ETV Bharat / sitara

'ಮದಗಜ' ಟೀಸರ್​​ ಬಿಡುಗಡೆ ಮಾಡಲಿದ್ದಾರೆ ಪ್ರಶಾಂತ್​ ನೀಲ್ - Prashant Neil

ಡಿಸೆಂಬರ್​ 17 ರ ಬೆಳಗ್ಗೆ 09 ಗಂಟೆ 09 ನಿಮಿಷಕ್ಕೆ ಸರಿಯಾಗಿ, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಪ್ರಶಾಂತ್​ ನೀಲ್​ 'ಮದಗಜ' ಚಿತ್ರದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಮಾಡಲಿದ್ದಾರೆ.

Prashant Neil
ಪ್ರಶಾಂತ್​ ನೀಲ್
author img

By

Published : Dec 14, 2020, 3:44 PM IST

ನಟ ಶ್ರೀಮುರುಳಿಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್​ ನೀಡಿದವರು ಪ್ರಶಾಂತ್​ ನೀಲ್​. ಹಲವು ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ಮುರುಳಿ ಅವರಿಗೆ 'ಉಗ್ರಂ' ಎಂಬ ಸೂಪರ್​ ಹಿಟ್​ ನೀಡಿ, ಅವರನ್ನು ಮತ್ತೊಮ್ಮೆ ಮಿಂಚುವಂತೆ ಮಾಡಿದ್ದು, ಇದೇ ಪ್ರಶಾಂತ್​ ನೀಲ್​. ಇದೀಗ 'ಕೆಜಿಎಫ್​ - ಚಾಪ್ಟರ್​ 2' ನ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಇದೀಗ ಮತ್ತೊಮ್ಮೆ ಮುರುಳಿಯ ಜೊತೆಯಾಗುತ್ತಿದ್ದಾರೆ.

ಶ್ರೀಮುರುಳಿ ಅಭಿನಯದ 'ಮದಗಜ' ಚಿತ್ರದ ಫಸ್ಟ್​ಲುಕ್​ ಟೀಸರ್​ ಇದೇ ಡಿಸೆಂಬರ್​ 17 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಈಗ ಟೀಸರ್​ ಬಿಡುಗಡೆಯಾಗುವುದಕ್ಕೆ ಪ್ರಶಾಂತ್​ ನೀಲ್​ ಒಪ್ಪಿಕೊಂಡಿದ್ದಾರೆ. ಡಿಸೆಂಬರ್​ 17 ರ ಬೆಳಗ್ಗೆ 09 ಗಂಟೆ 09 ನಿಮಿಷಕ್ಕೆ ಸರಿಯಾಗಿ, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಪ್ರಶಾಂತ್​ ನೀಲ್​ 'ಮದಗಜ' ಚಿತ್ರದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಮಾಡಲಿದ್ದಾರೆ. ಹಾಗಂತ ಖುದ್ದು ನಿರ್ದೇಶಕ ಮಹೇಶ್​ ಗೌಡ ಅವರೇ ತಿಳಿಸಿದ್ದಾರೆ.

ಅಂದ ಹಾಗೆ 'ಮದಗಜ' ಚಿತ್ರದ ಮೂರನೆಯ ಹಂತದ ಚಿತ್ರೀಕರಣ ಇದೀಗ ನಡೆಯುತ್ತಿದೆ. ಲಾಕ್​ಡೌನ್​ಗೂ ಮುನ್ನವೇ ಕಾಶಿಯಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಆ ನಂತರ ಅಕ್ಟೋಬರ್​ನಲ್ಲಿ ಮೈಸೂರಿನ ಸುತ್ತಮುತ್ತ ಇನ್ನೊಂದು ಹಂತದ ಚಿತ್ರೀಕರಣ ಮುಗಿದಿತ್ತು. ಇದೀಗ ಮೂರನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಒಂದು ಫೈಟ್​ ಸೇರಿದಂತೆ ಚಿತ್ರದ ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.

'ಮದಗಜ' ಚಿತ್ರದಲ್ಲಿ ಶ್ರೀಮುರುಳಿ, ಆಶಿಕಾ ರಂಗನಾಥ್​, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಮಹೇಶ್​ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನೂ ರಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.