ಪುನೀತ್ ರಾಜ್‍ಕುಮಾರ್ ಅವರ ಪಿಆರ್ಕೆ ಬ್ಯಾನರ್ ಸಂಸ್ಥೆಯಡಿ ಇದುವರೆಗೂ ತಯಾರಾದ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆದಿದೆ. ಇದೇ ಮೊದಲ ಬಾರಿಗೆ ಪಿಆರ್ಕೆ ಅಡಿ ತಯಾರಾದ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಅಭಿನಯದ 'ಲಾ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಜುಲೈ 17 ರಂದು ಪ್ರಸಾರವಾಗಲಿದೆ. ಇದೀಗ ಪಿಆರ್ಕೆ ಸಂಸ್ಥೆಯ ಮತ್ತೊಂದು ಸಿನಿಮಾ ಫ್ರೆಂಚ್ ಬಿರ್ಯಾನಿ ಬಿಡುಗಡೆಗೆ ಕೂಡಾ ಸಮಯ ನಿಗದಿಯಾಗಿದೆ. 'ಲಾ' ಬಿಡುಗಡೆಯಾಗಿ ಒಂದು ವಾರದ ಬಳಿಕ ಫ್ರೆಂಚ್ ಬಿರ್ಯಾನಿ ಅಭಿಮಾನಿಗಳಿಗೆ ಮನರಂಜನೆ ಉಣಬಡಿಸಲು ರೆಡಿಯಾಗಿದೆ.
ದಾನಿಶ್ ಸೇಠ್ ಹಾಗೂ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಫ್ರೆಂಚ್ ಬಿರಿಯಾನಿ ಕಾಮಿಡಿ ಹಾಗೂ ಕೌಟುಂಬಿಕ ಕಥೆಯನ್ನೊಂದಿದೆ. ಹ್ಯಾಪಿ ನ್ಯೂ ಇಯರ್ ಚಿತ್ರವನ್ನು ನಿರ್ದೇಶಿಸಿದ್ದ ಪನ್ನಾಗಭರಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಾನಿಶ್ ಸೇಠ್ ಜೊತೆಗೆ ಪಿಟೋಬಾಶ್ ತ್ರಿಪಾಠಿ, ದಿಶಾ ಮದನ್, ಸಾಲ್ ಯೂಸುಫ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಪಿಆರ್ಕೆ ಸಂಸ್ಥೆ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಥಿಯೇಟರ್ನಲ್ಲಿ ಬಿಡುಗಡೆ ಆಗದೆ ನೇರವಾಗಿ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿರುವ ಎರಡನೇ ಸಿನಿಮಾ 'ಫ್ರೆಂಚ್ ಬಿರ್ಯಾನಿ'. ಇದರಿಂದ ಕನ್ನಡ ಸಿನಿಮಾ ನಿರ್ಮಾಪಕರಿಗೆ ಬಿಸಿ ತಟ್ಟುವುದಂತೂ ನಿಜ.