ETV Bharat / sitara

ಕೊರೊನಾ ಕುರಿತು ತಾವೇ ಜಾಗೃತಿ​ ಗೀತೆ ರಚಿಸಿ ಹಾಡಿದ ಸಲ್ಲು ಭಾಯ್​: ನಾಳೆ ಯೂಟ್ಯೂಬ್​ನಲ್ಲಿ ಬಿಡುಗಡೆ​ - ಕೊರೊನಾ ವೈರಸ್​

ಕೊರೊನಾ ಕುರಿತು ಜಾಗೃತಿ ಮೂಡಿಸಲು ಬಾಲಿವುಡ್​ ನಟ ಸಲ್ಮಾನ್​ ಖಾನ್​ ಪ್ಯಾರ್ ಕರೋನಾ ಎಂಬ ಹಾಡನ್ನು ಹಾಡಿದ್ದು, ಇದೇ ಸೋಮವಾರ ಅಂದರೆ ನಾಳೆ ಅವರ ಯೂಟ್ಯೂಬ್​ ಚಾನಲ್​ನಲ್ಲಿ ಬಿಡುಗಡೆಯಾಗಲಿದೆಯಂತೆ.

Salman Khan
ಸಲ್ಮಾನ್​ ಖಾನ್​
author img

By

Published : Apr 19, 2020, 10:37 PM IST

ಮುಂಬೈ(ಮಹಾರಾಷ್ಟ್ರ): ಕೊರೊನಾ ವೈರಸ್​ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವ ಸಲ್ಮಾನ್​ ಖಾನ್​​, "ಪ್ಯಾರ್ ಕರೋನಾ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡಿನ ಮೂಲಕ ಮತ್ತೆ ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸಿದ್ದಾರೆ.

ಸಲ್ಮಾನ್ ಅವರೇ ಸಾಹಿತ್ಯ ರಚಿಸಿರವ ಈ ಹಾಡಿಗೆ ಹುಸೇನ್ ದಲಾಲ್ ಸಂಗೀತ ನೀಡಿದ್ದಾರೆ. ‘ಪ್ಯಾರ್ ಕರೋನಾ’ ಹಾಡು ಸಲ್ಮಾನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸೋಮವಾರ ಬಿಡುಗಡೆಯಾಗಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಹಾಡಿನ ಟೀಸರ್​​ ಹಂಚಿಕೊಂಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಸೋಮಾವಾರ ನಿಮ್ಮ ಮುಂದೆ ಬರಲಿದ್ದೇನೆ ಎಂದು ಸಲ್ಲು ಬರೆದುಕೊಂಡಿದ್ದಾರೆ.

ಸಲ್ಮಾನ್​ ಖಾನ್​ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾಗೂ ತಮ್ಮ ಅಭಿಮಾನಿಗಳಿಗೆ ಕೊರೊನಾ ಮಹಾಮಾರಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಇತ್ತೀಚೆಗಷ್ಟೆ ಲಾಕ್​ಡೌನ್​ ಉಲ್ಲಂಘನೆ ಮಾಡಿದ ಕೆಲವರಿಗೆ ಜೋಕರ್​ ಎಂದು ಕರೆಯುವ ಮೂಲಕ ಜಾಗೃತಿಯ ಸಂದೇಶ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.