ನಿನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್, 'ದಮಯಂತಿ' ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿ ರಾಧಿಕಾಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಈ ವೇಳೆ ಮಾತನಾಡಿದ ರಾಧಿಕಾ ಮತ್ತೆ ದರ್ಶನ್ ಜೊತೆ ನಟಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 'ಲಕ್ಕಿ' ಸಿನಿಮಾಗೂ ಮೊದಲೇ ದರ್ಶನ್ ಜೊತೆ ರಾಧಿಕಾ ಕುಮಾರಸ್ವಾಮಿ ಸಿನಿಮಾ ಮಾಡಬೇಕಿತ್ತಂತೆ. ಈಗ ಆ ಕಾಲ ಕೂಡಿ ಬಂದಿದೆ ಎಂದು ರಾಧಿಕಾ ಹೇಳುತ್ತಾರೆ.
ಈಗಾಗಲೇ ದರ್ಶನ್ ಜೊತೆ ರಾಧಿಕಾ ಮಾತನಾಡಿದ್ದು ಆ್ಯಕ್ಟಿಂಗ್ ಜೊತೆಗೆ ನಿರ್ಮಾಣ ಕೂಡಾ ಮಾಡುವ ಪ್ಲ್ಯಾನ್ನಲ್ಲಿದ್ದಾರಂತೆ. 'ಮಂಡ್ಯ' 'ಅನಾಥರು' ಸಿನಿಮಾದಲ್ಲಿ ದರ್ಶನ್ ಹಾಗೂ ರಾಧಿಕಾ ಜೊತೆಯಾಗಿ ನಟಿಸಿದ್ದರು. ಈ ಜೋಡಿ ಕೂಡಾ ಜನರಿಗೆ ಬಹಳ ಇಷ್ಟ ಆಗಿತ್ತು. ಇದೀಗ ಮತ್ತೆ ಈ ಜೋಡಿಯನ್ನು ತೆರೆ ಮೇಲೆ ನೋಡುವ ಕಾತರದಲ್ಲಿದ್ದಾರೆ ಜನರು.
![Radhika darshan new movie updates, ತೆರೆ ಮೇಲೆ ಮತ್ತೆ ರಾಧಿಕಾ ಹಾಗೂ ದರ್ಶನ್](https://etvbharatimages.akamaized.net/etvbharat/prod-images/5046207_748_5046207_1573620451238.png)
ಇನ್ನು ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾ ಅಮ್ಮನ ಬರ್ತ್‌ಡೇಗೆಂದು ವಿಶೇಷ ಉಡುಗೊರೆ ರೆಡಿ ಮಾಡಿದ್ದರಂತೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ನನಗೆ ಆಗಲೇ ಗಿಫ್ಟ್ ರೆಡಿ ಇದೆ. ಆದರೆ ಏನು ಗಿಫ್ಟ್ ಎಂಬುದು ಗೊತ್ತಿಲ್ಲ. ನಿನ್ನೆ ಬಾಟಲ್ ಒಂದಕ್ಕೆ ಪೇಯ್ಟಿಂಗ್ ಮಾಡಿ ಅದಕ್ಕೆ ಸ್ಟಿಕ್ಕರ್ಗಳನ್ನು ಅಂಟಿಸುತ್ತಿದ್ದಳು. ಬಹುಶ: ಅದನ್ನೇ ಗಿಫ್ಟ್ ಆಗಿ ನೀಡಬಹುದು ಎಂದು ರಾಧಿಕಾ ಹೇಳಿದ್ದಾರೆ.