ETV Bharat / sitara

''ನವರಾತ್ರಿ" ಚಿತ್ರದ ಮೂಲಕ‌ ಎರಡನೇ ಇನ್ನಿಂಗ್ಸ್ ಆರಂಭಿಸಿದ ''ಒರಟ''ನ ರಾಣಿ..! - ಸ್ಯಾಂಡಲ್​ವುಡ್​ನಲ್ಲಿ ಎರಡನೇ ಇನ್ನಿಂಗ್ಸ್​

ಒರಟ ಐಲವ್ ಯೂ ಸಿನಿಮಾ ಖ್ಯಾತಿಯ ನಟಿ ಹೃದಯ ಅವಂತಿಕ ಇದೀಗ ''ನವರಾತ್ರಿ" ಚಿತ್ರದ ಮೂಲಕ‌ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಾಯಕಿಯಾಗಿ ಹೃದಯ ಅವಂತಿಕ
author img

By

Published : Sep 13, 2019, 10:30 AM IST

ಒರಟ ಐಲವ್ ಯೂ ಹಾಗೂ ತ್ರಾಟಕ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿ ಮರೆಯಾಗಿದ್ದ ನಟಿ ಹೃದಯ ಅವಂತಿಕ ಈಗ ನವರಾತ್ರಿ ಚಿತ್ರದ ಮೂಲಕ ಸ್ಯಾಂಡಲ್​ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಮತ್ತೆ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ.

avanthika
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಾಯಕಿಯಾಗಿ ಹೃದಯ ಅವಂತಿಕ

ನವ ನಿರ್ದೇಶಕ ಲಕ್ಷ್ಮೀಕಾಂತ್ ಚೆನ್ನ ‘ನವರಾತ್ರಿ’ ಚಿತ್ರಕ್ಕೆ ಮೊದಲ ಬಾರಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಕಾಫಿಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ. ಇನ್ನು ನವರಾತ್ರಿ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಒಳಗೊಂಡಿದ್ದು, ನವರಸಗಳಿಂದ ಕೂಡಿದ ಚಿತ್ರವಾಗಿದೆ. ಇಲ್ಲಿ ದೇವರು ಹಾಗೂ ದೆವ್ವ ಎರಡು ಅಂಶಗಳು ಪ್ರಮುಖ ಪಾತ್ರ ನಿರ್ವಹಿಸಿದ್ದು, ನಟಿ ಹೃದಯ ಅವಂತಿಕ ಈ ಸಿನಿಮಾದಲ್ಲಿ ಮಾಡರ್ನ್ ಹಾಗೂ ಸಾಂಪ್ರದಾಯಿಕ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಪದ್ಮಾವತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ನಾಯಕನಾದರೆ, ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಒಂದು ಫೈಟ್ ಒಳಗೊಂಡಿದ್ದು, ಒಂದು​ ಸಾಂಗ್​ ಕೂಡ ಇಲ್ಲದಿರುವುದು ಚಿತ್ರದ ವಿಶೇಷತೆ. ತೆಲುಗು ಸಿನಿಮಾ ‘ಛೋಟಾ ಭೀಮ್’ ಹಾಗೂ ‘ಮನು’ ಖ್ಯಾತಿಯ ನರೇಶ್ ಕುಮಾರನ್ ನವರಾತ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು, ದಸರಾ ವೇಳೆಗೆ ಚಿತ್ರ ರಿಲೀಸ್ ಆಗಲಿದೆ. ಇನ್ನು ನವರಾತ್ರಿ ಮೂಲಕ ಮತ್ತೆ ನಟಿ ಅವಂತಿಕ ಸ್ಯಾಂಡಲ್​ವುಡ್ ನಲ್ಲಿ ಬ್ಯುಸಿಯಾಗ್ತಾರಾ ಕಾದು ನೋಡಬೇಕಿದೆ.

Intro:ನವರಾತ್ರಿ" ಚಿತ್ರದ ಮೂಲಕ‌ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಲು ರೆಡಿಯಾದ ಒರಟ ಐ ಲವ್ ಯೂ ಖ್ಯಾತಿಯ ನಟಿ ಹೃದಯ ಅವಂತಿಕ.!!

ಒರಟ ಐಲವ್ ಯೂ ಹಾಗೂ ತ್ರಾಟಕ ಚಿತ್ರದಲ್ಲಿ ನಾಯಕಿ ನಟಿಸಿದ್ದ ನಟಿ ಹೃದಯ ಅವಂತಿ ಸದ್ದಿಲ್ಲದೆ ತೆರೆ ಮರೆಗೆ ಸರಿದಿದ್ರು.ಅದ್ರೆ ಈಗ ಮತ್ತೆ‌ ನಟಿ ಅವಂತಿ
ನವರಾತ್ರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು.ಮತ್ತೆ ಅದೃಷ್ಟ ಪರಿಕ್ಷೇಗೆ ರೆಡಿಯಾಗಿದ್ದಾರೆ. ನವ ನಿರ್ದೇಶಕ ಲಕ್ಷ್ಮೇಕಾಂತ್ ಚೆನ್ನ ‘ನವರಾತ್ರಿ’ ಚಿತ್ರಕ್ಕೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ. ಇನ್ನು ನವರಾತ್ರಿ ಚಿತ್ರರ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದ್ದೂ, ನವರಸಗಳಿಂದ ಕೂಡಿದ ಅಂಶಗಳನ್ನು ಒಳಗೊಂಡಿದೆBody:ಇಲ್ಲಿ ದೇವರು ಹಾಗೂ ದೆವ್ವ ಎರಡು ಅಂಶಗಳು ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದು , ನಟಿ ಹೃದಯ ಅವಂತಿ ಚಿ್್ರತ್ರದಲ್ಲಿ ಮಾರ್ಡನ್ ಹಾಗೂ ಸಾಂಪ್ರದಾಯಿಕ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ
ಪದ್ಮವಾತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ನಾಯಕನಾದರೆ, ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಒಂದು ಫೈಟ್ ಒಳಗೊಂಡಿದ್ದೂ, ಯಾವುದೇ ರೀತಿಯ ಹಾಡಿಲ್ಲದಿರುವುದೇ ಚಿತ್ರದ ವಿಶೇಷವಾಗಿದೆ.
ತೆಲುಗು ಸಿನಿಮಾ ‘ಛೋಟಾ ಭೀಮ್’ ಹಾಗೂ ‘ಮನು’ ಖ್ಯಾತಿಯ ನರೇಶ್ ಕುಮಾರನ್ ನವರಾತ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು,ದಸರಾ ವೇಳೆ್ಗಗೆ ನವರಾತ್ರಿ ಚಿತ್ರ ರಿಲೀಸ್ ಆಗಲಿದ್ದು,, ಈ ಚಿತ್ರದ ಮೂಲಕ ಮತ್ತೆ ಅವಂತಿಕ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗ್ತಾರ ಕಾದು ನೋಡಬೇಕಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.