ಹೈದರಾಬಾದ್ (ತೆಲಂಗಾಣ) : ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಬಹು ನಿರೀಕ್ಷಿತ ಭೋಲಾ ಶಂಕರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಮೆಹರ್ ರಮೇಶ್ ನಿರ್ದೇಶನದ ಭೋಲಾ ಶಂಕರ್ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ತಮಿಳಿನ ಬ್ಲಾಕ್ ಬಸ್ಟರ್ ವೇದಾಲಂನ ತೆಲುಗು ರಿಮೇಕ್ ಆಗಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಪೋಸ್ಟರ್ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಚಿರಂಜೀವಿ, ಭೋಲಾ ಶಂಕರ್ ಫಸ್ಟ್‌ಲುಕ್ ರಿಲೀಸ್ ಆಗಿದೆ. ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು ಎಂದಿದ್ದಾರೆ. ಚಿರಂಜೀವಿ ಜೊತೆ ನಾಯಕಿಯಾಗಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳಲಿದ್ದರೆ, ಭೋಲಾ ಶಂಕರ್ ಚಿತ್ರದಲ್ಲಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಚಿರಂಜೀವಿ ಅವರ ಸಹೋದರಿಯಾಗಿ ನಟಿಸಲಿದ್ದಾರೆ.
- " class="align-text-top noRightClick twitterSection" data="
">
ಭೋಲಾ ಶಂಕರ್ ಸಿನಿಮಾ ಅನಿಲ್ ಸುಂಕರ ಅವರ ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಕ್ರಿಯೇಟಿವ್ ಕಮರ್ಷಿಯಲ್ಸ್‌ನಡಿ ನಿರ್ಮಾಣ ಮಾಡಲಾಗುತ್ತಿದೆ. ಬೆರಳೆಣಿಕೆಯಷ್ಟೇ ಸಿನಿಮಾಗಳಲ್ಲಿ ನಟಿಸುತ್ತಿರುವ ಮೆಗಾಸ್ಟಾರ್ ಅವರ ಆಚಾರ್ಯ ಶೂಟಿಂಗ್ ಮುಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಇವರ ಮತ್ತೊಂದು ಸಿನಿಮಾ ಗಾಡ್‌ಫಾದರ್ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆಗೆ ಇನ್ನೂ ಒಂದೆರಡು ಪ್ರಾಜೆಕ್ಟ್‌ಗಳನ್ನು ಚಿರಂಜೀವಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾಶಿವರಾತ್ರಿಗೆ ಡಾರ್ಲಿಂಗ್ ಪ್ರಭಾಸ್ ಗುಡ್ ನ್ಯೂಸ್ ; ಆದಿಪುರುಷ್ ಚಿತ್ರ ಬಿಡುಗಡೆಯ ದಿನಾಂಕ ರಿವೀಲ್