ETV Bharat / sitara

ಆಯುಧಪೂಜೆಯಂದು ಪುನೀತ್ ಅಭಿಮಾನಿಗಳಿಗೆ 'ಯುವರತ್ನ' ತಂಡದಿಂದ ಭರ್ಜರಿ ಗಿಫ್ಟ್​​...! - ಪುನೀತ್ ಹೊಸ ಸಿನಿಮಾ

ಅಕ್ಟೋಬರ್​ 7 ರ ಆಯುಧಪೂಜೆ ದಿನದಂದು ಪುನೀತ್ ರಾಜ್​ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಸ್ವತ: ಪುನೀತ್ ರಾಜ್​​ಕುಮಾರ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಪುನೀತ್ ಜರ್ಮನಿಯಲ್ಲಿದ್ದು ನಾಳೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.

'ಯುವರತ್ನ'
author img

By

Published : Oct 5, 2019, 2:47 PM IST

ಪವರ್ ಸ್ಟಾರ್ ಪುನೀತ್ ರಾಜ್​​​​​​​​​​​​​​​​​ಕುಮಾರ್ ಅಭಿನಯದ ಬಹುನಿರೀಕ್ಷಿತ 'ಯುವರತ್ನ' ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್​​​ನ್ಯೂಸ್​​. ಆ ದಿನ 'ಯುವರತ್ನ' ಸಿನಿಮಾದ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​​ ನೀಡುತ್ತಿದೆ.

ಬಹಳ ದಿನಗಳಿಂದ 'ಯುವರತ್ನ' ಟೀಸರ್​​​ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಪವರ್ ಸ್ಟಾರ್​ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತೋಷದ ವಿಷಯ. ಟೀಸರ್ ಬಿಡುಗಡೆ ಆಗುತ್ತಿರುವ ವಿಷಯವನ್ನು ಸ್ವತಃ ಪುನೀತ್ ರಾಜ್​​ಕುಮಾರ್ ಸೆಲ್ಫಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಪುನೀತ್ ರಾಜ್​​ಕುಮಾರ್ ಕುಟುಂಬದೊಂದಿಗೆ ಜಮರ್ನಿಯಲ್ಲಿ ದಸರಾ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದಲೇ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಶೇರ್ ಮಾಡಿದ್ದಾರೆ. ಆಯುಧ ಪೂಜೆ ಹಬ್ಬದಂದು ಸಂಜೆ 5.30 ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ 'ಯುವರತ್ನ' ಟೀಸರ್ ಲಾಂಚ್ ಆಗುತ್ತಿದೆ. ಚಿತ್ರವನ್ನು ಕೆಜಿಎಫ್​​ ನಿರ್ಮಿಸಿದ್ದ ವಿಜಯ್ ಕಿರಂಗದೂರ್ ನಿರ್ಮಿಸಿದ್ದರೆ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದಾರೆ. 'ರಾಜಕುಮಾರ' ಚಿತ್ರಕ್ಕೆ ಹಾರೈಸಿದ ರೀತಿಯೇ ಈ ಚಿತ್ರಕ್ಕೂ ಹಾರೈಸಿ ಎಂದು ಪುನೀತ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ಅಪ್ಪು ಅಕ್ಟೋಬರ್ 6 ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ.

Intro:ಆಯುಧ ಪೂಜ ಹಬ್ಬಕೆ ಸಿಕ್ತು ಯುವ ರತ್ನ ಟೀಂ ನಿಂದ ಭರ್ಜರಿ ಗಿಫ್ಟ್..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನೀರಿಕ್ಷೀತ ಚಿತ್ರ" ಯುವರತ್ನ " ಚಿತ್ರದ ಟೀಸರ್ ಆಯುಧ ಪೂಜೆ ಹಬ್ಬದಂದು ರಿಲೀಸ್ ಆಗ್ತಿದೆ.ಬಹಳ ದಿನಗಳಗಳಿಂದ ಯುವರತ್ನ ಟೀಸರ್ ಗಾಗಿ ಬಕಪಕ್ಷಿಗಳ ಹಾಗೇ ಕಾಯ್ತಿದ್ದ ದೊಡ್ಮನೆ ಅಭಿಮಾನಿಗಳಿಗೆ ಕೊನೆಗು ದಸರಾ ಹಬ್ಬಕ್ಕೆ ಯುವರತ್ನ ಚಿತ್ರತಂಡ ಭರ್ಜರಿ ಗಿಫ್ಟ್ ಕೊಡಲು ರೆಡಿಯಾಗಿದೆ‌.ಇನ್ನೂ ಈ ವಿಷ್ಯವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜರ್ಮನಿ ಇಂದ ವಿಡಿಯೋ ಮಾಡುವ ಮೂಲಕ ಯುವರತ್ನ ಚಿತ್ರದ ಟೀಸರ್ ಲಾಂಚ್ ವಿಷ್ಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.ಆಯುಧ ಪೂಜೆ ಹಬ್ಬದಂದು ಸಾಯಂಕಾಲ‌೫:೩೦ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ಯುವರತ್ನ ಟೀಸರ್ ಲಾಂಚ್ ಆಗ್ತಿದೆ.Body:ಚಿತ್ರದ ನಂತರ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಹಾಗೂ ವಿಜಯ್ ಕಿರಂಗೂರು ನಿರ್ಮಾಣದಲ್ಲಿ ಯುವರತ್ನ ನಿರ್ಮಾಣವಾಗಿದ್ದು
.ರಾಜಕುಮಾರ ಚಿತ್ರಕ್ಕೆ ಹಾರೈಸಿದ ರೀತಿ ಯುವರತ್ನ ಚಿತ್ರಕ್ಕೂ ಹಾರೈಸಿ ಎಂದು ಅಪ್ಪು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.ಸದ್ಯ ಪವರ್ ಸ್ಟಾರ್ ಫ್ಯಾಮಿಲಿ ಜೊತೆ ಜರ್ಮನಿಯಲ್ಲಿ ದಸರಾ ವೇಕೇಷನ್ ಎಂಜಾಯ್ ಮಾಡ್ತಿದ್ದು, ಅಕ್ಟೋಬರ್ ೬ ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.