ETV Bharat / sitara

ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ : ಅಪ್ಪು ಇಲ್ಲದೆ ಮಂಕಾಗಿದೆ ರಾಜಕುಮಾರನ ಮನೆ - ಧೃತಿ

1999 ಡಿಸೆಂಬರ್ 1ರಂದು ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಲವಾರು ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಹಸೆಮಣೆ ಏರಿದರು‌. ‌ಈ ಜೋಡಿಯನ್ನ ನೋಡಿ ಡಾ ರಾಜ್ ಕುಮಾರ್ ಮುದ್ದಾದ ಜೋಡಿ ಅಂತಾ ಶುಭ ಹಾರೈಸಿದ್ರಂತೆ..

ಪುನೀತ್-ಅಶ್ವಿನಿ
ಪುನೀತ್-ಅಶ್ವಿನಿ
author img

By

Published : Dec 1, 2021, 7:01 PM IST

ಕನ್ನಡ ಚಿತ್ರರಂಗದಲ್ಲಿ ಹೆಸರಿಗೆ ತಕ್ಕಂತೆ ರಾಜಕುಮಾರನಾಗಿ ಮೆರೆದು, ಬಾರದ ಲೋಕಕ್ಕೆ ಹೋಗಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಚಿತ್ರರಂಗದ ಮುತ್ತು ಆಗಿದ್ದ ಪುನೀತ್ ರಾಜ್‍ಕುಮಾರ್ ಸರಳತೆ ಗುಣಗಳು, ಅವರ ಹವ್ಯಾಸಗಳು ಹಾಗೂ ಸಿನಿಮಾಗಳ ಬಗ್ಗೆ ಬಣ್ಣಿಸೋಕ್ಕೆ ಪದಗಳಿಲ್ಲ.

ಪುನೀತ್-ಅಶ್ವಿನಿ ದಾಪಂತ್ಯಕ್ಕೆ 22 ವರ್ಷ
ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

ಅಪ್ಪು ಎಲ್ಲಾರು ಮೆಚ್ಚುವಂತ ಮಗ ಹಾಗೂ ಗಂಡನಾಗಿ ಬರೀ ಸಿನಿಮಾಗಳಲ್ಲಿ ನಟಿಸಿಲ್ಲ. ನಿಜ ಜೀವನದಲ್ಲೂ ತಂದೆ, ಮಗ ಹಾಗೂ ಪತಿ ಕರ್ತವ್ಯವನ್ನ ಅಷ್ಟೇ ಚೆನ್ನಾಗಿ ನಿಭಾಯಿಸಿದವರು. ಈ ಮಾತಿಗೆ ಪೂರಕವಾಗಿ ಸಿನಿಮಾದಲ್ಲಿ ಅದೆಷ್ಟೋ ಬ್ಯುಸಿ ಇದ್ದರು, ಫ್ಯಾಮಿಲಿ ಜೊತೆ ಕಾಲ ಕಳೆಯೋದನ್ನ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ.

ಪುನೀತ್-ಅಶ್ವಿನಿ ದಾಪಂತ್ಯಕ್ಕೆ 22 ವರ್ಷ
ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

ಕನ್ನಡ ಚಿತ್ರರಂಗದ ಮೇಡ್ ಫಾರ್ ಈಚ್ ಅದರ್ ಎಂಬ ಜೋಡಿ ಅಂತಾ ಕರೆಯಿಸಿಕೊಂಡವರು, ಪುನೀತ್ ರಾಜ್ ಕುಮಾರ್ ಹಾಗೂ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್. ಈ ಆದರ್ಶ ದಂಪತಿಗೆ ಡಿಸೆಂಬರ್ 1ಕ್ಕೆ ಮದುವೆ ಆಗಿ 22 ವರ್ಷ ತುಂಬುತ್ತಿದೆ.

ಪುನೀತ್ ರಾಜ್ ಕುಮಾರ್ ಇಂದು ಬದುಕಿದ್ದರೆ ಅಶ್ವಿನಿಯವರ ಜೊತೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನ ಆಚರಿಸಿಕೊಳ್ಳಬೇಕಿತ್ತು. ಆದರೆ, ವಿಧಿಯಾಟದ ಮುಂದೆ, ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನ ಅಪ್ಪು ಬಾರದ ಲೋಕಕ್ಕೆ ಹೋಗಿರೋದು ಇಂದಿಗೂ ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಇನ್ನು ಪವರ್ ಸ್ಟಾರ್ ಹಾಗೂ ಅಶ್ವಿನಿ ಅವರದು ಮುದ್ದಾದ ಲವ್ ಸ್ಟೋರಿ ಇದೆ‌.

ಮಕ್ಕಳೊಂದಿಗೆ ಪುನೀತ್-ಅಶ್ವಿನಿ
ಮಕ್ಕಳೊಂದಿಗೆ ಪುನೀತ್-ಅಶ್ವಿನಿ

ರಾಜವಂಶದ ಕಿರಿಯ ಮಗನಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಬಾಲ್ಯದಿಂದಲೇ ಬಾಲ ನಟನಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದವರು. ಚಿಕ್ಕವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದಿರೋ ಈ ರಾಜರತ್ನ, ಲವ್ ಸ್ಟೋರಿ ಕೇಳಿದ್ರೆ, ನೀವು ಕೂಡ ಥ್ರಿಲ್ ಆಗ್ತೀರಾ.

ಪವರ್ ಸ್ಟಾರ್, ಸಿನಿಮಾರಂಗಕ್ಕೂ ಬರುವುದಕ್ಕಿಂತ ಮುಂಚೆ, 1996ರ ಸಮಯದಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ನಡೆಸುತ್ತಿದ್ದ ವಜ್ರೇಶ್ವರಿ ಸಂಸ್ಥೆಯ ನಿರ್ಮಾಣ ಕಾರ್ಯದಲ್ಲಿ ಕೆಲಸಗಳನ್ನ ಮಾಡುತ್ತಿದ್ದರು.

ಪುನೀತ್-ಅಶ್ವಿನಿ ದಾಪಂತ್ಯಕ್ಕೆ 22 ವರ್ಷ
ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

ಈ ಮಧ್ಯೆ ಪುನೀತ್ ರಾಜ್‍ಕುಮಾರ್ ಮೌಂಟ್ ಕಾರ್ಮೆಲ್ ಕಾಲೇಜ್‌ನಲ್ಲಿ ಓದುತ್ತಿದ್ದ ಅಶ್ವಿನಿಯವರನ್ನ ನೋಡಿ ಲವ್​​ನ​ಲ್ಲಿ ಬಿದ್ದಿದ್ದರು.‌ ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಅಶ್ವಿನಿಯವರನ್ನ ನೋಡಿದ್ದ ಪುನೀತ್ ಕಾಮನ್ ಫ್ರೆಂಡ್ ಮುಖಾಂತರ ಅಶ್ವಿನಿಯವರ ಪರಿಚಯವಾಗುತ್ತದೆ. ಅಶ್ವಿನಿ ಅವರು ಚಿಕ್ಕಮಗಳೂರಿನ ಮಲೆನಾಡ ಪ್ರದೇಶದವರು. ಇನ್ನು ಇವರಿಬ್ಬರ ಸ್ನೇಹ ಗಾಢವಾಗಿ ಪ್ರೀತಿಗೆ ತಿರುಗಿತು.

ಪುನೀತ್-ಅಶ್ವಿನಿ ದಾಪಂತ್ಯಕ್ಕೆ 22 ವರ್ಷ
ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

ಇವರಿಬ್ಬರ ಪ್ರೀತಿಯ ವಿಚಾರವನ್ನು ಮೊದಲು ಮನೆಯಲ್ಲಿ ಹೇಳಿದವರೇ ಶಿವಣ್ಣ. ಆ ಸಂದರ್ಭದಲ್ಲಿ ಪಾರ್ವತಮ್ಮ ಈ ವಿಚಾರವನ್ನು ನಿಮ್ಮ ತಂದೆಯ ಬಳಿ ಕೇಳು ಎಂಬುದಾಗಿ ಹೇಳಿದ್ದರಂತೆ.

ಆಗ ಪುನೀತ್‌ಗೆ ಸಹಾಯ ಮಾಡಿದ್ದು ದೊಡ್ಡಣ್ಣ ಶಿವರಾಜ್ ಕುಮಾರ್. ಅಪ್ಪಾಜಿಗೆ ಹೇಳಿದ್ರಂತೆ, ಆಗ ಅಣ್ಣಾವ್ರು ಕೂಡ ಅವರಿಬ್ಬರೂ ಒಪ್ಪಿದರೆ ಮದುವೆ ಆಗಲಿ ಅಂತಾ ಹೇಳಿದ್ರಂತೆ. ಈ ಮಾತನ್ನ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಪುನೀತ್-ಅಶ್ವಿನಿ ದಾಪಂತ್ಯಕ್ಕೆ 22 ವರ್ಷ
ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

1999 ಡಿಸೆಂಬರ್ 1ರಂದು, ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಲವಾರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದರು‌. ‌ಈ ಜೋಡಿಯನ್ನ ನೋಡಿ ಡಾ ರಾಜ್ ಕುಮಾರ್ ಮುದ್ದಾದ ಜೋಡಿ ಅಂತಾ ಶುಭ ಹಾರೈಸಿದ್ರಂತೆ. ಈ ಪ್ರೀತಿಯ ಫಲವಾಗಿ ಪುನೀತ್ ರಾಜ್‍ಕುಮಾರ್ ಹಾಗೂ ಅಶ್ವಿನಿಗೆ ಧೃತಿ ಹಾಗೂ ವಂದಿತಾ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

ಪುನೀತ್-ಅಶ್ವಿನಿ ದಾಪಂತ್ಯಕ್ಕೆ 22 ವರ್ಷ
ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

ಸದ್ಯ ಪುನೀತ್ ರಾಜ್‍ಕುಮಾರ್ ದೊಡ್ಡ ಮಗಳು ಧೃತಿ ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ‌. ಚಿಕ್ಕ ಮಗಳು ವಂದಿತಾ ಬೆಂಗಳೂರಿನ ಪ್ರತಿಷ್ಠಿತ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ‌‌. ದೊಡ್ಡ ಮನೆಯ ರಾಜ-ರಾಣಿಯಂತೆ ಬದುಕುತ್ತಿದ್ದ ಪುನೀತ್ ರಾಜ್‍ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‍ಕುಮಾರ್, ಸಮಾಜಕ್ಕೆ ಮಾದರಿ ದಂಪತಿ ಆಗಿದ್ದರು‌‌. ಆದರೆ, ಇವರಿಬ್ಬರ ಪ್ರೀತಿ ನೋಡಿ ಆ ದೇವರಿಗೂ ಇಷ್ಟ ಆಯಿತು ಅನಿಸುತ್ತೆ. ಅದಕ್ಕೆ, ಪುನೀತ್ ರಾಜ್‍ಕುಮಾರ್ ಬಹುಬೇಗ ಅವರ ಹತ್ತಿರ ಕರೆಯಿಸಿಕೊಂಡಿದ್ದಾನೆ.

ಮಕ್ಕಳೊಂದಿಗೆ ಪುನೀತ್-ಅಶ್ವಿನಿ
ಮಕ್ಕಳೊಂದಿಗೆ ಪುನೀತ್-ಅಶ್ವಿನಿ

ಆದರೆ, ರಾಜಕುಮಾರ್ ಇಲ್ಲದ ಸದಾಶಿವನಗರ ಮನೆ ಬಿಕೋ ಅನಿಸುತ್ತಿದೆ‌. ಪತ್ನಿ ಅಶ್ವಿನಿ ಬಾಳಲ್ಲಿ ಪುನೀತ್ ರಾಜ್‍ಕುಮಾರ್ ಇಲ್ಲದೆ, ತುಂಬಾ ನೋವಿನಲ್ಲಿ ಜೀವನ ನಡೆಸುವ ಕಾಲ ಬಂದಿದೆ. ಇದು ಕೋಟ್ಯಂತರ ಅಭಿಮಾನಿಗಳಿಗೆ ಅಲ್ಲದೇ ರಾಜ್ ಕುಟುಂಬಕ್ಕೂ ಎಂದು ಮರೆಯದ ನೋವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.