ETV Bharat / sitara

ಪ್ರತಿ ಗಂಟೆಗೆ 305 ಕಿಮೀ ವೇಗ.. 3 ಕೋಟಿ ವೆಚ್ಚದ ಲ್ಯಾಂಬೋರ್ಗಿನಿ ಫ್ಯಾನ್ಸಿ ನಂಬರ್‌ಗೆ ಜೂ.NTR ಖರ್ಚು ಮಾಡಿದ್ದೆಷ್ಟು?!

author img

By

Published : Sep 23, 2021, 4:50 PM IST

Updated : Sep 23, 2021, 5:07 PM IST

ಇದು ಲ್ಯಾಂಬೋರ್ಗಿನಿಯ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಸರಣಿಯ ದುಬಾರಿ ಕಾರು. ಇದನ್ನು ಖರೀದಿ​ಸುವ ಮೂಲಕ ಈ ಮಾಡೆಲ್‌ ಕಾರು ಖರೀದಿಸಿರುವ ದೇಶದ ಮೊದಲ ವ್ಯಕ್ತಿ ಎಂದು ಜೂ.ಎನ್‌.ಟಿ.ಆರ್‌ ಪರಿಗಣಿಸಲ್ಪಟ್ಟಿದ್ದಾರೆ.

NTR
NTR

ಹೈದರಾಬಾದ್​​: ಟಾಲಿವುಡ್​ ನಟ ಜೂನಿಯರ್​ ಎನ್​ಟಿಆರ್ (ಎನ್‌.ಟಿ.ರಾಮರಾವ್ ಜೂನಿಯರ್)​ ಕಳೆದ ಅಗಸ್ಟ್​ ತಿಂಗಳಲ್ಲಿ ಲ್ಯಾಂಬೋರ್ಗಿನಿ ಕಂಪನಿಯ ಐಷಾರಾಮಿ ಕಾರನ್ನು ವಿದೇಶದಿಂದ ಖರೀದಿಸಿದ್ದರು.

ಅಂದಹಾಗೆ ಇದು ಲ್ಯಾಂಬೋರ್ಗಿನಿಯ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಸರಣಿಯ ದುಬಾರಿ ಕಾರು. ಇದನ್ನು ಖರೀದಿ​ಸುವ ಮೂಲಕ ಈ ಮಾಡೆಲ್‌ ಕಾರು ಖರೀದಿಸಿರುವ ದೇಶದ ಮೊದಲ ವ್ಯಕ್ತಿ ಎಂದು ಜೂ.ಎನ್‌.ಟಿ.ಆರ್‌ ಪರಿಗಣಿಸಲ್ಪಟ್ಟಿದ್ದಾರೆ. ಇದೀಗ ಕಾರಿನ ಫ್ಯಾನ್ಸಿ ನೋಂದಣಿ ಸಂಖ್ಯೆ​ಗೋಸ್ಕರ​ ಅವರು ಬರೋಬ್ಬರಿ 17 ಲಕ್ಷ ರೂ. ಖರ್ಚು ಮಾಡಿದ್ದಾರೆ.

  • .@tarak9999 who is the proud owner of India's first #Lamborghini Urus Graphite Capsule to get 9999 as vehicle number.

    The star has paid a whopping ₹17 lacs for TS09 FS 9999 registration number at the Khairatabad RTO Office.#ManOfMassesNTR

    — Manobala Vijayabalan (@ManobalaV) September 23, 2021 " class="align-text-top noRightClick twitterSection" data=" ">

ಫ್ಯಾನ್ಸಿ ನಂಬರ್​​​ TS09 FS 9999 ಪಡೆದುಕೊಳ್ಳುವ ಉದ್ದೇಶದಿಂದ ಬರೋಬ್ಬರಿ 17 ಲಕ್ಷ ರೂಪಾಯಿ ಪಾವತಿಸಿದ್ದು, ಈ ವಿಚಾರವನ್ನು ಖುದ್ದಾಗಿ ತೆಲಂಗಾಣದ ಖೈರತಾಬಾದ್​​ನ ಆರ್​ಟಿಒ​​ ಮೂಲಗಳು ತಿಳಿಸಿವೆ.

LAMBORGHINI CAR NUMBER
ಎನ್​ಟಿಆರ್​ ಲ್ಯಾಂಬೋರ್ಗಿನಿ ಕಾರು

ಲ್ಯಾಂಬೋರ್ಗಿನಿ ಉರುಸ್​​ ಐಷಾರಾಮಿ ಕಾರಿನ ಬೆಲೆ ಅಂದಾಜು 3.16 ಕೋಟಿ ರೂ ಅಂತೆ. ಇದು ಎಕ್ಸ್​ ಷೋರೂಂ ಬೆಲೆಯಾಗಿದ್ದು, ತೆರಿಗೆ ಸೇರಿ ಮತ್ತಷ್ಟು ಹೆಚ್ಚಾಗಲಿದೆ.

NTR
ನಟ ಜೂನಿಯರ್​ ಎನ್​​ಟಿಆರ್​​​

ಏನಿದರ ಸ್ಪೆಷಾಲಿಟಿ?: ಲ್ಯಾಂಬೋರ್ಗಿನಿ ಊರುಸ್​​​​​ 4.0-ಲೀಟರ್ ವಿ 8 ಟ್ವಿನ್-ಟರ್ಬೊ ಇಂಜಿನ್ ಆಗಿದ್ದು, 6,000 ಆರ್‌ಪಿಎಮ್‌ನ 650 ಬಿಎಚ್‌ಪಿ ಇಂಜಿನ್​ ಹೊಂದಿದೆ. ಗರಿಷ್ಠ 6,800 ಆರ್‌ಪಿಎಂ ಮತ್ತು 2,250 ಆರ್‌ಪಿಎಂನಲ್ಲಿ 850 ಎನ್ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಊರುಸ್ 0-100 ಕಿಮೀ ವೇಗವನ್ನು 3.6 ಸೆಕೆಂಡುಗಳಲ್ಲಿ ಹಾಗೂ 0-200 ಕಿಮೀ ವರೆಗಿನ ವೇಗವನ್ನ 12.8 ಸೆಕೆಂಡುಗಳಲ್ಲಿ ಗರಿಷ್ಠವಾಗಿ ಪಡೆಯುತ್ತದೆ. ಈ ಕಾರು, ಪ್ರತಿ ಗಂಟೆಗೆ 305 ಕಿಮೀ ವೇಗದಲ್ಲಿ ಮುನ್ನುಗ್ಗಲಿದೆ.

ಇದನ್ನೂ ಓದಿ: ದುಬಾರಿ ಲ್ಯಾಂಬೋರ್ಗಿನಿ ಕಾರ್​ ಖರೀದಿಸಿದ ಟಾಲಿವುಡ್​ ನಟ: ಇಂಥಾ ಕಾರು ಖರೀದಿಸಿದ ಮೊದಲ ಭಾರತೀಯ ಇವರೇ.!

ಜೂನಿಯರ್​​ ಎನ್​ಟಿಆರ್ ಸದ್ಯ ರಾಜಮೌಳಿ ನಿರ್ದೇಶನದ​​ ಆರ್‌ಆರ್‌ಆರ್ ಸಿನಿಮಾದಲ್ಲಿ ನಟನೆ ಮಾಡಿದ್ದು, ಬಿಡುಗಡೆಗೋಸ್ಕರ ಕಾತುರದಿಂದ ಎಲ್ಲರೂ ಕಾಯುತ್ತಿದ್ದಾರೆ.

Last Updated : Sep 23, 2021, 5:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.