ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜ ವೀರ ಮದಕರಿ ನಾಯಕ' ಚಿತ್ರ ಕಳೆದ ವರ್ಷ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇದೀಗ ಆ ಕುತೂಹಲಕ್ಕೆ ಚಿತ್ರತಂಡ ಫುಲ್ಸ್ಟಾಪ್ ಇಟ್ಟಿದೆ.
ದರ್ಶನ್ ಅಭಿನಯದ ಬಹು ನಿರೀಕ್ಷಿತ 'ರಾಜ ವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್ಗೆ ದಿನಾಂಕ ಫಿಕ್ಸ್ ಆಗಿದೆ. ದರ್ಶನ್ ಸದ್ಯಕ್ಕೆ 'ರಾಬರ್ಟ್' ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಅವರ ಬರ್ತಡೇ ನಂತರ ಈ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಮೊದಲ ಶೆಡ್ಯೂಲನ್ನು ಕೇರಳದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಲೊಕೇಶನ್ ಹುಡುಕಿದ್ದಾರೆ. ಕೇರಳದ ಹೆಸರಾಂತ ಜಲಪಾತಗಳ ಬಳಿ ಬೃಹತ್ ಸೆಟ್ ಹಾಕಲು ಎಲ್ಲಾ ತಯಾರಿ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದ ನಂತರ ಚಿತ್ರತಂಡ ಕೇರಳಕ್ಕೆ ಹಾರಲಿದೆ. ಇದರೊಂದಿಗೆ ಚಿತ್ರತಂಡ ದರ್ಶನ್ ಬರ್ತಡೇಗೆ ಸರ್ಪ್ರೈಸ್ ಕೊಡಲು ಸಿದ್ಧತೆ ನಡೆಸುತ್ತಿತ್ತು ಹುಟ್ಟುಹಬ್ಬಕ್ಕೆ 'ರಾಜ ವೀರ ಮದಕರಿ ನಾಯಕ' ಮೋಷನ್ ಪೋಸ್ಟರ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ.
'ರಾಜ ವೀರ ಮದಕರಿ ನಾಯಕ' ಚಿತ್ರದುರ್ಗದ ಮದಕರಿ ನಾಯಕನ ಜೀವನ ಆಧರಿತ ಸಿನಿಮಾವಾಗಿದ್ದು, ಬಿಗ್ ಬಜೆಟ್ನಲ್ಲಿ ರಾಕ್ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ಮದಕರಿ ನಾಯಕನ ಪಾತ್ರದಲ್ಲಿ ನಟಿಸಲಿದ್ದು, ದರ್ಶನ್ ಕಾಸ್ಟ್ಯೂಮನ್ನು ಬಾಂಬೆಯ ಹೆಸರಾಂತ ನಾಲ್ಕು ಡಿಸೈನರ್ಗಳು ವಿಶೇಷವಾಗಿ ಡಿಸೈನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸುಮಾರು 184 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಹುಟ್ಟುಹಬ್ಬದ ನಂತರ ರಾಬರ್ಟ್, ಮದಕರಿ ನಾಯಕನಾಗಿ ಅವತಾರ ತಾಳಲಿದ್ದಾರೆ.