ETV Bharat / sitara

ರಾಜ್​ ಕೌಶಲ್​ ನಿಧನ: ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಮಂದಿರಾ ಬೇಡಿ - ನಿರ್ದೇಶಕ ರಾಜ್​ ಕೌಶಲ್

ನಿರ್ಮಾಪಕ, ನಿರ್ದೇಶಕ ರಾಜ್​ ಕೌಶಲ್ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜ್​ ಅವರು ನಟಿ, ನಿರೂಪಕಿ ಮಂದಿರಾ ಬೇಡಿ ಅವರ ಪತಿ.

Raj Kaushal funeral
ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಮಂದಿರಾ ಬೇಡಿ
author img

By

Published : Jun 30, 2021, 7:22 PM IST

ಹೈದರಾಬಾದ್: ಮಂದಿರಾ ಬೇಡಿ ಅಭಿನಯದ ಪ್ಯಾರ್ ಮೇನ್ ಕಭಿ ಕಭಿ ಮತ್ತು ಶಾದಿ ಕಾ ಲಡ್ಡೂ ಮುಂತಾದ ಹಿಟ್​ ಚಲನಚಿತ್ರಗಳನ್ನು ನಿರ್ದೇಶಿಸಿದ ರಾಜ್ ಕೌಶಲ್ ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ಮೂಲ ತಿಳಿದಿದೆ. 50 ವರ್ಷದ ರಾಜ್​ ನಟಿ, ನಿರೂಪಕಿ ಮಂದಿರಾ ಬೇಡಿ ಮತ್ತು ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಜ್ ಕೌಶಲ್ ಹಾಗೂ ಮಂದಿರಾ ಬೇಡಿ 20 ವರ್ಷಗಳಿಂದ ಜೊತೆಯಾಗಿದ್ದರು. ಆದರೆ, ಇಂದು ರಾಜ್​ ಮೃತಪಟ್ಟಿರುವುದು ಮಂದಿರಾ ಹಾಗೂ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಇನ್ನು ಪತಿಯ ಅಂತಿಮ ಸಂಸ್ಕಾರವನ್ನು ಮಂದಿರಾ ನೆರವೇರಿಸಿದ್ದಾರೆ. ಈ ವೇಳೆ, ನಟರಾದ ರೋನಿತ್ ರಾಯ್, ಸಮೀರ್ ಸೋನಿ, ಆಶಿಶ್ ಚೌಧರಿ, ಮತ್ತು ಪ್ಯಾರ್ ಮೇನ್ ಕಭಿ ಕಭಿ ನಟ ಡಿನೋ ಮೊರಿಯಾ ಸೇರಿದಂತೆ ಆಪ್ತ ವಲಯ ರಾಜ್​ ಭಾಗಿಯಾಗಿದ್ದಾರೆ.

ಕೌಶಲ್ 1989 ರಲ್ಲಿ ಕಾಪಿರೈಟರ್ ಆಗಿ ವೃತ್ತಿ ಆರಂಭಿಸಿದ ಅವರು, ನಂತರ ಮುಕುಲ್ ಆನಂದ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಬಳಿಕ ತಮ್ಮದೇ ಆದ ಜಾಹೀರಾತು-ಉತ್ಪಾದನಾ ಕಂಪನಿಯನ್ನು ಸ್ಥಾಪಿಸಿ, 800 ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.