'ಕೆಜಿಎಫ್' ಚಿತ್ರದ ಮೂಲಕ ಯಶ್ ದೊಡ್ಡ ಮಟ್ಟದ ಯಶಸ್ಸು ಗಳಿಸಿದರೂ ಅವರಿಗೆ ಅದಕ್ಕೂ ಮುನ್ನ ಹೆಸರು ತಂದುಕೊಟ್ಟದ್ದು 'ಕಿರಾತಕ' ಚಿತ್ರ. ಪ್ರದೀಪ್ ರಾಜ್ ನಿರ್ದೇಶನದ ಈ ಚಿತ್ರ ಯಶ್ ಯಶಸ್ಸಿಗೆ ಮುನ್ನುಡಿ ಬರೆದಿತ್ತು. ಈ ಚಿತ್ರದ ಯಶಸ್ಸಿನ ನಂತರ ಪ್ರದೀಪ್ ರಾಜ್ 'ಕಿರಾತಕ 2' ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದರು.
![Kirataka 2 movie completed](https://etvbharatimages.akamaized.net/etvbharat/prod-images/kirataka-21604942888307-40_0911email_1604942899_504.jpg)
ಯಶ್ ಕೂಡಾ ಕಿರಾತಕ 2 ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕಿರಾತಕ-2 ಟೈಟಲ್ ಪ್ರದೀಪ್ ರಾಜ್ ಬಳಿ ಇದ್ದುದರಿಂದ ಯಶ್‍ಗೆ ಆ ಹೆಸರು ಸಿಗಲಿಲ್ಲ.ಕೊನೆಗೆ ಯಶ್ ಅಭಿನಯದ ಚಿತ್ರಕ್ಕೆ 'ಮೈ ನೇಮ್ ಈಸ್ ಕಿರಾತಕ' ಎಂಬ ಹೆಸರನ್ನು ಇಡಲಾಯಿತು. ಅನಿಲ್ ಕುಮಾರ್ ನಿರ್ದೇಶನದ ಮತ್ತು ಜಯಣ್ಣ ನಿರ್ಮಾಣದ ಈ ಚಿತ್ರದ ಲುಕ್‍ಟೆಸ್ಟ್ ಸಹ ನಡೆದಿತ್ತು. ಇನ್ನೇನು ಈ ಚಿತ್ರ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ 'ಕೆಜಿಎಫ್' ಶುರುವಾಗಿ ಈ ಚಿತ್ರ ನಿಂತುಹೋಯ್ತು. ಮತ್ತೆ ಆ ಸಿನಿಮಾ ಆರಂಭವಾಗುತ್ತದೋ ಇಲ್ಲವೋ ಗೊತ್ತಿಲ್ಲ.
![Kirataka 2 movie completed](https://etvbharatimages.akamaized.net/etvbharat/prod-images/mh-mum-ent-yash-honed-acting-in-theatre-mhc10001_30092020191521_3009f_1601473521_849.jpeg)
ಈ ನಡುವೆ ಆಗ ಸುಮ್ಮನಾಗಿದ್ದ ಪ್ರದೀಪ್ ರಾಜ್, ಈಗ ಸದ್ದಿಲ್ಲದೆ ಕಿರಾತಕ 2 ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಆದರೆ ಯಶ್ ಅಲ್ಲ, ಯಶಸ್ ಶೆಟ್ಟಿ ಈ ಚಿತ್ರದಲ್ಲಿ ಹೀರೋ ಆಗಿರುವುದು ವಿಶೇಷ. ಈ ಈ ಚಿತ್ರದಲ್ಲಿ ಯಶ್ ಶೆಟ್ಟಿ ಜೊತೆ ಬೇರೆ ಯಾರೆಲ್ಲಾ ನಟಿಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರದೀಪ್ ರಾಜ್ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ಸದ್ಯದಲ್ಲೇ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳಲಿವೆ ಎನ್ನಲಾಗುತ್ತಿದೆ.