ETV Bharat / sitara

ನೆರೆಪೀಡಿತ ಜನರ ಸಹಾಯಕ್ಕೆ ನಿಂತ 'ನಿರ್ಮಲ' ಚಿತ್ರತಂಡ

ಉತ್ತರ ಕರ್ನಾಟಕ ಹಾಗೂ ರಾಜ್ಯದ ನೆರೆಸಂತ್ರಸ್ತರಿಗೆ ಭಾ.ಮ. ಹರೀಶ್​​​​​​​​​​ ನಿರ್ಮಾಣದ 'ನಿರ್ಮಲ' ಚಿತ್ರತಂಡ ಅವಶ್ಯಕ ವಸ್ತುಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಿದೆ. ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಚಿತ್ರತಂಡ ಫಿಲ್ಮ್​ ಚೇಂಬರ್​​​​​​ಗೆ ತಲುಪಿಸಿದೆ.

author img

By

Published : Aug 18, 2019, 4:11 PM IST

ಭಾ.ಮ ಹರೀಶ್

ಬೆಂಗಳೂರು: ಭಾ.ಮ ಹರೀಶ್ ನಿರ್ಮಾಣದ 'ನಿರ್ಮಲ' ಚಿತ್ರತಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಭೀಕರ ಮಳೆಗೆ ತತ್ತರಿಸಿರುವ ಸಂತ್ರಸ್ತರಿಗೆ ಭಾ.ಮ ಹರೀಶ್ ಹಾಗೂ 'ನಿರ್ಮಲ' ಚಿತ್ರತಂಡ ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಅಗತ್ಯ ಸಾಮಗ್ರಿಗಳನ್ನು ಕರ್ನಾಟಕ ವಾಣಿಜ್ಯ ಮಂಡಳಿಗೆ ನೀಡಿದ್ದಾರೆ.

'ನಿರ್ಮಲ' ಚಿತ್ರತಂಡದಿಂದ ನೆರೆಪೀಡಿತರಿಗೆ ಸಹಾಯ

ರಾಜ್ಯದ ಬಹುತೇಕ ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ. ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಹಾಗಾಗಿ ಸಂತ್ರಸ್ತರಿಗೆ ಉಪಯುಕ್ತವಾಗುವಂತ ಹಲವು ಸಾಮಗ್ರಿಗಳನ್ನು ಫಿಲ್ಮ್ ಚೇಂಬರ್​​​ಗೆ ನೀಡಿದ್ದೇವೆ. ಅಲ್ಲದೆ ಇನ್ನೂ ಕೆಲವು ನಿರ್ಮಾಪಕರು ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚುವುದಾಗಿ ತಿಳಿಸಿದ್ದಾರೆ. ಆ ವಸ್ತುಗಳು ಬಂದ ನಂತರ ಒಟ್ಟಿಗೆ ಎಲ್ಲಾ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳುತ್ತದೆ ಎಂದು ನಿರ್ಮಾಪಕ ಭಾ.ಮ ಹರೀಶ್ ಈಟಿವಿ ಭಾರತ್​​​​ಗೆ ತಿಳಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಮಾತನಾಡಿ, ನೆರೆಸಂತ್ರಸ್ತರಿಗೆ ಸಹಾಯ ಮಾಡಲು ಇಚ್ಚಿಸುವವರು ವಾಣಿಜ್ಯ ಮಂಡಳಿಗೆ ಬಂದು ನೆರವು ನೀಡಬಹುದು. ಆ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ವಾಣಿಜ್ಯ ಮಂಡಳಿ ಮಾಡಲಿದೆ. ಅಲ್ಲದೆ ಸಾಮಗ್ರಿಗಳನ್ನು ಅರ್ಹರಿಗೆ ತಲುಪಿಸುವ ಸಲುವಾಗಿ ನೆರೆಪೀಡಿತ ಪ್ರದೇಶದ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ಹೇಳಿದ್ದಾರೆ.

Intro:ಫಿಲ್ಮ್ ಚೇಂಬರ್ ಮಾಜಿ ಕಾರ್ಯದರ್ಶಿ ನಿರ್ಮಾಪಕ‌
ಭಾಮ ಹರೀಶ್ ನಿರ್ಮಾಣದ ನಿರ್ಮಲ ಚಿತ್ರತಂಡ ಉತ್ತರ ಕರ್ನಾಟಕದ ನೆರೆಸಂತ್ರಸ್ತರ ನೆರವಿಗೆನಿಂತಿದ್ದಾರೆ. ಭೀಕರ ಮಳೆಗೆ ತತ್ತರಿಸಿರುವ ಸಂತ್ರಸ್ತರಿಗೆ ಭಾಮ ಹರೀಶ್ ಹಾಗೂ ನಿರ್ಮಲ ಚಿತ್ರತಂಡ ಸುಮಾರು ಎರಡು ಲಕ್ಷರೂಪಾಯಿಯಷ್ಟು
ಅಗತ್ಯ ಸಾಮಗ್ರಿಗಳನ್ನು ಕರ್ನಾಟಕ ವಾಣಿಜ್ಯ ಮಂಡಳಿಗೆ ನೀಡಿದ್ದಾರೆ.

Body:ರಾಜ್ಯದ ಬಹುತೇಕ ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ ಅವರ ನೆರವಿಗೆ ಬರುವುದು ನಮ್ಮ ಕರ್ತವ್ಯ. ಹಾಗಾಗಿ ಸಂತ್ರಸ್ತರಿಗೆ ಉಪಯುಕ್ತವಾಗುವಂತ ಹಲವು ಸಾಮಗ್ರಿಗಳನ್ನು ಫಿಲ್ಮ್ ಚೇಂಬರ್ ಗೆ ನೀಡಿದ್ಧೇವೆ. ಅಲ್ಲದೆ ಇನ್ನೂ ಕೆಲವು ನಿರ್ಮಾಪಕರುಗಳು ಸಂತ್ರಸ್ತರಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ, ಆ ಎಲ್ಲಾ ವಸ್ತುಗಳು ಬಂದ ನಂತ್ರ ಎಲ್ಲಾ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಲು ವಾಣಿಜ್ಯ ಮಂಡಳಿ ಕ್ರಮ ಕೈಗೋಳ್ಳುತ್ತದೆ. ಎಂದು ನಿರ್ಮಾಪಕ ಭಾಮ ಹರೀಶ್ ಈಟಿವಿ ಭಾರತಗೆ ತಿಳಿಸಿದ್ರು.

Conclusion:ಅಲ್ಲದೆ ನೆರೆಸಂತ್ರಸ್ತರಿಗೆ ಸಹಾಯವಮಾಡಲು ಇಚ್ಚಿಸುವವರು ವಾಣಿಜ್ಯ ಮಂಡಳಿಗೆ ಬಂದು ನೆರವು ನೀಡಬಹುದು.ಆ ವಸ್ತುಗಳು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ವಾಣಿಜ್ಯಮಂಡಳಿ ಮಾಡಲಿದೆ.ಅಲ್ಲದೆ ಆ‌ಸಾಮಗ್ರಿಗಳು ಅರ್ಹರಿಗೆ ತಲುಪಿಸುವ ಸಲುವಾಗಿ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ವಾಣಿಜ್ಯಮಂಡಳಿ ಅಧ್ಯಕ್ಷರಾದ ಡಿ ಅರ್ ಜೈರಾಜ್ ತಿಳಿಸಿದ್ರು.

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.