ಕಿರುತೆರೆಯ 'ನಂದಿನಿ' ಧಾರಾವಾಹಿಯ 'ಜನನಿ'ಯಾಗಿ ಮನೆ ಮಾತಾಗಿರುವ ನಿತ್ಯಾ ರಾಮ್ ಆಸ್ಟ್ರೇಲಿಯಾದ ಬ್ಯುಸಿನೆಸ್ ಮ್ಯಾನ್ ಗೌತಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿನ್ನೆಯಷ್ಟೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ಇದೇ ಶುಕ್ರವಾರದಂದು (ಡಿಸೆಂಬರ್ 5 ರಂದು) ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಪರಸ್ಪರ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ರಚಿತಾ ರಾಮ್ ಆತ್ಮೀಯರು ಹಾಗೂ ಕುಟುಂಬಸ್ಥರು ಸೇರಿದಂತೆ ಹಲವು ಇದ್ದಾರೆ.
![nityaram engagement](https://etvbharatimages.akamaized.net/etvbharat/prod-images/kn-bng-01-nityaram-engagement-photo-ka10018_02122019134838_0212f_1575274718_734.png)
![nityaram engagement](https://etvbharatimages.akamaized.net/etvbharat/prod-images/kn-bng-01-nityaram-engagement-photo-ka10018_02122019134838_0212f_1575274718_363.png)
![nityaram engagement](https://etvbharatimages.akamaized.net/etvbharat/prod-images/kn-bng-01-nityaram-engagement-photo-ka10018_02122019134838_0212f_1575274718_66.png)
![nityaram engagement](https://etvbharatimages.akamaized.net/etvbharat/prod-images/kn-bng-01-nityaram-engagement-photo-ka10018_02122019134838_0212f_1575274718_88.jpg)
ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯ ಮೂಲಕ ಬಣ್ಣದ ಪಯಣ ಆರಂಭಿಸಿದ ನಿತ್ಯಾ ರಾಮ್, ಮುಂದೆ ಎರಡು ಕನಸು, ರಾಜಕುಮಾರಿ, ಕರ್ಪೂರದ ಗೊಂಬೆ, ನಂದಿನಿ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಇದರ ಜೊತೆಗೆ ಮುದ್ದು ಮನಸೇ ಎಂಬ ಸಿನಿಮಾದಲ್ಲೂ ಅಭಿನಯಿಸಿದ್ದರು.