ETV Bharat / sitara

ಶ್ರೇಯಸ್ ನಟನೆಯ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್ - ನಿರ್ದೇಶಕ ನಂದ ಕಿಶೋರ್

'ಪಡ್ಡೆ ಹುಲಿ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ಶ್ರೇಯಸ್ ನಟನೆಯ ಚಿತ್ರವೊಂದನ್ನು ನಿರ್ದೇಶಕ ನಂದ ಕಿಶೋರ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಪೂರ್ತಿಯಾದ ಬಳಿಕವೇ ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ನಂದ ಕಿಶೋರ್ ಹೇಳಿಕೊಂಡಿದ್ದಾರೆ.

Nanda Kishore Going To Direct Shreyas Manju New Movie
ಮುಂದಿನ 15 ದಿನಗಳಲ್ಲಿ ಶ್ರೇಯಸ್ ನಟನೆಯ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್
author img

By

Published : Apr 7, 2021, 1:04 PM IST

ಕಳೆದ ಮೂರು ವರ್ಷಗಳಿಂದ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದ ನಿರ್ದೇಶಕ ನಂದ ಕಿಶೋರ್, ಇದೀಗ 'ಪಡ್ಡೆ ಹುಲಿ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ಶ್ರೇಯಸ್ ನಟನೆಯ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ನಟ ಶ್ರೇಯಸ್ ಮಂಜು ನಟನೆಯ ಚಿತ್ರದ ಚಿತ್ರೀಕರಣ ಮುಗಿಸಿ, ಆನಂತರವಷ್ಟೇ ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ನಂದ ಕಿಶೋರ್ ಹೇಳಿಕೊಂಡಿದ್ದಾರೆ. ನಂದ ಕಿಶೋರ್ ಪೊಗರು ನಂತರ `ದುಬಾರಿ' ಚಿತ್ರವನ್ನು ನಿರ್ದೇಶಿಸಬೇಕಿತ್ತು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಸಹ ಶುರುವಾಗಬೇಕಿತ್ತು. ಈ ಮಧ್ಯೆ ಶಿವರಾಜ್​ಕುಮಾರ್ ಮತ್ತು ನಿಖಿಲ್ ಕುಮಾರ್ ಅಭಿನಯದ ಚಿತ್ರವೊಂದನ್ನು ನಂದಕಿಶೋರ್ ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು. ಕಳೆದೊಂದು ವಾರದಿಂದ ಶ್ರೇಯಸ್ ಮಂಜು ಅಭಿನಯದ ಹೊಸ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಈ ಮೂವರಲ್ಲಿ ನಂದಕಿಶೋರ್, ಮೊದಲಿಗೆ ಯಾವ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ದುಬಾರಿ ಮತ್ತು ಶಿವರಾಜ್​ ಕುಮಾರ್ ಅಭಿನಯಿಸಬೇಕಿರುವ ಚಿತ್ರಗಳು ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿವೆಯಂತೆ. ಶ್ರೇಯಸ್ ಅಭಿನಯಿಸುತ್ತಿರುವ ಚಿತ್ರದ ಸ್ಕ್ರಿಪ್ಟಿಂಗ್ ಮುಗಿದಿರುವುದರಿಂದ ಈ ಚಿತ್ರವನ್ನು ಮೊದಲು ಶುರು ಮಾಡಲಿದ್ದಾರೆ. ಈ ಚಿತ್ರ ಮುಂದಿನ 15 ದಿನಗಳಲ್ಲಿ ಶುರುವಾಗಲಿದ್ದು, ಬೆಂಗಳೂರಿನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆಯಂತೆ. ಇದೊಂದು ಯೂಥ್‍ಫುಲ್ ಚಿತ್ರವಾಗಿದ್ದು, ಶ್ರೇಯಸ್‍ಗೆ ನಾಯಕಿಯಾಗಿ `ಏಕ್ ಲವ್ ಯಾ' ಚಿತ್ರದ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಗುಜ್ಜಾಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಧರ್ಮವಿಶ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಓದಿ: ಶೇ.100ರಷ್ಟು ಅವಕಾಶ ನೀಡಿದ್ರೆ ಮಾತ್ರ 'ಸಲಗ', 'ಕೋಟಿಗೊಬ್ಬ 3' ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.