'ತಾಯಿಗೆ ತಕ್ಕ ಮಗ' ಸಿನಿಮಾ ನಂತರ ಅಜಯ್ ರಾವ್ ಅಭಿನಯಿಸುತ್ತಿರುವ ಸಿನಿಮಾ 'ಕೃಷ್ಣ ಟಾಕೀಸ್' ಈ ಸಿನಿಮಾ ಕೂಡಾ ಟೈಟಲ್ ಹಾಗೂ ಪೋಸ್ಟರ್ನಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ.

ಚಿತ್ರತಂಡ ಇದೀಗ 'ನೈಟಿ ಮಾತ್ರ ಹಾಕೋಬೇಡ ಮೇನಕ' ಎಂಬ ಲಿರಿಕಲ್ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದು ಈ ಹಾಡಿನಲ್ಲಿ ಅಜಯ್ ರಾವ್, ಚಿಕ್ಕಣ್ಣ, ಬಿಗ್ಬಾಸ್ ಖ್ಯಾತಿಯ ಲಾಸ್ಯ ಹಾಗೂ ಇನ್ನಿತರರು ಹೆಜ್ಜೆ ಹಾಕಿದ್ದಾರೆ. 'ಮುಸ್ಸಂಜೆ ಮಾತು', 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇದುವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿ ಮೆಚ್ಚಿದ್ದಾರೆ. ಅಜಯ್ ರಾವ್ ಅಭಿನಯದ ಬಹುತೇಕ ಸಿನಿಮಾಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು ಆ ಹಾಡುಗಳು ಇಂದಿಗೂ ಎಲ್ಲರ ಮೋಸ್ಟ್ ಫೇವರೆಟ್ ಎನಿಸಿದೆ.
- " class="align-text-top noRightClick twitterSection" data="">
ನೈಟಿ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ನವೀನ್ ಸಜ್ಜು ಮತ್ತು ಶಶಾಂಕ್ ಶೇಷಗಿರಿ ಧ್ವನಿ ನೀಡಿದ್ದಾರೆ.1955ರಲ್ಲಿ ಲಖ್ನೌ ಚಿತ್ರಮಂದಿರವೊಂದರಲ್ಲಿ ನಡೆದ ಘಟನೆ ಆಧರಿಸಿ ಈ ಚಿತ್ರ ತಯಾರಾಗಿದೆ. ಈ ಸಿನಿಮಾದಲ್ಲಿ ಅಜಯ್ ರಾವ್ ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ವಿಜಯಾನಂದ್ ನಿರ್ದೇಶನವಿದ್ದು ಗೋವಿಂದ ರಾಜು ಬಂಡವಾಳ ಹೂಡಿದ್ದಾರೆ.
