ಮುಂಬೈ (ಮಹಾರಾಷ್ಟ್ರ): ಬಾಲಿವುಡ್ನ ದಿಗ್ಗಜ ನಟ ದಿವಂಗತ ರಿಷಿ ಕಪೂರ್ ಅಭಿನಯದ ಕೊನೆಯ ಚಿತ್ರ 'ಶರ್ಮಾಜಿ ನಮ್‌ಕೀನ್' ಒಟಿಟಿಯಲ್ಲಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಹಿತೇಶ್ ಭಾಟಿಯಾ ನಿರ್ದೇಶಿಸಿದ 'ಶರ್ಮಾಜಿ ನಮ್‌ಕೀನ್' ಚಲನಚಿತ್ರವು ಮಾ.31ರಂದು ಪ್ರೈಮ್ ವಿಡಿಯೋದಲ್ಲಿ ಮೊದಲ ಪ್ರದರ್ಶನಗೊಳ್ಳಲಿದೆ. ಪ್ರೈಮ್ ವಿಡಿಯೋ, ಅಮೆಜಾನ್ ಓರಿನಲ್ ಮೂವಿ ಸಹ ಬಿಡುಗಡೆಯಾಗಲಿದೆ ಎಂದು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಬುಧವಾರ ಪ್ರಕಟಿಸಿದೆ.
ನಿವೃತ್ತ ಜೀವನದ ಕುರಿತಾದ ಚಿತ್ರದಲ್ಲಿ ಕಪೂರ್ ನಿಧನ ನಂತರ, ಉಳಿದ ಭಾಗಗಲ್ಲಿ ನಟ ಪರೇಶ್ ರಾವಲ್ ನಟಿಸಿದ್ದಾರೆ. ಒಂದು ಚಲನಚಿತ್ರದಲ್ಲಿ ಇಬ್ಬರು ನಟರು ಒಂದೇ ಪಾತ್ರವನ್ನು ನಿರ್ವಹಿಸಿದ ಮೊದಲ ನಿದರ್ಶನವಾಗಿದೆ.
ಅಲ್ಲದೇ, ನಟಿ ಜೂಹಿ ಚಾವ್ಲಾ, ಸುಹೇಲ್ ನಯ್ಯರ್, ತಾರುಕ್ ರೈನಾ, ಸತೀಶ್ ಕೌಶಿಕ್, ಶೀಬಾ ಚಡ್ಡಾ ಮತ್ತು ಇಶಾ ತಲ್ವಾರ್ ಸೇರಿ ಬಹುತಾರಾಗಣ ಚಿತ್ರವನ್ನು ಹೊಂದಿದೆ. 'ಶರ್ಮಾಜಿ ನಮ್‌ಕೀನ್' ಒಂದು ವಿಶೇಷವಾದ ಚಿತ್ರವಾಗಿದೆ. ದಿವಂಗತ ರಿಷಿ ಕಪೂರ್ ಮತ್ತು ಪರೇಶ್ ರಾವಲ್ ಒಂದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೊಂದು ಹೃದಯಸ್ಪರ್ಶಿ ಕಥೆಯುಳ್ಳ ಸಿನಿಮಾ. ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಇರುವ ಸಿನಿಪ್ರಿಯರು ಚಿತ್ರವನ್ನು ಮೆಚ್ಚುತ್ತಾರೆ ಎಂಬ ವಿಶ್ವಾಸ ಇದೆ ಎಂದು ಚಿತ್ರ ತಂಡ ಹೇಳಿದೆ.
ಇದನ್ನೂ ಓದಿ: ಹೊಸ ಚಿತ್ರದಲ್ಲಿ ರಣಬೀರ್ ಕಪೂರ್ - ಶ್ರದ್ಧಾ ಕಪೂರ್ ಬ್ಯೂಸಿ