ETV Bharat / sitara

ಮತ್ತೆ ಸಿಗರೇಟ್ ಹಿಡಿದ ಡಿಂಪಲ್ ಕ್ವೀನ್​​​...ಯಾವ ಚಿತ್ರಕ್ಕಾಗಿ ಈ ಗೆಟಪ್​​​...? - Rachita ram new photoshoot

'ಏಕ್ ಲವ್ ಯಾ' ಚಿತ್ರಕ್ಕಾಗಿ ಸಿಗರೇಟ್ ಹಿಡಿದಿದ್ದ ರಚಿತಾ ರಾಮ್ , ಮತ್ತೆ ಸಿಗರೇಟ್ ಹಾಗೂ ರಿವಾಲ್ವರ್ ಹಿಡಿದಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಯಾವ ಚಿತ್ರಕ್ಕಾಗಿ ಎಂಬುದು ಮಾತ್ರ ರಚಿತಾ ಹಾಗೂ ಚಿತ್ರತಂಡ ಸೀಕ್ರೇಟ್ ಬಿಟ್ಟುಕೊಟ್ಟಿಲ್ಲ.

Rachita hold Cigarette again
ಡಿಂಪಲ್ ಕ್ವೀನ್
author img

By

Published : Nov 17, 2020, 10:13 AM IST

ರಚಿತಾ ರಾಮ್ ಇತ್ತೀಚಿನ ದಿನಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರಕ್ಕಾಗಿ ಲಿಪ್ ಲಾಕ್ ಮಾಡಿ ಸಿಗರೇಟ್ ಹಿಡಿದು ಧಮ್ ಬಿಟ್ಟಿದ್ದ ಡಿಂಪಲ್ ಕ್ವೀನ್​​​, ಇದೀಗ ಮತ್ತೆ ಸಿಗರೇಟ್ ಹಿಡಿದಿದ್ದಾರೆ.

Rachita hold Cigarette again
ಹೊಸ ಚಿತ್ರಕ್ಕಾಗಿ ರಿವಾಲ್ವರ್ ಹಿಡಿದ ರಚಿತಾ ರಾಮ್

ರಚಿತಾ ರಾಮ್ ಈ ವರ್ಷ ಕೂಡಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹೊಸ ಚಿತ್ರಕ್ಕಾಗಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿರುವ ರಚಿತಾ ರಾಮ್​ ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ರಚಿತಾ ಒಂದು ಕೈಯ್ಯಲ್ಲಿ ಸಿಗರೇಟ್, ಮತ್ತೊಂದು ಕೈಯ್ಯಲ್ಲಿ ರಿವಾಲ್ವರ್ ಹಿಡಿದಿದ್ದಾರೆ. ಈ ಫೋಟೋಗಳನ್ನು ನೋಡಿದರೆ ರಚಿತಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಆದರೆ ಇದು ಯಾವ ಚಿತ್ರಕ್ಕಾಗಿ ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ದೊರೆತಿಲ್ಲ.

Rachita hold Cigarette again
'ಏಕ್ ಲವ್ ಯಾ' ಚಿತ್ರದಲ್ಲಿ ಧಮ್ ಎಳೆದ ರಚಿತಾ (ಧೂಮಪಾನ ಆರೋಗ್ಯಕ್ಕೆ ಹಾನಿಕರ)

ಕಳೆದ ಒಂದು ತಿಂಗಳ ಅಂತರದಲ್ಲಿ ರಚಿತಾ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಂದು ತಮಿಳಿನ 'ಕೊಲಮಾವು ಕೋಕಿಲ' ಕನ್ನಡಕ್ಕೆ 'ಪಂಕಜ ಕಸ್ತೂರಿ' ರೀಮೇಕ್ ಆಗುತ್ತಿದೆ. ಎರಡನೆಯದು ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಅವರ ಸಿನಿಮಾ. ಪಂಕಜ ಕಸ್ತೂರಿ ಮಾದಕ ದ್ರವ್ಯ ಮಾಫಿಕಾ ಕುರಿತಾದ ಸಿನಿಮಾ ಆಗಿದ್ದು ಇದರಲ್ಲಿ ರಚಿತಾ ರಾಮ್ ಸ್ಮಗ್ಲಿಂಗ್‍ನಲ್ಲಿ ತೊಡಗಿಸಿಕೊಳ್ಳುವ ಮಧ್ಯಮ ವರ್ಗದ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ, ಇದು ಲೋಹಿತ್ ನಿರ್ಮಾಣದ ಇನ್ನೊಂದು ಚಿತ್ರವಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಇದೂ ಕೂಡಾ ಅಂತಿಮ ಅಲ್ಲ, ಏಕೆಂದರೆ, ರಚಿತಾ ಹೊಸದಾಗಿ ಐದಾರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಇದು ಯಾವ ಚಿತ್ರದ ಫೋಟೋಶೂಟ್ ಎಂದು ಅವರೇ ಅಧಿಕೃತವಾಗಿ ಹೇಳಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.