ಕನ್ನಡ ಚಿತ್ರರಂಗದ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಇಂದು ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
![Power Star puneeth raj kumar meet to Ravi Shankar Guruji](https://etvbharatimages.akamaized.net/etvbharat/prod-images/kn-bng-05-ravishankar-gurujiyanna-meet-madida-puneeth-rajkaumar-7204735_09122020214240_0912f_1607530360_59.jpg)
ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದ ಪಕ್ಕದಲ್ಲಿಯೇ ಪುನೀತ್ ರಾಜ್‍ಕುಮಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ಮುಗಿಸಿದ ಬಳಿಕ ಪುನೀತ್ ರಾಜ್‍ಕುಮಾರ್, ಅಣ್ಣನ ಮಗ ಯುವರಾಜ್ ಕುಮಾರ್, ಜಿಮ್ ಟ್ರೈನರ್ ಶೆಟ್ಟಿ ಹಾಗೂ ಸ್ನೇಹಿತರ ಜೊತೆ ಶ್ರೀ ರವಿಶಂಕರ್ ಗುರೂಜಿಯವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಸ್ವಲ್ಪ ಹೊತ್ತು ಗುರೂಜಿ ಜೊತೆ ಕಾಲ ಕಳೆದಿದ್ದಾರೆ.
![Power Star puneeth raj kumar meet to Ravi Shankar Guruji](https://etvbharatimages.akamaized.net/etvbharat/prod-images/kn-bng-05-ravishankar-gurujiyanna-meet-madida-puneeth-rajkaumar-7204735_09122020214240_0912f_1607530360_346.jpg)
ರವಿಶಂಕರ್ ಜೊತೆಗಿನ ಪುನೀತ್ರ ಫೋಟೋಗಳನ್ನು ಸಿನಿಮಾ ಫೋಟೋಗ್ರಾಫರ್ ಚಂದನ್ ಕ್ಲಿಕ್ಕಿಸಿದ್ದಾರೆ. ಇನ್ನು ಇತ್ತೀಚೆಗೆ ಬಳ್ಳಾರಿಯಲ್ಲಿ ಜೇಮ್ಸ್ ಚಿತ್ರದ ಶೂಟಿಂಗ್ ಮುಗಿಸಿ ಇದೀಗ ರವಿಶಂಕರ್ ಗುರೂಜಿ ಆಶ್ರಮದ ಪಕ್ಕದಲ್ಲಿ ಚಿತ್ರೀಕರಣ ನಡೆಯುತ್ತಿದೆ.
![Power Star puneeth raj kumar meet to Ravi Shankar Guruji](https://etvbharatimages.akamaized.net/etvbharat/prod-images/kn-bng-05-ravishankar-gurujiyanna-meet-madida-puneeth-rajkaumar-7204735_09122020214240_0912f_1607530360_310.jpg)