ETV Bharat / sitara

ಲೋಹಿತ್​ ಸಿನಿಮಾದಲ್ಲಿ ನಟಿಸಲು ಓಕೆ ಮಾಡಿದ್ರು 'ಬುಲ್​​ - ಬುಲ್​​' - Rachita Ram has agreed to act in a new movie

‘ಲೈಫ್​ ಈಸ್​ ಬ್ಯೂಟಿಫುಲ್’​ ಸಿನಿಮಾಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದ ಮಲಯಾಳಂ ಮೂಲದ ಸಬೂ ಅಲೋಶಿಯಸ್​ ಹಾಗೂ ಅರುಣ್​ಕುಮಾರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾಕ್ಕೆ ರಚಿತಾ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

Rachita Ram is acting in a movie produced by Lohit
ರಚಿತಾ
author img

By

Published : Nov 11, 2020, 4:59 PM IST

ಡಿಂಪಲ್​ ಕ್ವೀನ್​​, ಬುಲ್​ ಬುಲ್​​ ರಚಿತಾ ರಾಮ್​​ ಇದೀಗ ಹಲವು ಕಥೆಗಳ ಜೊತೆ ಫುಲ್​​ಬ್ಯುಸಿ ಇದ್ದಾರೆ. ಲಾಕ್​​ಡೌನ್​ ಸಂದರ್ಭದಲ್ಲಿ ಕೆಲವು ಕಥೆಗಳನ್ನು ಕೇಳಿ ಅದ್ರಲ್ಲಿ ಕೆಲವನ್ನು ಆಯ್ಕೆ ಮಾಡಿಕೊಂಡು ಶೂಟಿಂಗ್​ ಕೂಡ ಮಾಡುತ್ತಿದ್ದಾರೆ. ಸದ್ಯ ರಚಿತಾ ರಾಮ್​​ ರಾಘವೇಂದ್ರ ನಿರ್ದೇಶನದ ‘ಪಂಕಜ ಕಸ್ತೂರಿ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ, ಅಲ್ಲದೇ ಪ್ರೇಮ್​​ ನಿರ್ದೇಶನ ಏಕ್​ ಲವ್​ ಯಾ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ.

Rachita Ram is acting in a movie produced by Lohit
ರಚಿತಾ

ಇದರ ನಡುವೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಬುಲ್​ ಬುಲ್​ ಒಪ್ಪಿಗೆ ನೀಡಿದ್ದಾರೆ. ಈ ಹಿಂದೆ ‘ಲೈಫ್​ ಈಸ್​ ಬ್ಯೂಟಿಫುಲ್’​ ಸಿನಿಮಾಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದ ಮಲಯಾಳಂ ಮೂಲದ ಸಬೂ ಅಲೋಶಿಯಸ್​ ಹಾಗೂ ಅರುಣ್​ಕುಮಾರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾಕ್ಕೆ ರಚಿತಾ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ರಚಿತಾ ಅಭಿನಯದ ಈ ಸಿನಿಮಾವನ್ನು ನಿರ್ದೇಶಕ ಲೋಹಿತ್ ತಮ್ಮ ‘ಫ್ರೈಡೇ ಫಿಲ್ಮ್ಸ್​​ ಬ್ಯಾನರ್​ ಅಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಇರುವ ಫೋಟೋ ಶೇರ್​ ಮಾಡಿರುವ ರಚಿತಾ ರಾಮ್​​​​, ಲೈಫ್​​ ಈಸ್​ ಸೋ ಕಲರ್​​ಫುಲ್​​. ಒಳ್ಳೆಯ ಕಥೆಗಳಿದ್ದಾಗ ಅದರಲ್ಲಿ ನಾನು ನಟಿಸಲು ಖುಷಿ ಪಡುತ್ತೇನೆ. ಲೋಹಿತ್​​​, ಅರುಣ್​​ ಮತ್ತು ಸಬು ತಂಡದೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ಇನ್​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.