಿಯೋ ಮಾಡಿ ದಯವಿಟ್ಟು ಸೂಕ್ತ ಮಾಹಿತಿ ಇಲ್ಲದೆ ಇಂತಹ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಇದೀಗ ಈ ಬಗ್ಗೆ ಸ್ವತ: ಎಸ್​. ಜಾನಕಿ ಅವರೇ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಈಗಾಗಲೇ 6 ಬಾರಿ ಸಾಯಿಸಲಾಗಿದೆ. ಇದರಿಂದ ಬಹಳ ಬೇಜಾರಾಗಿದೆ. ನನ್ನ ಬಗ್ಗೆ ಸುಳ್ಳುಸುದ್ದಿ ಕೇಳಿ ಆರೋಗ್ಯ ವಿಚಾರಿಸಲು ನಿರಂತರ ದೂರವಾಣಿ ಕರೆಗಳು ಬರುತ್ತಲೇ ಇವೆ. ಅವರಿಗೆಲ್ಲಾ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ ಎಂದು ಎಸ್. ಜಾನಕಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.