ಚಂದನವನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಿಂಚಿ ಮರೆಯಾದವರು ಹಲವರು. ಅಂತಹ ಅದ್ಭುತ ಪ್ರತಿಭೆಗಳ ಸಾಲಿಗೆ ಸೇರುವ ಶಂಕರ್ ನಾಗ್ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದ ‘ಉತ್ಸವ’ ಎಂಬ ಸಿನಿಮಾದಲ್ಲಿ ನೀನಾ ಗುಪ್ತಾ ಜೊತೆ ಸಹನಟನಾಗಿ ಶಂಕರ್ ನಾಗ್ ಕೂಡ ಅಭಿನಯಿಸಿದ್ದರು.
- " class="align-text-top noRightClick twitterSection" data="
">
ಉತ್ಸವ ಸಿನಿಮಾದಲ್ಲಿ ಶಂಕರ್ ನಾಗ್ ಜತೆ ನಿಂತಿರುವ ಸ್ಟಿಲ್ ಒಂದನ್ನು ಬಾಲಿವುಡ್ ನಟಿ ನೀನಾ ಗುಪ್ತಾ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶಂಕರ್ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’ ಎಂದು ಅವರು ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ.
ಶಂಕರ್ ನಾಗ್ ಹಿಂದಿಯ ಉತ್ಸವ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಶಶಿ ಕಪೂರ್ ಸಿನಿಮಾ ನಿರ್ಮಾಣ ಮಾಡಿದ್ದರು. ರೇಖಾ ಚಿತ್ರದ ನಾಯಕಿಯಾಗಿದ್ದರು. ಈ ಸಿನಿಮಾದಲ್ಲಿ ನೀನಾ ಗುಪ್ತಾ ಕೂಡ ನಟಿಸಿದ್ದರು.
ನೀನಾ ಗುಪ್ತಾ ಅವರ ಸಚ್ ಕಹೂ ತೋ ಆಟೋಬಯೋಗ್ರಫಿಯಲ್ಲಿಯೂ ಅವರು, ಶಂಕರ್ ನಾಗ್ ಬಗ್ಗೆ ಬರೆದುಕೊಂಡಿದ್ದಾರೆ. 1984ರಲ್ಲಿ ಶಂಕರ್ ನಾಗ್ ಅವರನ್ನು ಉತ್ಸವ ಸೆಟ್‍ನಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ನನ್ನ ಅತ್ಯುತ್ತಮ ಗೆಳೆಯ. ಒಳ್ಳೆಯ ವ್ಯಕ್ತಿ. ತುಂಬಾ ಜನಪ್ರಿಯರಾಗಿದ್ದರು. ಇದು ಅವರ ದೊಡ್ಡ ಗುಣ ಎಂದು ನೀನಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.